ಜೇಬಿನಲ್ಲಿ ಹಣ ನಿಲ್ಲೋದೆ ಇಲ್ವ? ಕೆಟ್ಟ ದೃಷ್ಟಿ ಬಿದ್ದಿದ್ಯಾ? ಹಾಗಿದ್ರೆ ಈ ಸಲಹೆ ಪಾಲಿಸಿ

Published : Jan 20, 2024, 06:25 PM ISTUpdated : Jan 21, 2024, 03:09 PM IST

ಅದೇನೆ ಮಾಡಿದ್ರೂ ನಿಮ್ಮ ಕೈಯಲ್ಲಿ ಹಣ ಉಳಿಯೋದೆ ಇಲ್ವಾ? ಹಾಗಿದ್ರೆ ಇಲ್ಲಿದೆ ಅದಕ್ಕೊಂದು ಪರಿಹಾರ. ಕರಿಮೆಣಸಿನ ಸಣ್ಣ ಪರಿಹಾರವು ನಿಮಗೆ ಬಹಳ ಪ್ರಯೋಜನ ನೀಡಲಿದೆ. ಇದಕ್ಕಾಗಿ, ನೀವು ಪ್ರತಿದಿನ ದೀಪದಲ್ಲಿ ಐದು ಕಾಳು ಕರಿಮೆಣಸನ್ನು ಸುಡಬೇಕು. ಇದು ಹಣದ ಕೊರತೆಯನ್ನು ನಿವಾರಿಸುತ್ತದೆ.   

PREV
16
ಜೇಬಿನಲ್ಲಿ ಹಣ ನಿಲ್ಲೋದೆ ಇಲ್ವ? ಕೆಟ್ಟ ದೃಷ್ಟಿ ಬಿದ್ದಿದ್ಯಾ? ಹಾಗಿದ್ರೆ ಈ ಸಲಹೆ ಪಾಲಿಸಿ

ಸಾಮಾನ್ಯವಾಗಿ ಮಸಾಲೆಯಾಗಿ ಬಳಸಲಾಗುವ ಕರಿಮೆಣಸು ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಅನ್ನೋದು ನಿಮಗೆತಿಳಿದಿದೆಯೇ?. ಕರಿಮೆಣಸನ್ನು (black pepper) ಸಣ್ಣ ರೋಗಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ, ಹಾಗೆಯೇ ಕರಿಮೆಣಸಿನೊಂದಿಗೆ ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ದೈನಂದಿನ ಜೀವನದಲ್ಲಿನ ನೀವು ಅನುಭವಿಸುವಂತಹ ಸಮಸ್ಯೆಗಳನ್ನು ಸಹ ನಿವಾರಿಸಬಹುದು ಗೊತ್ತಾ? 

26

ನಿಮ್ಮ ಜೇಬಿನಲ್ಲಿ ಹಣವಿಲ್ಲದಿದ್ದರೆ ಅಥವಾ ನಿಮ್ಮ ಮೇಲೆ ಕೆಟ್ಟ ಕಣ್ಣು ಬಿದ್ದಿದ್ದರೆ, ಕರಿಮೆಣಸಿನ ಈ ಪರಿಹಾರಗಳೊಂದಿಗೆ ನೀವು ಅದನ್ನು ನಿವಾರಿಸಬಹುದು. ಜ್ಯೋತಿಷ್ಯರು ಕರಿಮೆಣಸಿನ ಯಾವ ಪರಿಹಾರಗಳು ಜನರ ಜೀವನಕ್ಕೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ನೀವು ಇದನ್ನ ಪಾಲಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು.

36

ಜೇಬಿನಲ್ಲಿ ನಿಲ್ಲದೇ ಇದ್ದರೆ ಈ ಪರಿಹಾರವನ್ನು ಮಾಡಿ: ನಿಮ್ಮ ಜೇಬಿನಲ್ಲಿ ಹಣ ನಿಲ್ಲದೇ ಇದ್ದರೆ, ಮತ್ತು ನಿಮ್ಮ ಬಳಿ ಹಣ (money problem)ಯಾವಾಗಲೂ ತುಂಬಿರಬೇಕು ಎಂದು ನೀವು ಬಯಸಿದ್ರೆ, ನೀವು ಈ ಸಣ್ಣ ಕ್ರಮವನ್ನು ಅನುಸರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ನೀವು ಪ್ರತಿದಿನ ಐದು ಕಾಳು ಕರಿಮೆಣಸನ್ನು ದೀಪದಲ್ಲಿ ಸುಡಬೇಕು. ಇದು ಹಣದ ಕೊರತೆಯನ್ನು ನಿವಾರಿಸುತ್ತದೆ.

46

ಕೆಟ್ಟ ದೃಷ್ಟಿಯನ್ನು ನಿವಾರಿಸಲು: ನಿಮಗೆ ಕೆಟ್ಟ ದೃಷ್ಟಿ ಬಿದ್ದಿದೆ (evil eye) ಎಂದು ಅನಿಸಿದರೆ ಮತ್ತು ಆ ಕಾರಣದಿಂದಾಗಿ ನಿಮ್ಮ ಕುಟುಂಬದ ಜನರ ಆರೋಗ್ಯವು ಪದೇ ಪದೇ ಹದಗೆಡುತ್ತಿದೆ ಎಂದು ನಿಮಗೆ ಅನಿಸಿದರೆ ಆವಾಗಲೂ ಸಹ ಕರಿಮೆಣಸು ನಿಮ್ಮ ಸಹಾಯಕ್ಕೆ ಬರುತ್ತೆ. ಇದಕ್ಕಾಗಿ, ನೀವು ಐದು ಕಾಳು ಕರಿಮೆಣಸನ್ನು ನಿಮ್ಮ ಮೇಲೆ ಅಥವಾ ಯಾವ ವ್ಯಕ್ತಿಯ ಮೇಲೆ ದೃಷ್ಟಿ ಬಿದ್ದಿದೆಯೋ ಅವರ ಮೇಲೆ ಏಳು ಬಾರಿ ತಿರುಗಿಸಬೇಕು. ಇದನ್ನು ಏಳು ಬಾರಿ ತಿರುಗಿಸಿ ಮತ್ತು ದೀಪದಿಂದ ಅವುಗಳನ್ನು ಸುಡಿ, ಇದು ಕೆಟ್ಟ ದೃಷ್ಟಿಯನ್ನು ತೆಗೆದುಹಾಕುತ್ತದೆ.

56

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಲು ಬಯಸಿದರೆ….
ನೀವು ಕೆಲವು ಕೆಲಸಗಳನ್ನು ಮಾಡಲು ಬಯಸಿದರೆ ಮತ್ತು ಅದರಲ್ಲಿ ಯಾವುದೇ ರೀತಿಯ ಅಡೆತಡೆ ಕಂಡು ಬಂದರೆ, ಕರಿಮೆಣಸನ್ನು ದೀಪದಿಂದ ಸುಡಿರಿ. ಇದನ್ನು ಮಾಡುವುದರಿಂದ, ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತೆ. ಜೀವನದಲ್ಲಿನ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕತೆ ಉಳಿಯುತ್ತದೆ ಮತ್ತು ಎಲ್ಲಾ ರೀತಿಯ ಕೆಲಸಗಳು ಪೂರ್ಣಗೊಳ್ಳುತ್ತವೆ.

66

ಶನಿಯ ದುಷ್ಪರಿಣಾಮ ನಿವಾರಿಸಲು: ಜ್ಯೋತಿಷ್ಯದ ಪ್ರಕಾರ, ಶನಿಯ ದುಷ್ಪರಿಣಾಮಗಳನ್ನು (effect of Shani) ತೆಗೆದುಹಾಕಲು ಕರಿಮೆಣಸು ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇದಲ್ಲದೆ, ನೀವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಲು ಬಯಸಿದರೆ, ಮನೆಯ ಮುಖ್ಯ ದ್ವಾರದಲ್ಲಿ ಎರಡು ಕರಿಮೆಣಸನ್ನು ದೀಪದಿಂದ ಸುಡಬೇಕು, ಇದು ಯಶಸ್ಸಿನ ಎಲ್ಲಾ ಮಾರ್ಗಗಳನ್ನು ತೆರೆಯುತ್ತದೆ.

Read more Photos on
click me!

Recommended Stories