ದೇವಾಲಯದಿಂದ ಹೊರಡುವಾಗ ಗಂಟೆ ಬಾರಿಸಬಾರದ್ಯಾಕೆ?

Published : Mar 29, 2024, 02:23 PM IST

ವಾಸ್ತು ಶಾಸ್ತ್ರದ ಪ್ರಕಾರ, ದೇವಾಲಯದಲ್ಲಿ ಗಂಟೆ ಬಾರಿಸುವುದು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು (Positive Energy) ತರುತ್ತದೆ. ದೇವಾಲಯವನ್ನು ಪ್ರವೇಶಿಸುವಾಗ ಗಂಟೆ ಬಾರಿಸಬೇಕು. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ದೇವಾಲಯದಿಂದ ಹೊರಡುವಾಗ ಗಂಟೆ ಬಾರಿಸಬಾರದು. ಇದಕ್ಕೆ ಕಾರಣವನ್ನು ತಿಳಿದುಕೊಳ್ಳೋಣ.  

PREV
16
ದೇವಾಲಯದಿಂದ ಹೊರಡುವಾಗ ಗಂಟೆ ಬಾರಿಸಬಾರದ್ಯಾಕೆ?

ಭಕ್ತರು ದೇವಾಲಯವನ್ನು ಪ್ರವೇಶಿಸಿದ ಕೂಡಲೇ ಗಂಟೆ ಬಾರಿಸುವ (rang the bell) ಮೂಲಕ ದೇವರಿಗೆ ನಮಸ್ಕರಿಸುತ್ತಾರೆ. ದೇವಾಲಯದಲ್ಲಿ ಗಂಟೆ ಬಾರಿಸುವುದಕ್ಕೆ ಸಂಬಂಧಿಸಿದ ಅನೇಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಂಶಗಳಿವೆ, ಆದರೆ ದೇವಾಲಯದ ಗಂಟೆ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಸಹ ಹೇಳಲಾಗಿದೆ ಎಂದು ನಿಮಗೆ ತಿಳಿದಿದೆಯೇ. 
 

26

ವಾಸ್ತು ಶಾಸ್ತ್ರದಲ್ಲಿ (Vastu shastra), ದೇವಾಲಯದ ಗಂಟೆ ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ದೇವಾಲಯದ ಗಂಟೆ ಭಾರಿಸೋದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಆಗುತ್ತೆ. ದೇವಾಲಯವನ್ನು ಪ್ರವೇಶಿಸುವಾಗ ಗಂಟೆ ಬಾರಿಸಬೇಕು ಎಂದು ಹೆಚ್ಚಿನ ಜನರಿಗೆ ತಿಳಿದಿದೆ, ಆದರೆ ಹೆಚ್ಚಿನ ಜನರು ದೇವಾಲಯದಿಂದ ಹೊರಗೆ ಹೋಗುವಾಗ ಗಂಟೆ ಬಾರಿಸುವ ಬಗ್ಗೆ ಯೋಚಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಬನ್ನಿ, ತಿಳಿದುಕೊಳ್ಳೋಣ-

36

ದೇವಾಲಯಗಳಲ್ಲಿ ಗಂಟೆ ಬಾರಿಸೋದು ಯಾಕೆ?
ಶಬ್ದ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ದೇವಾಲಯದ ಗಂಟೆಯನ್ನು ಬಾರಿಸಿದಾಗಲೆಲ್ಲಾ, ಅದರ ಶಬ್ಧದಿಂದ ಸುತ್ತಮುತ್ತಲಿನ ಜನರಲ್ಲಿ ಶಕ್ತಿಯನ್ನು ತುಂಬಲಾಗುತ್ತದೆ. ದೇವಾಲಯದ ಗಂಟೆಯನ್ನು ಬಾರಿಸಿದಾಗ, ಅದರಿಂದ ಬರುವ ಸದ್ದು ಓಂ’ ಶಬ್ದಕ್ಕೆ ಹೋಲುತ್ತದೆ ಎಂದು ವಾಸ್ತು ಶಾಸ್ತ್ರ ಮತ್ತು ಸ್ಕಂದ ಪುರಾಣದಲ್ಲಿ(Skanda Puran) ಉಲ್ಲೇಖಿಸಲಾಗಿದೆ.

46

'ಓಂ' ಶಬ್ದ ತುಂಬಾ ಶುದ್ಧ ಮತ್ತು ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ದೇವಾಲಯವನ್ನು ಪ್ರವೇಶಿಸುವ ಸಮಯದಲ್ಲಿ ಗಂಟೆ ಬಾರಿಸಬೇಕು. ಗಂಟೆ ಬಾರಿಸುವ ವೈಜ್ಞಾನಿಕ ಅಂಶವೆಂದರೆ, ದೇವಾಲಯದಲ್ಲಿ ಗಂಟೆ ಬಾರಿಸುವುದರಿಂದ ಪರಿಸರದಲ್ಲಿ ಬಲವಾದ ಕಂಪನ (vibration of the bell) ಉಂಟಾಗುತ್ತದೆ, ಇದರಿಂದ ಸುತ್ತಮುತ್ತಲಿನ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ನಾಶವಾಗುತ್ತವೆ, ಆದ್ದರಿಂದ ವಾತಾವರಣವನ್ನು ಶುದ್ಧೀಕರಿಸಲು ದೇವಾಲಯದಲ್ಲಿ ಗಂಟೆ ಬಾರಿಸಲಾಗುತ್ತದೆ.
 

56

ದೇವಾಲಯದಿಂದ ಹೊರಡುವಾಗ ಗಂಟೆ ಬಾರಿಸಬೇಕೇ?
ದೇವಾಲಯದಿಂದ ಹೊರಡುವಾಗಲೂ ಗಂಟೆ ಬಾರಿಸಬೇಕೇ ಎಂಬ ಪ್ರಶ್ನೆಯೂ ಅನೇಕ ಜನರಿಗೆ ಇದೆ. ಅನೇಕ ಜನರು ಇನ್ನೊಬ್ಬರು ಗಂಟೆ ಬಾರಿಸೋದನ್ನು ನೋಡಿ ಮತ್ತು ಕಾರಣವನ್ನು ತಿಳಿಯದೆ ದೇವಾಲಯವದಿಂದ ಹೊರಗೆ ಹೋಗುವ ಸಮಯದಲ್ಲಿ ಗಂಟೆಯನ್ನು ಬಾರಿಸುತ್ತಾರೆ. 

66

ವಾಸ್ತು ಶಾಸ್ತ್ರದ ಪ್ರಕಾರ, ದೇವಾಲಯದಿಂದ ಹೊರಡುವಾಗ ನೀವು ಗಂಟೆಯನ್ನು ಬಾರಿಸಬಾರದು ಏಕೆಂದರೆ ಅದು ದೇವಾಲಯದ ಸಕಾರಾತ್ಮಕ ಶಕ್ತಿಯನ್ನು ಅಲ್ಲಿ ಇರುವಂತೆ ಮಾಡುತ್ತದೆ, ಅಲ್ಲಿನ ಸಕಾರಾತ್ಮಕ ಶಕ್ತಿ ನಿಮ್ಮೊಂದಿಗೆ ಬರೋದಿಲ್ಲ. ಆದ್ದರಿಂದ ದೇವಾಲಯದಿಂದ ಹೊರಡುವಾಗ ಗಂಟೆಯನ್ನು ಎಂದಿಗೂ ಬಾರಿಸಬಾರದು.

Read more Photos on
click me!

Recommended Stories