ಮನೆ ಬಾಗಿಲು ತೆರೆದ ತಕ್ಷಣ ಈ ವಸ್ತುಗಳಿದ್ದರೆ, ವಾಸ್ತು ದೋಷ ಇದೆ ಎಂದರ್ಥ!

Published : Mar 27, 2024, 03:27 PM IST

ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇದ್ದರೆ ಮಾತ್ರ ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ, ಸಂತೋಷವು ನಿಮ್ಮ ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಇದಕ್ಕಾಗಿ, ವಾಸ್ತು ದೋಷಗಳನ್ನು ತಡೆಗಟ್ಟಲು ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಮನೆಯಲ್ಲಿ ಇರುವ ವಾಸ್ತು ದೋಷಗಳನ್ನು ನಿವಾರಿಸುವುದು ಮುಖ್ಯ.   

PREV
17
ಮನೆ ಬಾಗಿಲು ತೆರೆದ ತಕ್ಷಣ ಈ ವಸ್ತುಗಳಿದ್ದರೆ, ವಾಸ್ತು ದೋಷ ಇದೆ ಎಂದರ್ಥ!

ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಬೇಕೆಂದು ಬಯಸುತ್ತಾನೆ. ಇದಕ್ಕಾಗಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು (positive energy) ಹೊಂದಿರುವುದು ಬಹಳ ಮುಖ್ಯ ಏಕೆಂದರೆ ಮನೆಯಲ್ಲಿ ಈ ಶಕ್ತಿಯನ್ನು ಹೊಂದುವ ಮೂಲಕ ಮಾತ್ರ, ನಿಮ್ಮ ಜೀವನದಲ್ಲಿ ಎಲ್ಲಾ ಒಳ್ಳೆಯ ವಿಷಯಗಳನ್ನು ಆಕರ್ಷಿಸುತ್ತದೆ.

27

ಉದಾಹರಣೆಗೆ, ಒಬ್ಬ ವ್ಯಕ್ತಿಯ ಮನೆಯಲ್ಲಿ ಯಾವಾಗಲೂ ಕೌಟುಂಬಿಕ ಸಂಘರ್ಷವಿದ್ದರೆ (family problem), ಮನೆಯ ಸದಸ್ಯರು ಪರಸ್ಪರ ಹೊಂದಾಣಿಕೆ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಊಹಿಸಿ. ಇದು ಎಲ್ಲರ ಮನಸ್ಥಿತಿಯನ್ನು ಕೆಟ್ಟದಾಗಿರಿಸುತ್ತದೆ ಮತ್ತು ಮನೆಯಲ್ಲಿ ಇರುವ ಜನರು ಯಾವಾಗಲೂ ಒತ್ತಡದಲ್ಲಿ ಬದುಕಲು ಪ್ರಾರಂಭಿಸುತ್ತಾರೆ. ಇದರ ಅತಿದೊಡ್ಡ ಪರಿಣಾಮ ಸಂಪಾದನೆಯ ಮೇಲೆ ಉಂಟಾಗುತ್ತೆ. 
 

37

ಮನೆಯಲ್ಲಿ ಕಲಹವಿದ್ದ ಮನೆ ಮಂದಿಯ ಗಮನವು ವ್ಯವಹಾರ, ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮನೆಯ ಆರ್ಥಿಕ ಸ್ಥಿತಿಯೂ ಹದಗೆಡುತ್ತದೆ. ಅಂದರೆ, ಕೌಟುಂಬಿಕ ಸಮಸ್ಯೆಯು ನಕಾರಾತ್ಮಕ ಶಕ್ತಿಯಾಗಿದೆ. ನಕಾರಾತ್ಮಕ ಶಕ್ತಿಯು (negative energy) ನಿಮ್ಮ ಮನೆಗೆ ಬಂದರೆ, ಅದು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳು ನಿಮ್ಮ ಮನೆಯಲ್ಲಿನ ವಾಸ್ತು ದೋಷವನ್ನು ತೋರಿಸುತ್ತವೆ. ಬನ್ನಿ ಅವುಗಳ ಬಗ್ಗೆ ತಿಳಿಯೋಣ. 

47

ವಾಸ್ತು ದೋಷ ಎಂದರೇನು?
ವಾಸ್ತು ಶಾಸ್ತ್ರದ ಪ್ರಕಾರ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ನಿಯಮಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಮಾತ್ರ ಮನೆಯನ್ನು ನಿರ್ಮಿಸಬೇಕು. ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಕೂಡ ಈ ನಿಯಮಗಳೊಂದಿಗೆ ಸಂಬಂಧ ಹೊಂದಿದೆ. ಮನೆಯನ್ನು ನಿರ್ಮಿಸುವಾಗ ನಾವು ದಿಕ್ಕಿನ ಬಗ್ಗೆ ಕಾಳಜಿ ವಹಿಸದಿದ್ದರೆ, ಮುಂದೆ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಬಹುದು. ಉದಾಹರಣೆಗೆ, ವಾಸ್ತು ಶಾಸ್ತ್ರದ (Vastu Shatra) ಪ್ರಕಾರ, ದಕ್ಷಿಣ ದಿಕ್ಕಿನತ್ತ ಮುಖ್ಯ ದ್ವಾರವನ್ನು ಹೊಂದಿರುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಅದೇ ಸಮಯದಲ್ಲಿ, ಶೌಚಾಲಯಗಳನ್ನು ಪೂರ್ವ ದಿಕ್ಕಿನಲ್ಲಿ ನಿರ್ಮಿಸಬಾರದು. ಮನೆಯ ಮುಖ್ಯ ದ್ವಾರವನ್ನು ಪೂರ್ವ ದಿಕ್ಕಿನಲ್ಲಿ ಹೊಂದಿರುವುದು ಶುಭವೆಂದು ಪರಿಗಣಿಸಲಾಗಿದೆ.

57

ಇವುಗಳಿಂದ ವಾಸ್ತು ದೋಷಗಳನ್ನು ಗುರುತಿಸಿ
ನೀವು ಹೊರಗಿನಿಂದ ಮನೆಯ ಒಳಗೆ ಬಂದಾಗ, ನೀವು ಮನೆಯ ಬಾಗಿಲು ತೆರೆದ ತಕ್ಷಣ ಒಂದು ರೀತಿಯ ಅಸಹಜ ಭಯವನ್ನು (fear) ಅನುಭವಿಸಲು ಪ್ರಾರಂಭಿಸಿದರೆ, ಆ ಮನೆಯಲ್ಲಿ ಕೆಲವು ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥಮಾಡಿಕೊಳ್ಳಿ.

67

ನಿಮ್ಮ ಮನೆಯಲ್ಲಿ ಯಾವಾಗಲೂ ವಿಚಿತ್ರ ವಾಸನೆ (weird smell) ಇದ್ದರೆ ಮತ್ತು ಈ ವಾಸನೆಯ ಕಾರಣವನ್ನು ತಿಳಿಯಲು ನಿಮಗೆ ಸಾಧ್ಯವಾಗದಿದ್ದರೆ, ವಾಸ್ತು ದೋಷವನ್ನು ತೆಗೆದುಹಾಕಲು ನೀವು ತಜ್ಞರೊಂದಿಗೆ ಮಾತನಾಡಬೇಕು.

ಗೃಹೋಪಯೋಗಿ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟಿದ್ದರೂ, ನೀವು ಬಾಗಿಲು ತೆರೆದ ತಕ್ಷಣ ವಸ್ತುಗಳು ಯಾವಾಗಲೂ ಅಲ್ಲಲ್ಲಿ ಹರಡಿಕೊಂಡಿರುವುದನ್ನು ನಿಮಗೆ ಕಂಡರೆ, ನಿಮ್ಮ ಮನೆಯಲ್ಲಿ ವಾಸ್ತು ದೋಷವಿರಬಹುದು.
 

77

ನೀವು ಮನೆಯ ಮೂಲೆಯಿಂದ ಶಬ್ದವನ್ನು ಕೇಳಿದರೆ, ಅದರ ಅರ್ಥವು ನಕಾರಾತ್ಮಕ ಶಕ್ತಿಗೆ ಸಂಬಂಧಿಸಿದೆ.

ವಾಸ್ತು ದೋಷದ ಒಂದು ಚಿಹ್ನೆಯೆಂದರೆ ಬಾವಲಿಗಳು (bats) ಮನೆಗೆ ಬರಲು ಮತ್ತು ಹೋಗಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವಾಗಲೂ ಮನೆಯ ಬಾಗಿಲುಗಳು ಮತ್ತು ಕಿಟಕಿಗಳನ್ನು ಮುಚ್ಚಿಡಲು ಪ್ರಯತ್ನಿಸಬೇಕು.
 

Read more Photos on
click me!

Recommended Stories