ಮುಗಿಯದ ಸಮಸ್ಯೆಯೇ? ಮನೆ ಮುಖ್ಯದ್ವಾರದಲ್ಲಿ ಕೆಂಪು ಬಟ್ಟೇಲಿ ಉಪ್ಪು ಕಟ್ಟಿಡಿ!

First Published | Mar 29, 2024, 3:35 PM IST

ಮನೆಯಲ್ಲಿ ವಾಸ್ತು ದೋಷ, ಹಣದ ಸಮಸ್ಯೆ ಇದ್ದರೆ ಜ್ಯೋತಿಷ್ಯದಲ್ಲಿ ತಿಳಿಸಿದ ಈ ಸುಲಭ ಸಲಹೆಯನ್ನು ಪಾಲಿಸಿ. ಈ ಸರಳ ವಿಧಾನದಿಂದ ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗುತ್ತೆ. 
 

ಉಪ್ಪನ್ನು ಅಡುಗೆ ಮನೆಯಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ (vaastu) ಬಳಸಲಾಗುತ್ತದೆ. ಇದರ ಬಳಕೆಯಿಂದ, ವಾಸ್ತು ದೋಷಗಳಿಂದ ನಕಾರಾತ್ಮಕ ಶಕ್ತಿಯವರೆಗೆ (Negative Energy) ಎಲ್ಲವನ್ನೂ ನಿವಾರಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟುವುದರಿಂದ ಅನೇಕ ಪ್ರಯೋಜನಗಳಿವೆ. ಮನೆಯ ಮುಖ್ಯ ದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿದಾಗ ಏನಾಗುತ್ತದೆ?

ನಕಾರಾತ್ಮಕತೆ ದೂರವಾಗುತ್ತೆ
ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಅದನ್ನು ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಿದರೆ ನಕಾರಾತ್ಮಕ ಶಕ್ತಿ (negative energy) ಮನೆಯೊಳಗೆ ಪ್ರವೇಶ ಆಗೋದನ್ನು ತಡೆಯುತ್ತದೆ. 

Tap to resize

ವಾಸ್ತು ದೋಷ ದೂರವಾಗುತ್ತೆ
ಮನೆಯಲ್ಲಿರುವ ವಾಸ್ತು ಧೋಷಗಳನ್ನು(vastu dosha) ನಿವಾರಿಸಲು ಉಪ್ಪು ಹೆಚ್ಚಿನ ಸಹಾಯ ಮಾಡುತ್ತೆ. ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಎದುರು ನೇತು ಹಾಕೋದ್ರಿಂದ ವಾಸ್ತು ದೋಷದ ಪ್ರಭಾವ ಕಡಿಮೆಯಾಗುತ್ತೆ. 

ಕಲಹ ದೂರ ಮಾಡುತ್ತೆ
ನಿಮ್ಮ ಮನೆಯಲ್ಲಿ ಹೆಚ್ಚಾಗಿ ಜಗಳ ಆಗುತ್ತಿದ್ದರೆ ಮನೆಯ ಮುಖ್ಯ ಬಾಗಿಲಿಗೆ ಉಪ್ಪನ್ನು ಕಟ್ಟಿ ಇಡಿ. ಇದರಿಂದ ಮನೆಯಲ್ಲಿ ಉಂಟಾಗುವಂತಹ ಕಲಹ (conflict), ಜಗಳ, ಮನಸ್ತಾಪ ನಿವಾರಣೆಯಾಗುತ್ತೆ. 

Image: Freepik

ದಾರಿದ್ರ್ಯ ದೂರವಾಗುತ್ತೆ
ಮನೆಯ ಮುಖ್ಯದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಇಡೋದರಿಂದ ಮನೆಯಲ್ಲಿನ ಬಡತನ ದೂರವಾಗುತ್ತೆ. ಇದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತೆ. 

ಹಣದ ಸಮಸ್ಯೆ ಉಂಟಾಗೋದಿಲ್ಲ
ನೀವು ಹಣದ ಸಮಸ್ಯೆಯನ್ನು (money problem) ಎದುರಿಸುತ್ತಿದ್ದರೆ, ಆ ಸಂದರ್ಭದಲ್ಲೂ ಕೆಂಪು ಬಟ್ಟೆಯಲ್ಲಿ ಉಪ್ಪು ಕಟ್ಟಿ ಇಡಿ. ಈ ವಿಶೇಷ ಕ್ರಮದಿಂದ ಹಣದ ಸಮಸ್ಯೆ ದೂರವಾಗುತ್ತೆ. 

ಸುಖ ಶಾಂತಿ ಇರುತ್ತೆ
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸುಖ ಶಾಂತಿ ಇರಬೇಕು ಎಂದು ಬಯಸುತ್ತಾರೆ. ನೀವು ಸಹ ನಿಮ್ಮ ಜೀವನದಲ್ಲಿ ನೆಮ್ಮದಿ ಬಯಸಿದ್ರೆ ಉಪ್ಪನ್ನು ಕಟ್ಟಿ ಮುಖ್ಯ ಬಾಗಿಲಿಗೆ ನೇತು ಹಾಕಿ. ನೆಮ್ಮದಿಯ ಜೀವನ ನಿಮ್ಮದಾಗುತ್ತೆ. 

ಕೆಟ್ಟ ದೃಷ್ಟಿ ಬೀಳೋದಿಲ್ಲ
ನಿಮ್ಮ ಮನೆಯ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ (Evil Eye) ಬಿದ್ದಿದ್ದರೆ, ಈ ಸಮಯದಲ್ಲಿ ಮನೆ ಮುಂಬಾಗಿಲಿಗೆ ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಇಡಿ. ಇದರಿಂದ ಯಾರ ಕೆಟ್ಟ ಕಣ್ಣು ಬೀಳೋದಿಲ್ಲ. ಜೊತೆಗೆ ದೃಷ್ಟಿಯೂ ನಿವಾರಣೆಯಾಗುತ್ತೆ. 

Latest Videos

click me!