ಕೆಂಪು ಬಣ್ಣದ ಬಳಕೆ: ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿರುವಿರಾದರೆ ಜೇಬಿನಲ್ಲಿ ಕೆಂಪು ಬಣ್ಣದ ಕರವಸ್ತ್ರ ಅಥವಾ ಬಟ್ಟೆ ಇಟ್ಟುಕೊಳ್ಳಿ. ಅಥವಾ ಕೆಂಪು ಬಣ್ಣದ ಶರ್ಟ್ ಧರಿಸಿ. ನೀವು ಎಷ್ಟು ಕೆಂಪು ಬಣ್ಣದ ಉಪಯೋಗ ಮಾಡುತ್ತೀರೋ, ಅಷ್ಟೇ ಬೇಗನಿಮಗೆ ಕೆಲಸ ಸಿಗುತ್ತದೆ ಎನ್ನುತ್ತದೆ ವಾಸ್ತು.
ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣ ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಉಪಯೋಗ ಮಾಡಿ. ಹಳದಿ ಬಣ್ಣ ಭಾಗ್ಯ ವೃದ್ಧಿ ಮಾಡುವ ಸಂಕೇತವಾಗಿದೆ.
ಹಳದಿ ಗಣೇಶ: ಯಾವ ಕೆಲಸ ಮಾಡುವಾಗ ಅಲ್ಲಿ ಗಣೇಶ ಇರುತ್ತಾನೋ ಆ ಕೆಲಸದಲ್ಲಿ ವಿಘ್ನಗಳು ಯಾವತ್ತೂ ಬರುವುದಿಲ್ಲ. ಹಳದಿ ಬಣ್ಣದ ಮರದ ಗಣೇಶನ ವಿಗ್ರಹ ಸಿಗುತ್ತದೆ. ಇದನ್ನು ನಿಮ್ಮ ಬಳಿ ಇಟ್ಟುಕೊಂಡರೆ ಉತ್ತಮ.
ಹಣ ಇಡುವ ಜಾಗದಲ್ಲಿ ಹಳದಿ: ಎಲ್ಲಿ ನೀವು ಹಣ ಸಂಗ್ರಹಿಸಿ ಇಡುತ್ತೀರೋ ಆ ಜಾಗದಲ್ಲಿ ಹಳದಿ ಬಣ್ಣ ಉಪಯೋಗಿಸಿದರೆ ಅದರ ಫಲಿತಾಂಶ ಸ್ವಲ್ಪ ದಿನದಲ್ಲೇ ನಿಮಗೆ ಸಿಗಲಿದೆ.
ಚಿತ್ರಗಳು:ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಸರೋವರ, ಜಲಪಾತ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿರುವ ಯಾವುದೇ ಜಲಕ್ಕೆ ಸಂಬಂಧಿಸಿದ ಚಿತ್ರವು ವೃತ್ತಿಜೀವನದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.
ಕಾರ್ಯ ಸ್ಥಳದಲ್ಲಿ ಓಂ, ಸ್ವಸ್ತಿಕ ಅಥವಾ ಗಣೇಶನ ವಿಗ್ರಹದಂತಹ ಸಕಾರಾತ್ಮಕ ಚಿಹ್ನೆಯನ್ನು ಇರಿಸಿ. ಇದು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.
ಮಂದಿರದಲ್ಲಿ ಹಳದಿ ಬಣ್ಣದ ಪ್ರಯೋಗ:ನಿಮ್ಮ ಮನೆಯಲ್ಲಿ ಹಣಕಾಸಿನ ವಿಷಯ ಆಗಾಗ ಬರುತ್ತದೆ, ನಿಮ್ಮಿಂದ ಹೆಚ್ಚು ಹಣ ಖರ್ಚಾಗುವುದು, ಮನೆಯಲ್ಲಿ ಅಶಾಂತಿ, ಹಣ ಗಳಿಸುವ ಎಲ್ಲಾ ವಿಧಾನ ವ್ಯರ್ಥವಾಗಿ ಹೋಗುವುದು ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ದೇವರ ಕೋಣೆಯಲ್ಲಿ ಹೆಚ್ಚಾಗಿ ಹಳದಿ ಬಣ್ಣದ ಪ್ರಯೋಗ ಮಾಡಿದರೆ ಉತ್ತಮ.
ಶತ್ರುಗಳಿಗಾಗಿ ಮೇಣದ ಬತ್ತಿ: ನಿಮ್ಮ ಮೇಲೆ ಯಾರಿಗಾದರೂ ಸೇಡು ಇದ್ದರೆ, ಶತ್ರುತ್ವ ಸಾಧಿಸುತ್ತಿದ್ದರೆ ಅಥವಾ ನೀವು ಸದಾ ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದರೆ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ನೀರಿನ ಸ್ಥಾನವನ್ನು ಸ್ಥಳಾಂತರಿಸಿ. ಇದರ ಜೊತೆ ಒಂದು ಕೆಂಪು ಬಣ್ಣದ ಮೇಣದ ಬತ್ತಿಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಹಚ್ಚಿ.
ಕುಳಿತುಕೊಳ್ಳುವ ದಿಕ್ಕು: ಕಚೇರಿಯಲ್ಲಿ ಕುಳಿತುಕೊಳ್ಳುವಾಗ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಕುಳಿತುಕೊಳ್ಳುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ವೃತ್ತಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಮನೆಯಲ್ಲಿಯೇ ಆಫೀಸ್ ಇದ್ದು ಕಾರ್ಯ ನಿರ್ವಹಿಸುವಿರಾದರೆ, ಮಾಸ್ಟರ್ ಬೆಡ್‌ರೂಮ್ ಮತ್ತು ಆಫೀಸ್ ರೂಮ್ ಪಕ್ಕದಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ಪ್ರಗತಿ ಉಂಟಾಗುವುದು ನಿಧಾನವಾಗುತ್ತದೆ.