ಹಣ ಖರ್ಚು ಮಾಡದೆಯೂ ಮನೆ ವಾಸ್ತು ಸರಿ ಮಾಡಬಹುದು!

First Published | Jun 2, 2023, 5:42 PM IST

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ವಾಸ್ತು ದೋಷಗಳಿಂದಾಗಿ, ವ್ಯಕ್ತಿ ದೈಹಿಕ, ಮಾನಸಿಕ ಅಥವಾ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತೆ. ಹಾಗಾಗಿ, ಮನೆಯ ವಾಸ್ತು ದೋಷ ತೆಗೆದು ಹಾಕಲು ಈ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.

ತನ್ನದೇ ಆದ ಮನೆ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ, ಅದನ್ನು ಖರೀದಿಸಲು ಕಷ್ಟಪಟ್ಟು ಕೆಲಸ ಮಾಡುತ್ತಾನೆ. ತಾನು ಖರೀದಿಸಿದ ಈ ಮನೆಯನ್ನು ತನ್ನ ಮನಸ್ಸಿಗೆ ಅನುಗುಣವಾಗಿ ವಿನ್ಯಾಸಗೊಳಿಸುತ್ತಾನೆ. ಆದರೆ ಕೆಲವೊಮ್ಮೆ ಸಣ್ಣ ತಪ್ಪು ವಾಸ್ತು ದೋಷಕ್ಕೆ(Vastu Dosh) ಕಾರಣವಾಗುತ್ತೆ.

ಮನೆಯಲ್ಲಿ ವಾಸ್ತು ದೋಷಗಳಿಂದಾಗಿ, ಅನೇಕ ಸಮಸ್ಯೆಗಳನ್ನು(Problems) ಎದುರಿಸಬೇಕಾಗುತ್ತೆ. ಆದ್ದರಿಂದ, ನೀವು ಬಯಸಿದರೆ, ಮನೆಗೆ ಯಾವುದೇ ಡ್ಯಾಮೇಜ್ ಆಗದಂತೆ ಈ ವಾಸ್ತು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇದರೊಂದಿಗೆ, ಮನೆಯ ವಾಸ್ತು ದೋಷವನ್ನು ಸುಲಭವಾಗಿ ಸರಿಪಡಿಸಬಹುದು.

Tap to resize

ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ದಿಕ್ಕು (Direction) ಕೆಲವು ಅಂಶಗಳನ್ನು ಪ್ರತಿನಿಧಿಸುತ್ತೆ. ನಮ್ಮ ದೇಹವು ಹೇಗೆ ಮಾಡಲ್ಪಟ್ಟಿದೆಯೋ ಹಾಗೆ ನಮ್ಮ ಇಡೀ ಮನೆ ಐದು ಅಂಶಗಳಿಂದ ಮಾಡಲ್ಪಟ್ಟಿದೆ. ಈ ಕಾರಣಕ್ಕಾಗಿ, ಸಂತೋಷದ ಜೀವನ ನಡೆಸಲು ಮನೆಯ ಪ್ರತಿಯೊಂದು ಮೂಲೆಯೂ ದೋಷರಹಿತವಾಗಿರಬೇಕು. ಏಕೆಂದರೆ ಅದರ ಅಡ್ಡಪರಿಣಾಮಗಳು ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಹಾಗಾಗಿ, ಮನೆಯ ವಾಸ್ತು ದೋಷವನ್ನು ತೆಗೆದುಹಾಕಲು ಯಾವ ಕ್ರಮಗಳು ಉತ್ತಮ ಎಂದು ತಿಳಿಯಿರಿ.

ಮನೆಯ ವಾಸ್ತು ದೋಷಗಳನ್ನು ಸರಿಪಡಿಸೋದು ಹೇಗೆ?

ಕಲಶ (Kalash) ಇರಿಸಿ
ಮನೆಯ ವಾಸ್ತು ದೋಷವನ್ನು ತೆಗೆದುಹಾಕಲು, ಈಶಾನ್ಯ ದಿಕ್ಕಿನಲ್ಲಿ ಅಂದರೆ ಈಶಾನ್ಯ ಕೋನದಲ್ಲಿ ಒಂದು ಕಲಶವನ್ನು ಸ್ಥಾಪಿಸಿ. ಏಕೆಂದರೆ ಕಲಶ ಗಣೇಶನ ರೂಪವೆಂದು ಪರಿಗಣಿಸಲಾಗುತ್ತೆ . ಆದ್ದರಿಂದ, ಗಣೇಶ ನಿಮ್ಮ ಮನೆಯಲ್ಲಿ ಉಳಿಯುವ ಮೂಲಕ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತಾನೆ.

ಸ್ವಸ್ತಿಕದ(Swasthik) ಚಿಹ್ನೆ
ಮನೆಯ ವಾಸ್ತು ದೋಷಗಳನ್ನು ನಿವಾರಿಸಲು, ಮನೆಯ ಮುಖ್ಯ ದ್ವಾರದಲ್ಲಿ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಿ. ಸ್ವಸ್ತಿಕವು ಒಂಬತ್ತು ಅಂಗುಲ ಉದ್ದ ಮತ್ತು ಒಂಬತ್ತು ಅಂಗುಲ  ಅಗಲವಾಗಿರಬೇಕು ಎಂಬುದನ್ನು ನೆನಪಿಡಿ. ಇದನ್ನು ಮಾಡುವ ಮೂಲಕ, ಮನೆಯ ನಕಾರಾತ್ಮಕ ಶಕ್ತಿಯನ್ನು ಸಹ ತೆಗೆದುಹಾಕಲಾಗುತ್ತೆ.

ಕುದುರೆ ಲಾಳ(Horse shoe)
ವಾಸ್ತು ಶಾಸ್ತ್ರದಲ್ಲಿ ಕುದುರೆ ಲಾಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಮನೆಯಲ್ಲಿ ಇಡೋದರಿಂದ ವಾಸ್ತು ದೋಷ ನಿವಾರಣೆಯಾಗುತ್ತೆ . ಇದರೊಂದಿಗೆ, ಅದೃಷ್ಟವನ್ನು ಪಡೆಯಬಹುದು. ಮನೆಯ ಮುಖ್ಯ ದ್ವಾರದಲ್ಲಿ ಕುದುರೆ ಲಾಳ ಇರಿಸಿ, ಅದು U ಆಕಾರದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪಂಚಮುಖಿ ಹನುಮಂತನ(Panchamuki Hanuman) ಚಿತ್ರ
ನಿಮ್ಮ ಪ್ರವೇಶದ್ವಾರವು ದಕ್ಷಿಣ ದಿಕ್ಕಿನಲ್ಲಿದ್ದರೆ, ಮನೆಯ ಬಾಗಿಲಿನಲ್ಲಿ ಪಂಚಮುಖಿ ಹನುಮಂತನ ಚಿತ್ರವನ್ನು ಇರಿಸಿ. ಇದರಿಂದ ಲಾಭವಾಗುತ್ತೆ. ಇದಲ್ಲದೆ, ಪ್ರವೇಶದ್ವಾರದಲ್ಲಿ ಪಂಚಧಾತುದಿಂದ ಮಾಡಿದ ಪಿರಮಿಡ್ ಸ್ಥಾಪಿಸಬಹುದು. ಇದು  ಸಹ ಶುಭ ಫಲಿತಾಂಶಗಳನ್ನು ತರುತ್ತೆ.
 

ಬಲ್ಬ್ ಗಳನ್ನು(Bulb) ಹಾಕಿ 
ನಿಮ್ಮ ಅಡುಗೆಮನೆ ಆಗ್ನೇಯ ಕೋನದಲ್ಲಿ ಇಲ್ಲದಿದ್ದರೆ, ಅದು ವಾಸ್ತು ದೋಷಗಳಿಗೆ ಕಾರಣವಾಗಬಹುದು. ಹಾಗಾಗಿ, ಅಂತಹ ವಾಸ್ತು ದೋಷವನ್ನು ತೆಗೆದುಹಾಕಲು, ಆಗ್ನೇಯ ಕೋನದಲ್ಲಿ ಒಂದು ಸಣ್ಣ ಬಲ್ಬ್ ಇರಿಸಿ ಮತ್ತು ಅದನ್ನು ಪ್ರತಿದಿನ ಬೆಳಗಿಸಿ. ಇದು ಅಡುಗೆಮನೆಯ ವಾಸ್ತು ದೋಷವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತೆ.

ಕರ್ಪೂರ(Camphor)
ಕರ್ಪೂರವು ಮನೆಯ ವಾಸ್ತು ದೋಷಗಳನ್ನು ತೆಗೆದುಹಾಕಲು ಸಹ ಪ್ರಯೋಜನಕಾರಿ.  ಮನೆಯಲ್ಲಿ ವಾಸ್ತು ದೋಷವಿರುವ ಸ್ಥಳದಲ್ಲಿ ಕರ್ಪೂರವನ್ನು ಹಚ್ಚಿ. ಅದು ಮುಗಿದ ಕೂಡಲೇ, ಬೇರೊಂದು ಕರ್ಪೂರವನ್ನು ಮತ್ತೆ ಹಚ್ಚಿ . ಇದು ವಾಸ್ತು ದೋಷಗಳನ್ನು ದೊಡ್ಡ ಪ್ರಮಾಣದಲ್ಲಿ ತೊಡೆದುಹಾಕುತ್ತೆ.

Latest Videos

click me!