ಈ ವಾಸ್ತು ಟಿಪ್ಸ್‌ ಪಾಲಿಸುವುದರಿಂದ ನಿಮ್ಮ ಭಾಗ್ಯವೇ ಬದಲಾಗುತ್ತದೆ.....

First Published Nov 4, 2020, 4:43 PM IST

ವಾಸ್ತು ನಿಯಮ ಪಾಲಿಸಿದರೆ ಹಲವು ದೋಷ ನಿವಾರಣೆಯಾಗಿ, ಅದೃಷ್ಟ  ನಮ್ಮ ಹಿಂದೆ ಸದಾ ಇರುತ್ತದೆ ಎಂದು ನಂಬಲಾಗುತ್ತದೆ. ನಿಮ್ಮ ಜೀವನದಲ್ಲೂ ಅದೃಷ್ಟ ಖುಲಾಯಿಸಬೇಕು ಅನ್ನೋದಾದರೆ ನೀವು ಖಂಡಿತವಾಗಿ ಈ ವಾಸ್ತು ಟಿಪ್ಸ್ ನ್ನು ಫಾಲೋ ಮಾಡಬೇಕು. ಹಾಗಿದ್ರೆ ಖಂಡಿತ ಅದೃಷ್ಟ ಲಕ್ಷ್ಮಿ ನಿಮ್ಮ ಮನೆಬಾಗಿಲಿಗೆ ಬರೋದು ಖಂಡಿತ... 

ಬಾತ್‌ರೂಮ್‌ ದೇವರ ಕೋಣೆ ಸಮೀಪ ಇರಬಾರದು. ಒಂದು ವೇಳೆ ಇದ್ದರೆ ಅದನ್ನು ಬಳಕೆ ಮಾಡಬೇಡಿ ಹಾಗೂ ಅದನ್ನು ತುಂಬಾ ಕ್ಲೀನ್‌ ಆಗಿ ಇಟ್ಟುಕೊಳ್ಳಿ.
undefined
ನಿಮ್ಮ ಲಿವಿಂಗ್‌ ರೂಮ್‌ನ ಈಶಾನ್ಯ ಭಾಗದಲ್ಲಿ ಅಕ್ವೇರಿಯಂ ಇಡಿ. ಈ ಭಾಗದಲ್ಲಿ ಒಂಭತ್ತು ಗೋಲ್ಡ್‌ ಫಿಶ್‌ ಮತ್ತು ಒಂದು ಬ್ಲ್ಯಾಕ್‌ ಫಿಶ್‌ ಇರುವ ಅಕ್ವೇರಿಯಂ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ.
undefined
ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಬೇಕಾದರೆ ಅವರು ಪೂರ್ವ ದಿಕ್ಕಿಗೆ ಮುಖ ಮಾಡಿ ಓದಬೇಕು. ಕೋಣೆಯಲ್ಲಿ ರೀಡಿಂಗ್ ಡೆಸ್ಕ್ ಇದ್ದರೆ ನಿಮ್ಮ ಮುಖ ಪೂರ್ವ ದಿಕ್ಕಿಗೆ ಮುಖ ಮಾಡಿ ಇರುವಂತೆ ಡೆಸ್ಕ್ ಇಡಿ. ಇದರಿಂದ ಬೇಗನೆ ಕಲಿತ ವಿದ್ಯೆ ತಲೆಯಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ.
undefined
ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮ ಮುಖ ಈಶಾನ್ಯ ಭಾಗದಲ್ಲಿರಲಿ. ಈ ಭಾಗದಲ್ಲಿ ದೈವಿಕ ಶಕ್ತಿ ಹೆಚ್ಚಿರುತ್ತದೆ ಆದುದರಿಂದ ಸಾಧ್ಯವಾದಷ್ಟು ಈ ರೀತಿಯಾಗಿಯೇ ಪ್ರಾರ್ಥನೆ ಮಾಡಿ.
undefined
ಡೈನಿಂಗ್‌ ರೂಮ್‌ ಮನೆಯ ಮುಖ್ಯ ದ್ವಾರಕ್ಕೆ ಅಭಿಮುಖವಾಗಿ ಇರಬಾರದು. ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದುದರಿಂದ ಡೈನಿಂಗ್ ಟೇಬಲ್ ವಾಸ್ತು ತಜ್ಞರ ಸಲಹೆಯಂತೆ ಇಡಿ.
undefined
ಮನೆಯಲ್ಲಿ ಹರಿದ ಬಟ್ಟೆ, ಒಣಗಿದ ಹೂವು, ಹಾಳಾದ ಪಾತ್ರ, ಆಹಾರ, ಖಾಲಿಯಾದ ಡಬ್ಬಗಳನ್ನು ಇಡಬೇಡಿ. ಇದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸಲು ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ.
undefined
ತುಳಸಿ ಅತ್ಯಂತ ಉತ್ತಮವಾದ ಗಿಡವಾಗಿದೆ. ಒಂದಾದರು ತುಳಸಿ ಗಿಡವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿಡಿ. ಆದರೆ ಇದು 1.5 ಮೀಟರ್‌ಗಿಂತ ಹೆಚ್ಚು ಎತ್ತರ ಬೆಳೆಯದಂತೆ ನೋಡಿಕೊಳ್ಳಿ.
undefined
ಕ್ಯಾಶ್‌ ಬಾಕ್ಸ್‌ಗಳನ್ನು ಮನೆಯ ದಕ್ಷಿಣ ಭಾಗದಲ್ಲಿ ತೆಗೆದಿಡಬೇಕು. ಇದರಿಂದ ಲಕ್ಷ್ಮಿ ಸದಾ ಮನೆಯಲ್ಲಿರುತ್ತಾಳೆ ಎನ್ನಲಾಗುತ್ತದೆ.
undefined
ಮನೆಯ ಬಾತ್‌ರೂಮ್‌ ಮತ್ತು ಟಾಯ್ಲೆಟ್‌ ರೂಮ್‌ಗಳ ಬಾಗಿಲು ಯಾವಾಗಲೂ ಕ್ಲೋಸ್‌ ಆಗಿರುವಂತೆ ನೋಡಿಕೊಳ್ಳಿ. ತೆರೆದಿದ್ದರೆ ಆದರಿಂದ ನೆಗೆಟಿವ್ ಎನರ್ಜಿ ಹೊರ ಬರುತ್ತದೆ ಎನ್ನಲಾಗುತ್ತದೆ.
undefined
ಯಾವತ್ತೂ ಕಿಚನ್‌ನಲ್ಲಿ ಕನ್ನಡಿಯನ್ನು ಇಡಬೇಡಿ.ಇದರಿಂದ ದೋಷ ಕಾಣಿಸುತ್ತದೆ ಎಂದು ಹೇಳಲಾಗುತ್ತದೆ.
undefined
ಬೆಡ್‌ರೂಮ್‌ನಲ್ಲಿ ಯಾವತ್ತೂ ಗಿಡಗಳನ್ನು ಅಥವಾ ನೀರಿರುವ ವಸ್ತು, ಫೋಟೊಗಳನ್ನು ಇಡಬೇಡಿ. ಇದರಿಂದಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗ ಎಲ್ಲಾ ರೀತಿಯ ಗಿಡಗಳನ್ನು ಜನ ಬೆಳೆಸುತ್ತಾರೆ.
undefined
ಹನುಮಂತನ ಮೂರ್ತಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
undefined
click me!