ಆರೋಗ್ಯ ಸುಧಾರಿಸೋ ಬದಲು ಅನಾರೋಗ್ಯಕ್ಕೆ ಕಾರಣವಾಗುತ್ತೆ ನೀವು ಔಷಧಿ ಇಡುವ ಜಾಗ

Published : Jul 14, 2026, 10:08 PM IST

ಪ್ರತಿ ದಿನ ಸರಿಯಾದ ಸಮಯಕ್ಕೆ ಔಷಧಿ ತೆಗೆದುಕೊಳ್ಳೋದು ಮರೆತು ಹೋಗ್ಬಾರದು ಎನ್ನುವ ಕಾರಣಕ್ಕೆ ಅನೇಕರು ಎದುರಿಗೆ ಮಾತ್ರೆಗಳನ್ನು ಇಟ್ಕೊಂಡಿರ್ತಾರೆ. ವಾಸ್ತು ಶಾಸ್ತ್ರದಲ್ಲಿ ಮಾತ್ರೆ ಹಾಗೂ ಅದನ್ನು ಇಡುವ ಜಾಗ ಎರಡಕ್ಕೂ ಮಹತ್ವ ನೀಡಲಾಗಿದೆ. ನೀವು ತಪ್ಪಾದ ಜಾಗದಲ್ಲಿ ಔಷಧಿ ಇಟ್ರೆ ಸಮಸ್ಯೆ ಡಬಲ್‌ ಆಗುತ್ತೆ.

PREV
15
ವಾಸ್ತು ಶಾಸ್ತ್ರದಲ್ಲಿ ಔಷಧಿ - ಮಾತ್ರೆ

ವಾಸ್ತು ನಂಬಿಕೆಗಳ ಪ್ರಕಾರ, ಔಷಧಿಗಳನ್ನು ತಪ್ಪಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು, ಕುಟುಂಬ ಸದಸ್ಯರಲ್ಲಿ ಮಾನಸಿಕ ಒತ್ತಡ ಉಂಟಾಗಬಹುದು. ಇದು ಆರೋಗ್ಯವನ್ನು ಸುಧಾರಿಸುವ ಬದಲು ಪದೇ ಪದೇ ಕುಟುಂಬಸ್ಥರು ಅನಾರೋಗ್ಯಕ್ಕೊಳಗಾಗಲು ಕಾರಣವಾಗುತ್ತದೆ. ಹಾಗಾಗಿ ಮನೆಯ ಕೆಲ ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ಮಾತ್ರೆಗಳನ್ನು ಇಡಬಾರದು.

25
ಅಡುಗೆಮನೆಯಲ್ಲಿ ಔಷಧಿ

ವಾಸ್ತು ಶಾಸ್ತ್ರದಲ್ಲಿ ಅಡುಗೆಮನೆಯನ್ನು ಮನೆಯ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಆಹಾರ ತಯಾರಾಗುವುದರಿಂದ ಔಷಧಿಗಳನ್ನು ಅಡುಗೆಮನೆಯಲ್ಲಿ ಇಡುವುದು ಶುಭವಲ್ಲ. ಅಡುಗೆ ಮನೆಯಲ್ಲಿ ಮಾತ್ರೆಗಳನ್ನು ಇಡೋದ್ರಿಂದ ಇದು ಮನೆಯ ಸದಸ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

35
ಬೆಡ್‌ ಬಳಿ ಔಷಧಿ ಮಾತ್ರೆ

ಅನೇಕರು ರಾತ್ರಿ ಮಲಗುವ ವೇಳೆ ಮಾತ್ರೆ ಸೇವನೆ ಮಾಡ್ತಾರೆ. ಹಾಗಾಗಿ ಬೆಡ್‌ ಬಳಿಯೇ ಮಾತ್ರೆಗಳನ್ನು ಇಟ್ಟುಕೊಂಡಿರ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಪಕ್ಕ ಅಥವಾ ತಲೆದಿಂಬಿನ ಬಳಿ ಮಾತ್ರೆಗಳನ್ನು ಇಡಬಾರದು. ಇದು ಮಾನಸಿಕ ಒತ್ತಡ, ಆತಂಕ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಿಸುವ ಸಾಧ್ಯತೆ ಇದೆ.

45
ಹಣ ಇಡುವ ಜಾಗ

ಲಾಕರ್, ನಗದು ಕಪಾಟು ಅಥವಾ ಬೆಲೆಬಾಳುವ ವಸ್ತುಗಳನ್ನು ಇಡುವ ಸ್ಥಳದಲ್ಲಿ ಲಕ್ಷ್ಮಿ ನೆಲೆಸ್ತಾಳೆ ಅಂತ ನಂಬಲಾಗಿದೆ. ಈ ಸ್ಥಳಗಳಲ್ಲಿ ಔಷಧಿಗಳನ್ನು ಸಂಗ್ರಹಿಸುವುದನ್ನೂ ವಾಸ್ತು ಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅನಗತ್ಯ ಖರ್ಚುಗಳು, ವಿಶೇಷವಾಗಿ ಆರೋಗ್ಯ ಸಂಬಂಧಿತ ವೆಚ್ಚಗಳು ಹೆಚ್ಚಾಗಬಹುದು ಎಂಬ ನಂಬಿಕೆ ಇದೆ.

55
ಔಷಧಿ ಎಲ್ಲಿಡಬೇಕು?

ವಾಸ್ತು ಪ್ರಕಾರ, ಔಷಧಿಗಳನ್ನು ಪೂಜಾ ಕೊಠಡಿಯಲ್ಲೂ ಇಡಬಾರದು. ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ದೇವರ ಮನೆಯಿಂದ ದೂರವಿರುವ ಸ್ವಚ್ಛ ಮತ್ತು ಪ್ರತ್ಯೇಕ ಕಪಾಟಿನಲ್ಲಿ ಇಡುವುದು ಉತ್ತಮ. ಸಾಧ್ಯವಾದರೆ ಮನೆಯ ಈಶಾನ್ಯ ದಿಕ್ಕಿನ ಕಪಾಟಿನಲ್ಲಿ ಅವುಗಳನ್ನು ವ್ಯವಸ್ಥಿತವಾಗಿ ಇಡಬಹುದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

Read more Photos on
click me!

Recommended Stories