Viral Boy: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ 19 ನಿಮಿಷ 34 ಸೆಕೆಂಡ್‌ಗಳ ಎಂಎಂಎಸ್‌ನಲ್ಲಿ ಕಾಣಿಸಿಕೊಂಡಿದ್ದ ಎನ್ನಲಾದ ಯುವಕ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾನೆ. ಆತನನ್ನು ಗುರುತಿಸಿದ ಕೆಲವರು ವಿಡಿಯೋ ಮಾಡಿದ್ದು, ಈ ಘಟನೆಯು ನೆಟ್ಟಿಗರ ನಡುವೆ ಚರ್ಚೆಗೆ ಕಾರಣವಾಗಿದೆ.
ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ 19 ನಿಮಿಷ 34 ಸೆಕೆಂಡ್ ಎಂಎಂಎಸ್ ಸಂಚಲನವನ್ನು ಸೃಷ್ಟಿಸಿದೆ. ಕೆಲವರು ಈ ವಿಡಿಯೋನ್ನಿಟ್ಟುಕೊಂಡು ಟ್ರೋಲ್ ಮಾಡಲಾರಂಭಿಸಿದ್ದಾರೆ. ಇದೀಗ ಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಎನ್ನಲಾದ ಯುವಕ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾನೆ.
25
ಮೆಟ್ರೋ ನಿಲ್ದಾಣ
ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ವೈರಲ್ ವಿಡಿಯೋ ಎನ್ನಲಾದ ಯುವಕ ನಿಂತಿದ್ದಾನೆ. ಮತ್ತೊಂದು ಬದಿಯ ಪ್ಲಾಟ್‌ಫಾರಂನಲ್ಲಿ ನಿಂತಿದ್ದ ಕೆಲವರು ಯುವಕನ ವಿಡಿಯೋ ಮಾಡಿದ್ದಾರೆ. ಇವನು ಅದೇ ಯುವಕ ಅಲ್ಲವಾ ಎಂದು ಮಾತನಾಡಿಕೊಂಡಿದ್ದಾರೆ. ಭಯದಿಂದಲೇ ಈ ವಿಡಿಯೋ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
35
ವಿಡಿಯೋ ವೈರಲ್
19 ನಿಮಿಷ 34 ಸೆಕೆಂಡ್ ಎಂಎಂಎಸ್‌ನಲ್ಲಿ ಜೋಡಿಯೊಂದು ಎಲ್ಲಾ ಸಭ್ಯತೆಗಳನ್ನು ಮೀರಿ ನಡೆದುಕೊಂಡಿತ್ತು. ನಾಲ್ಕು ಗೋಡೆ ಮತ್ತು ಅವರಿಬ್ಬರ ನಡುವೆ ರಹಸ್ಯವಾಗಿರಬೇಕಿದ್ದ ವಿಷಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜೋಡಿಯ ಕುರಿತು ಚರ್ಚೆಗಳು ನಡೆಯುತ್ತಿವೆ.
ಸದ್ಯ ಮೆಟ್ರೋ ನಿಲ್ದಾಣದಲ್ಲಿನ ಮಾಡಿರುವ ವಿಡಿಯೋದಲ್ಲಿರೋದು 19 ನಿಮಿಷ 34 ಸೆಕೆಂಡ್‌ನ ಯುವಕ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು, ತಪ್ಪು ಆಗಿರಬಹುದು. ಅದನ್ನು ತಿದ್ದಿಕೊಂಡು ಜೀವನ ನಡೆಸುವ ಹಕ್ಕು ಆತನಿಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಸನ್ನಿ ಲಿಯೋನ್ ಅವರನ್ನು ಒಪ್ಪಿಕೊಂಡಿರುವ ನಾವು, ಇದನ್ನು ಸಹ ಕ್ಷಮಿಸಬೇಕು ಅಂತಾನೂ ಹೇಳಿದ್ದಾರೆ.
ವಿಡಿಯೋ ಮಾಡುತ್ತಿರುವ ವ್ಯಕ್ತಿ, ಆ ಕಡೆ ನಿಂತಿರೋನು ಅವನೇ ಅಲ್ಲವಾ ಎಂದು ಪಕ್ಕದಲ್ಲಿ ನಿಂತಿದ್ದವನಿಗೆ ಕೇಳುತ್ತಾನೆ. ಅದಕ್ಕೆ ಪಕ್ಕದಲ್ಲಿದ್ದವ ವಿಡಿಯೋ ಸ್ವಲ್ಪ ಝೂಮ್ ಮಾಡುವಂತೆ ಹೇಳುತ್ತಾನೆ. ಝೂಮ್ ಮಾಡಿದ್ಮೇಲೆ ಹೌದು ಅವನೇ ಅವನೇ ಅಂತಾರೆ. ನಾವು ವಿಡಿಯೋ ಮಾಡ್ತಿರೋದು ಅವನಿಗೆ ಗೊತ್ತಾಯ್ತು ಅಂತೇಳಿ ಮೊಬೈಲ್ ಬಚ್ಚಿಟ್ಟುಕೊಳ್ಳುತ್ತಾರೆ.