ಕೆಲವರ ಮನೆಗೆ ಕಾಲಿಟ್ಟಾಗ ಉದ್ವೇಗ, ನಕಾರಾತ್ಮಕತೆ ಹೆಚ್ಚುತ್ತಾ?

First Published | Jan 23, 2024, 5:30 PM IST

ಕೆಲವೊಮ್ಮೆ ಏನಾಗುತ್ತೆ ಅಂದ್ರೆ ಹೊರಗಡೆಯಿಂದ ಸಂತೋಷವಾಗಿ ಬಂದ ನಾವು ಮನೆಯನ್ನು ಪ್ರವೇಶಿಸಿದ ಕೂಡಲೇ ಉದ್ವಿಗ್ನರಾಗಲು ಪ್ರಾರಂಭಿಸುತ್ತೇವೆ. ಜೊತೆಗೆ ಕೋಪವೂ ಬರುತ್ತೆ, ಹತಾಶೆಯ ಭಾವನೆಯೂ ಮೂಡುತ್ತದೆ. ಇದಕ್ಕೆ ಕಾರಣ ವಾಸ್ತು ಧೋಷವೂ ಇರಬಹುದು. 
 

ಯಾವುದೇ ವ್ಯಕ್ತಿಗೆ, ಮನೆ (home) ವಿಶ್ವದ ಅತ್ಯಂತ ನೆಮ್ಮದಿ ನೀಡುವ ಸ್ಥಳವಾಗಿದೆ. ನೀವು ದಿನವಿಡೀ ಎಷ್ಟು ತಿರುಗಾಡಿದರೂ, ಮನೆಗೆ ಹೋದಾಗ, ತುಂಬಾ ಆರಾಮವಾಗಿರುತ್ತೀರಿ. ಮನೆಯನ್ನು ಪ್ರವೇಶಿಸಿದ ತಕ್ಷಣ, ಅರ್ಧದಷ್ಟು ಆಯಾಸ ಮಾಯವಾಗಿ ಬಿಡುತ್ತೆ. ಆದರೆ ಕೆಲವು ಮನೆಗೆ ಪ್ರವೇಶಿಸಿದ ಕೂಡಲೇ ವಿಚಿತ್ರವಾದ ಉದ್ವೇಗ ಶುರುವಾಗುತ್ತದೆ.

ನಿಮಗೂ ಈ ರೀತಿ ಆಗಿರಬಹುದು, ಹೊರಗಡೆಯಿಂದ ಖುಷಿಯಾಗಿ ಬಂದ ನೀವು ಮನೆಯೊಳಗೆ ಬಂದ ತಕ್ಷಣ, ವಿಚಿತ್ರವಾದ ನಕಾರಾತ್ಮಕತೆಯನ್ನು (Neagtivity) ಅನುಭವಿಸುತ್ತೀರಿ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಮನೆಯೊಳಗೆ ಉಳಿಯಲು ಸಹ ಇಷ್ಟವಾಗೋದಿಲ್ಲ. ಮನೆಯೊಳಗೆ ವಾಸಿಸುತ್ತಿದ್ದರೂ, ವಿಚಿತ್ರ ಒತ್ತಡ ಉಂಟಾಗುತ್ತದೆ. ನಿಮಗೂ ಅದೇ ಆಗುತ್ತಿದ್ದರೆ ಅದು ಮನೆಯ ವಾಸ್ತು ದೋಷದಿಂದಾಗಿರಬಹುದು. 

Tap to resize

ನೀವು ಮನೆಯನ್ನು ಪ್ರವೇಶಿಸಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಉದ್ವಿಗ್ನತೆ ಉಂಟುಮಾಡುವ ಅಂತಹ ಯಾವ ದೋಷಗಳು ಮನೆಯಲ್ಲಿ ಕಾಡುತ್ತಿವೆ ಎಂದು ನೀವು ತಿಳಿಯಲು ಬಯಸಿದ್ರೆ, ಲೇಖನವನ್ನು ಪೂರ್ತಿಯಾಗಿ ಓದಿ. 

ಹಳೆಯ ಪೀಠೋಪಕರಣಗಳು (Old Furniture)
ಸಾಮಾನ್ಯವಾಗಿ, ಮನೆಗಳ ಪ್ರವೇಶದ್ವಾರದಲ್ಲಿ ಡ್ರಾಯಿಂಗ್ ರೂಮ್ ಇರುತ್ತದೆ. ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಡ್ರಾಯಿಂಗ್ ರೂಮ್ ಗಳನ್ನು ನಿರ್ಮಿಸುತ್ತಾರೆ. ಯಾವುದೇ ಸಮಸ್ಯೆ ಇಲ್ಲ. ಆದರೆ ಆ ಡ್ರಾಯಿಂಗ್ ರೂಮಿನಲ್ಲಿ ಯಾವುದೇ ಹಳೆಯ ಅಥವಾ ಮುರಿದ ಪೀಠೋಪಕರಣಗಳು ಇದ್ದರೆ, ಅದನ್ನು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಜನರ ಮನಸ್ಸಿನಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ. ನಿಮ್ಮ ಮನೆಯ ಡ್ರಾಯಿಂಗ್ ರೂಮ್ನಲ್ಲಿ ಇದೇ ರೀತಿಯ ಮುರಿದ ಪೀಠೋಪಕರಣಗಳಿದ್ದರೆ, ಕೂಡಲೇ ಅದನ್ನು ತೆಗೆದು ಹಾಕಿ. 

ಮೆಟ್ಟಿಲು
ಅನೇಕ ಬಾರಿ ಮನೆಗಳಲ್ಲಿ ಪ್ರವೇಶದ್ವಾರದ ಮುಂದೆ ಮೆಟ್ಟಿಲುಗಳನ್ನು (steps) ನಿರ್ಮಿಸಲಾಗಿರುತ್ತದೆ. ಹೀಗಿರೋವಾಗ ಬಾಗಿಲು ತೆರೆದ ತಕ್ಷಣ, ವ್ಯಕ್ತಿಯ ಕಣ್ಣುಗಳು ಮೊದಲು ಮೆಟ್ಟಿಲುಗಳಿಗೆ ಹೋಗುತ್ತವೆ. ಇದು ಒಂದು ರೀತಿಯ ನಕಾರಾತ್ಮಕ ಶಕ್ತಿಯನ್ನು (Negative Energy) ಸಹ ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ಮನೆಗೆ ಪ್ರವೇಶಿಸಿದ ಕೂಡಲೇ ಉದ್ವಿಗ್ನತೆ ಪ್ರಾರಂಭವಾಗುತ್ತದೆ. ನಿಮಗೂ ಇದೇ ಆಗಿದ್ದರೆ, ನೀವು ಮೆಟ್ಟಿಲ ಮುಂದೆ ಒಂದು ಅಡೆತಡೆಯನ್ನು ಹಾಕಬೇಕು. ಇದರಿಂದ ಮನೆಗೆ ಬರುವ ವ್ಯಕ್ತಿಯ ಕಣ್ಣು ಮೆಟ್ಟಿಲ ಕಡೆಗೆ ಹೋಗೋದಿಲ್ಲ.
 

ತುಂಬಾ ಕತ್ತಲೆ (Darkness)
ಮನೆಗೆ ಪ್ರವೇಶಿಸಿದ ತಕ್ಷಣ ಪ್ರವೇಶದ್ವಾರದಲ್ಲಿ ಹೆಚ್ಚು ಕತ್ತಲೆ ಇದ್ದರೆ, ಅದು ಒಂದು ರೀತಿಯ ನಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ಮನೆಯ ಒಳಗೆ ಬರಲು ಬಯಸುವುದಿಲ್ಲ. ಇದು ಅವರಿಗೆ ವಿಚಿತ್ರ ಉದ್ವೇಗವನ್ನು ನೀಡುತ್ತದೆ. ಇದು ಮಾತ್ರವಲ್ಲ, ಮನೆಯ ಪ್ರವೇಶದ್ವಾರದ ಗೋಡೆಗಳ ಮೇಲೆ ತೇವವಾದ ಅಥವಾ ಬಿರುಕು ಬಿಟ್ಟ ಪ್ಲಾಸ್ಟರ್ ಇರೋದು ಸಹ ಒಳ್ಳೆಯದಲ್ಲ. ಈ ಕಾರಣದಿಂದಾಗಿ, ವ್ಯಕ್ತಿಯು ಮನೆಗೆ ಪ್ರವೇಶಿಸಿದ ಕೂಡಲೇ ಉದ್ವೇಗ ಅನುಭವಿಸಲು ಪ್ರಾರಂಭಿಸುತ್ತಾನೆ.

ಶೌಚಾಲಯದ ಬಾಗಿಲು (bathroom door)
ಕೆಲವು ಮನೆಗಳನ್ನು ಮನೆಯ ಪ್ರವೇಶ ದ್ವಾರದ ಮುಂದೆ ಶೌಚಾಲಯದ ಬಾಗಿಲು ಇರುವ ರೀತಿಯಲ್ಲಿ ನಿರ್ಮಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇದು ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ. ನಿಮ್ಮ ಮನೆಯಲ್ಲಿ ಶೌಚಾಲಯದ ಬಾಗಿಲನ್ನು ಇದೇ ರೀತಿಯಲ್ಲಿ ತಯಾರಿಸಿದರೆ, ಆ ಶೌಚಾಲಯದ ಬಾಗಿಲಿನ ದಿಕ್ಕನ್ನು ಬದಲಾಯಿಸಲು ಪ್ರಯತ್ನಿಸಿ. ಇದು ಸಾಧ್ಯವಾಗದಿದ್ದರೆ, ಶೌಚಾಲಯದ ಬಾಗಿಲು ಕಾಣದಂತೆ ಸ್ಕ್ರೀನ್ ಹಾಕಬೇಕು. 

click me!