ವಾಸ್ತು ದೋಷವು ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತೆ
ಶೌಚಾಲಯಗಳಿಗೆ ಸಂಬಂಧಿಸಿದ ವಾಸ್ತು ದೋಷವು (vastu dosha) ಆರೋಗ್ಯದಿಂದ ವೃತ್ತಿಜೀವನದವರೆಗೆ ಮತ್ತು ನಿಮ್ಮ ಕುಟುಂಬ ಸಂಬಂಧಗಳ ಮೇಲೆ ಪ್ರತಿಯೊಂದರ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ವಾಸ್ತು ದೋಷಗಳ ಬಗ್ಗೆ ಗಮನ ಹರಿಸಬೇಕು.
ಶೌಚಾಲಯಗಳಿಗೆ ಸಂಬಂಧಿಸಿದ ವಾಸ್ತು ನಿಯಮಗಳು
ಮನೆಯಲ್ಲಿ ನಿರ್ಮಿಸಿದಂತಹ ಶೌಚಾಲಯಕ್ಕೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳನ್ನು ಇಲ್ಲಿ ನೀಡಲಾಗಿದೆ.ಅವುಗಳ ಬಗ್ಗೆ ಗಮನ ಹರಿಸಿದರೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಜೊತೆಗೆ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ಶೌಚಾಲಯವು ಈ ದಿಕ್ಕಿನಲ್ಲಿರಲಿ
ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ಅಥವಾ ನೈಋತ್ಯ ದಿಕ್ಕನ್ನು ಮನೆಯ ಶೌಚಾಲಯಕ್ಕೆ ಉತ್ತಮ ದಿಕ್ಕು ಎಂದು ಪರಿಗಣಿಸಲಾಗಿದೆ. ಅದು ಬಿಟ್ಟು ಬೇರೆ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸುವುದರಿಂದ ಮನೆಗೆ ಸಮಸ್ಯೆಗಳು (problem) ಬಾಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈ ದಿಕ್ಕಿನಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಡಿ
ಮನೆಯ ಉತ್ತರ ಭಾಗದಲ್ಲಿ ಮರೆತು ಶೌಚಾಲಯವನ್ನು ನಿರ್ಮಿಸಬಾರದು. ಇದು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಉದ್ಯೋಗದಲ್ಲಿ ನಷ್ಟ, ಕೆಲಸ ಸಿಗದೇ ಇರುವುದು ಮೊದಲಾದ ಹಲವು ಸಮಸ್ಯೆಗಳನ್ನು ಇದು ಉಂಟು ಮಾಡುತ್ತದೆ.
ಪಿರಮಿಡ್ ಅನ್ನು ಇರಿಸಿ :
ಮನೆಯ ನೈಋತ್ಯ ದಿಕ್ಕಿನಲ್ಲಿ ಶೌಚಾಲಯವಿದ್ದರೆ, ಗೋಡೆಯ ಹೊರಭಾಗದಲ್ಲಿ ನೀವು ವಾಸ್ತು ಪಿರಮಿಡ್ ಗಳನ್ನು (pyramid) ಇಡಬಹುದು. ಇದರಿಂದ ಎಲ್ಲಾ ರೀತಿಯ ವಾಸ್ತು ದೋಷ, ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ.
ಬಾಗಿಲನ್ನು ತೆರೆದಿಡಬೇಡಿ
ಶೌಚಾಲಯದ ಬಾಗಿಲನ್ನು ಎಂದಿಗೂ ತೆರೆದಿಡಬಾರದು, ಯಾವಾಗಲೂ ಅದನ್ನು ಮುಚ್ಚಿಡಬೇಕು. ಶೌಚಾಲಯದ ಬಾಗಿಲನ್ನು ತೆರೆದು ಇರಿಸುವುದರಿಂದ ಹೆಚ್ಚಿನ ನಕಾರಾತ್ಮಕ ಶಕ್ತಿ ಒಳಗಡೆ ಸೇರುತ್ತದೆ. ಇದರಿಂದ ಮನೆಗೆ ಕೆಟ್ಟದಾಗುತ್ತದೆ ಎಂದು ನಂಬಲಾಗಿದೆ.
ಈಶಾನ್ಯ ದಿಕ್ಕಿನಲ್ಲಿ ಬೇಡ
ಈಶಾನ್ಯ ದಿಕ್ಕನ್ನು ದೇವತೆಗಳ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಶೌಚಾಲಯಗಳನ್ನು ಹೊಂದಿರುವುದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು (mental problem) ಸೃಷ್ಟಿಸುತ್ತದೆ. ಇದರಿಂದ ಹೆಚ್ಚಿನ ಅರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದುದರಿಂದ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ನಿರ್ಮಾಣ ಬೇಡ.
ಕಿಟಕಿ ಅಥವಾ ಬಾಗಿಲು
ಶೌಚಾಲಯದ ಕಿಟಕಿ (bathroom window) ಅಥವಾ ಬಾಗಿಲು ಎಂದಿಗೂ ದಕ್ಷಿಣ ದಿಕ್ಕಿನಲ್ಲಿರಬಾರದು. ಅಲ್ಲದೆ, ಸೆರಾಮಿಕ್ ಟೈಲ್ಸ್ ಅನ್ನು ಯಾವಾಗಲೂ ಶೌಚಾಲಯದಲ್ಲಿ ಬಳಸಬೇಕು. ಈ ದಿಕ್ಕಿನಲ್ಲಿ ಬಾಗಿಲು ಅಥವಾ ಕಿಟಕಿಗಳಿದ್ದರೆ ಅದರಿಂದ ಹೆಚ್ಚು ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.