ಮಲಗುವಾಗ ಈ ವಸ್ತು ದೂರವಿರಲಿ, ವಾಸ್ತು ಶಾಸ್ತ್ರ ಏನು ಹೇಳುತ್ತೇ ಕೇಳಿ

First Published | Oct 31, 2020, 3:50 PM IST

ವಾಸ್ತ್ರು ಶಾಸ್ತ್ರದ ಅನುಸಾರ ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಕೆಲವು ವಸ್ತುಗಳನ್ನು ನಿಮ್ಮಿಂದ ದೂರ ಇಡಬೇಕು. ಒಂದು ವೇಳೆ ನೀವು ಹಾಗೆ ಮಾಡಿಲ್ಲ ಎಂದಾದರೆ ಹಲವಾರು ರೀತಿಯ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವಾಸ್ತು ಶಾಸ್ತ್ರದ ಅನುಸಾರ ಈ ವಸ್ತುಗಳನ್ನು ನೀವು ನಿದ್ರೆ ಮಾಡುವ ಸಮಯದಲ್ಲಿ ದೂರ ಇಡಿ.

ಪರ್ಸ್‌ ಅಥವಾ ಹಣ : ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಪರ್ಸ್‌ ಅಥವಾ ಹಣವನ್ನು ನಿಮ್ಮ ತಲೆಯ ಬಳಿ ಇಟ್ಟು ಯಾವತ್ತೂ ಮಲಗಬೇಡಿ. ಇದರಿಂದ ಆ ವ್ಯಕ್ತಿಗೆ ಪ್ರತಿದಿನ ಹಣಕ್ಕೆ ಸಂಬಂಧಿಸಿದ ಚಿಂತೆ ಕಾಡುತ್ತದೆ.
ವಾಚ್‌, ಮೊಬೈಲ್‌ ಅಥವಾ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ : ಯಾವುದೆ ರೀತಿಯ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ತಲೆಯ ಬಳಿ ಇಟ್ಟು ಮಲಗಬೇಡಿ. ಇದರಿಂದ ಆ ವ್ಯಕ್ತಿಗೆ ಮಾನಸಿಕ ಹಿಂಸೆ ಉಂಟಾಗುತ್ತದೆ. ಅಲ್ಲದೆ ಎಲೆಕ್ಟ್ರಾನಿಕ್‌ ವಸ್ತುಗಳಿಂದ ಹೊರಬರುವ ವಿಕಿರಣಗಳಿಂದಾಗಿ ಸಮಸ್ಯೆಗಳು ಕಾಡುತ್ತವೆ.
Tap to resize

ಯಾವುದಾದರು ಭಯಾನಕ ಫೋಟೊ ಅಥವಾ ಶೋಪೀಸ್‌ : ಮಲಗುವ ಸಮಯದಲ್ಲಿ ಯಾವುದೆ ಭಯಾನಕ ಫೋಟೊ ಅಥವಾ ಶೋಪೀಸ್‌ ತಲೆಯ ಬಳಿ ಇಡಬೇಡಿ. ಇದರಿಂದ ಸ್ಟ್ರೆಸ್‌ ಮತ್ತು ನೆಗೆಟೀವ್‌ ಯೋಚನೆಗಳು ಸುಳಿಯಲು ಆರಂಭಿಸುತ್ತವೆ.
ಪುಸ್ತಕ ಅಥವಾ ಪೇಪರ್ : ಯಾರು ಕೂಡ ತಮ್ಮ ತಲೆದಿಂಬಿನ ಕೆಳಗೆ ಪೇಪರ್‌, ಪುಸ್ತಕ ಅಥವಾ ಮ್ಯಾಗಜೀನ್‌ ಯಾವುದೆ ರೀತಿಯ ಓದುವಂತಹ ವಸ್ತುಗಳನ್ನು ಇಡಬೇಡಿ. ಈ ವಸ್ತುಗಳನ್ನು ತಲೆಯ ಹತ್ತಿರ ಇಡೋದರಿಂದ ಅದರಲ್ಲಿರುವ ಕೆಲವೊಂದು ಘಟನೆಗಳು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ಚಪ್ಪಲ್‌ - ಶೂ : ಮಲಗುವಾಗ ಯಾವತ್ತೂ ಚಪ್ಪಲ್‌ನ್ನು ನಿಮ್ಮ ಬೆಡ್‌ ಬಳಿ, ತಲೆಯ ಹತ್ತಿರ ಇಟ್ಟು ಮಲಗಬೇಡಿ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಹಣಕಾಸಿನ ಮೇಲೆ ನೆಗೆಟಿವ್‌ ಪರಿಣಾಮ ಬೀರುತ್ತದೆ.
ಕನ್ನಡಿ : ವಾಸ್ತು ಪ್ರಕಾರ, ಬೆಡ್ ರೂಮಿನಲ್ಲಿ ನಿಮ್ಮ ಬೆಡ್ ಬಳಿ ಕನ್ನಡಿ ಇಡಲೇಬಾರದು. ಹೌದು ಕನ್ನಡಿಯಲ್ಲಿ ಒಬ್ಬರ ಮಲಗುವ ದೇಹದ ಪ್ರತಿಬಿಂಬವು ಕಾಣುತ್ತದೆ, ಇದನ್ನು ಕೆಟ್ಟದು ಎಂದು ಹೇಳಲಾಗುತ್ತದೆ, ಆದುದರಿಂದ ನಿಮ್ಮ ಹಾಸಿಗೆಯ ಮುಂದೆ ಕನ್ನಡಿಯನ್ನು ತಪ್ಪಿಸಿ.
ಟಿವಿ ಅಥವಾ ಕಂಪ್ಯೂಟರ್ : ಮಲಗುವ ಕೋಣೆಯ ಶಾಂತತೆಗೆ ಭಂಗ ತರುವ ಯಾವುದಕ್ಕೂ ಇಲ್ಲಿ ಸ್ಥಾನವಿಲ್ಲ. ಆದ್ದರಿಂದ, ದೂರದರ್ಶನ ಇಲ್ಲ. ನಿಮ್ಮ ಕೋಣೆಯಲ್ಲಿ ಟಿವಿ ಇದ್ದರೆ , ಅದನ್ನು ನಿಮ್ಮ ಹಾಸಿಗೆಯಿಂದ ಸಮಂಜಸವಾದ ದೂರದಲ್ಲಿ ಇರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. “ಟಿವಿ ಪರದೆ ಹಾಸಿಗೆಯ ಎದುರು ಕನ್ನಡಿಯಾಗಿ ಕೆಲಸ ಮಾಡಬಾರದು.
ಇಂತಹ ಫೋಟೋ ಬೇಡ :ಪ್ರಾಣಿಗಳ ಹೋರಾಟ, ಬೇಟೆಯ ಸಿಂಹಗಳು, ಹೂವುಗಳು ಮತ್ತು ಹಣ್ಣುಗಳಿಲ್ಲದ ಮರಗಳು ಮತ್ತು ಸತ್ತ ಪ್ರಾಣಿಗಳಾದ ಪಾರಿವಾಳಗಳು, ಹಾವುಗಳು, ಕಾಗೆಗಳು, ಗೂಬೆಗಳು ಮತ್ತು ರಣಹದ್ದುಗಳ ಚಿತ್ರಗಳನ್ನು ಮಲಗುವ ಕೋಣೆಯ ಗೋಡೆಗಳ ಮೇಲೆ ಹಾಕಬೇಡಿ. ಇದು ಮನೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ.
ಬೇಡವಾದ ವಸ್ತು : ಬೇಡವಾದ, ನಿರುಪಯುಕ್ತ ವಸ್ತುಗಳನ್ನು ಬೆಡ್ ಕೆಳಗೆ ಇಡುವುದು ಸಾಮಾನ್ಯವಾಗಿದೆ. ಆದರೆ ಅದನ್ನು ಮಾಡಲೇಬೇಡಿ. ಇದರಿಂದ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬೆಡ್ ರೂಮ್ ನಲ್ಲಿ ನೀವು ಇಡುವುದೇ ಆದರೆ ಉತ್ತಮ ವಿಷಗಳನ್ನೊಳಗೊಂಡ ಫೋಟೋಗಳನ್ನು ಇಟ್ಟರೆ ಉತ್ತಮ. ನೀವು ವಿವಾಹಿತರಾಗಿದ್ದರೆ, ನಿಮ್ಮ ಕೊನೆಯಲ್ಲಿ ರಾಧಾ ಕೃಷ್ಣರ ಫೋಟೋ ಇಡಿ. ಇದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಜೊತೆಗೆ ಶಾಂತಿ ನೆಲೆಸಿರುತ್ತದೆ.

Latest Videos

click me!