ವಾಸ್ತು ಪ್ರಕಾರ, ಯಾವ ರೀತಿಯ ವಾಚ್ ಧರಿಸಿದ್ರೆ ಶುಭವಾಗುತ್ತೆ ಗೊತ್ತಾ?

First Published | Jun 9, 2023, 4:15 PM IST

ವಾಸ್ತು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ವಿಷಯಕ್ಕೂ ಸಂಬಂಧಿಸಿದೆ. ಇಲ್ಲಿ ನಾವು ಕೈಯಲ್ಲಿ ಧರಿಸಿರುವ ಗಡಿಯಾರದ ಬಗ್ಗೆ ತಿಳಿಯೋಣ. ವಾಸ್ತು ಪ್ರಕಾರ, ಗಡಿಯಾರವನ್ನು ಯಾವ ಕೈಯಲ್ಲಿ ಧರಿಸಬೇಕು ಮತ್ತು ಯಾವ ಕೈಯಲ್ಲಿ ಧರಿಸಬಾರದು ಎಂದು ತಿಳಿಯೋಣ. 
 

ಹೆಚ್ಚಿನ ಜನರು ಗಡಿಯಾರಗಳನ್ನು(Watch) ಧರಿಸಲು ಇಷ್ಟಪಡುತ್ತಾರೆ. ನಾವು ವೃತ್ತಿಪರ ಜಗತ್ತಿಗೆ ಕಾಲಿಟ್ಟಾಗ, ಗಡಿಯಾರವು ಸಮಯವನ್ನು ಹೇಳುವುದಲ್ಲದೆ ಸಮಯದ ಮೌಲ್ಯವನ್ನು ಸಹ ಕಲಿಸುತ್ತೆ. ಹಾಗೆಯೇ, ಗಡಿಯಾರಕ್ಕೆ ಸಂಬಂಧಿಸಿದ ಅನೇಕ ವಾಸ್ತು ನಿಯಮಗಳು ಸಹ ಕಾಲಕಾಲಕ್ಕೆ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ.ಈ ವಾಸ್ತು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಜ್ಯೋತಿಷ್ಯರು ಹೇಳುತ್ತಾರೆ.

p>

ಗಡಿಯಾರಕ್ಕೂ ವಾಸ್ತುವಿಗೂ ಇರುವ ಸಂಬಂಧವೇನು?: ಗಡಿಯಾರವು ವಾಸ್ತು ಮತ್ತು ಗ್ರಹಗಳಿಗೆ ಸಂಬಂಧಿಸಿದೆ, ಇದರ ಪರಿಣಾಮವು ಮಂಗಳಕರ ಮತ್ತು ಅಶುಭ ರೂಪದಲ್ಲಿ ಕಂಡುಬರುತ್ತೆ. ಉದಾಹರಣೆಗೆ, ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ಸಂದರ್ಶನ(Interview) ನೀಡುವಾಗ ಗಡಿಯಾರವನ್ನು ಧರಿಸುವ ಮೊದಲು ನಿಯಮಗಳನ್ನು ತಿಳಿದುಕೊಳ್ಳಿ.

Tap to resize

ಹಾಗೆಯೇ, ನೀವು ವಿದೇಶದಲ್ಲಿ(Foriegn) ಉದ್ಯೋಗವನ್ನು ಹುಡುಕುತ್ತಿದ್ದರೆ ಮತ್ತು ಹ್ಯಾಂಡ್ ವಾಚ್ ಧರಿಸಿ ಪ್ರಯಾಣ ಮಾಡುತ್ತಿದ್ದರೆ, ವಾಸ್ತು ಸಹ ಅವಶ್ಯಕವಾಗಿದೆ. ಇದು  ವಿಚಿತ್ರವಾಗಿ ಕಂಡರೂ, ಗಡಿಯಾರದ ವಾಸ್ತು ಸರಿಯಾಗಿದ್ದರೆ, ಕೆಲಸದ ಅಡೆತಡೆಯನ್ನು ತೆಗೆದುಹಾಕಬಹುದು ಎಂಬುದು ನಿಜ. 

ಹ್ಯಾಂಡ್ ವಾಚ್ ಧರಿಸಲು ವಾಸ್ತು ನಿಯಮಗಳು ಯಾವುವು?: ಗಡಿಯಾರದ ಡಯಲ್(Dial) ತುಂಬಾ ದೊಡ್ಡದಾಗಿರಬಾರದು ಅಥವಾ ತುಂಬಾ ಚಿಕ್ಕದಾಗಿರಬಾರದು. ಇದರ ಹಿಂದೆ ಸರಿಯಾದ ತರ್ಕವೂ ಇದೆ. ದೊಡ್ಡ ಡಯಲ್ ಮಣಿಕಟ್ಟನ್ನು ಸಂಪೂರ್ಣವಾಗಿ ಸುತ್ತುವರಿಯುತ್ತೆ, ಮಣಿಕಟ್ಟಿನ ಮೇಲೆ ಒತ್ತಡ ಹೇರುತ್ತೆ, ಹಾಗಾಗಿ ಇದು ಅಶುಭವಾಗಿದೆ. 
 

ಪ್ರತಿಯೊಂದು ಗ್ರಹವು(Planet) ದೇಹದ ಪ್ರತಿಯೊಂದು ಭಾಗದ ಮೇಲೆ ನಿಯಂತ್ರಣವನ್ನು ಹೊಂದಿದೆ. ಹಾಗೆಯೇ, ರಾಹು ಮಣಿಕಟ್ಟಿನ ಮೇಲೆ ಪರಿಣಾಮ ಬೀರುತ್ತಾನೆ. ಆದ್ದರಿಂದ, ಕೈ ಗಡಿಯಾರದಿಂದ ಮಣಿಕಟ್ಟನ್ನು ಒತ್ತುವುದು ರಾಹುವಿನ ಕೆಟ್ಟ ಪರಿಣಾಮವನ್ನು ಹೆಚ್ಚಿಸುತ್ತೆ ಮತ್ತು ಅನೇಕ ಅಡೆತಡೆಗಳನ್ನು ಉಂಟುಮಾಡುತ್ತೆ. 
 

ಹಾಗೆಯೇ, ಡಯಲ್ ತುಂಬಾ ಚಿಕ್ಕದಾಗಿದ್ದರೆ, ಸಮಯವನ್ನು ನೋಡುವುದು ಕಷ್ಟವಾಗುವುದಲ್ಲದೆ, ರಾಹು ವೇಗವಾಗಿರುತ್ತಾನೆ. ಸಣ್ಣ ಡಯಲ್ ಅಗತ್ಯಕ್ಕೆ ಅನುಗುಣವಾಗಿ ಮಣಿಕಟ್ಟಿನ ಮೇಲೆ ಒತ್ತಡ(Pressure) ಹೇರಲು ಸಾಧ್ಯವಾಗೋದಿಲ್ಲ, ಇದು ರಾಹುವನ್ನು ಹಾಳುಮಾಡುತ್ತೆ.ಆದ್ದರಿಂದ, ಮಧ್ಯಮ ಆಕಾರದ ಕೈ ಗಡಿಯಾರದ ಡಯಲನ್ನು ಧರಿಸಬೇಕು. ಇದು ರಾಹುವನ್ನು ಮಂಗಳಕರವಾಗಿಸುತ್ತೆ. 
 

ಗಡಿಯಾರದ ಬಣ್ಣದ ಬಗ್ಗೆ ಮಾತನಾಡೋದಾದ್ರೆ , ರಾಶಿಯ ಬಣ್ಣಕ್ಕೆ ಅನುಗುಣವಾಗಿ ಗಡಿಯಾರದ ಬಣ್ಣವನ್ನು ಧರಿಸಿ.ದುರ್ಬಲವಾಗಿರುವ ಗ್ರಹದ ಆದ್ಯತೆಯ ಬಣ್ಣಕ್ಕೆ ಅನುಗುಣವಾಗಿ ಗಡಿಯಾರದ ಬಣ್ಣವನ್ನು (Colors) ಸಹ ಆಯ್ಕೆ ಮಾಡಬಹುದು.ಇನ್ನು ಮುಂದೆ ವಾಚ್ ಧರಿಸುವಾಗ ಈ ನಿಯಮಗಳನ್ನು ಪಾಲಿಸಿ. 

Latest Videos

click me!