Vastu Tips: ರೆಫ್ರಿಜರೇಟರ್ ಮೇಲೆ ನಾವು ಸಾಮಾನ್ಯವಾಗಿ ಏನೇನೋ ವಸ್ತುಗಳನ್ನು ಇಡುತ್ತೇವೆ. ಅದರಲ್ಲೂ ಹೆಚ್ಚಾಗಿ ಸಣ್ಣ ವಸ್ತುಗಳನ್ನು ಹೆಚ್ಚಾಗಿ ಅದರ ಮೇಲೆ ಇಡಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯಾಗಿ ವಸ್ತುಗಳನ್ನು ಇಡೋದ್ರಿಂದ ಆರ್ಥಿಕ ನಷ್ಟ ಆಗುತ್ತೆ ಅನ್ನೋದು ನಿಮಗೆ ಗೊತ್ತಾ?
ಸಾಮಾನ್ಯವಾಗಿ ಎಲ್ಲರೂ ಎಲ್ಲರ ಮನೆಯಲ್ಲೂ ಸಣ್ಣ ಪುಟ್ಟ ವಸ್ತುಗಳನ್ನು ಫ್ರಿಜ್ ಮೇಲೆ ಇಟ್ಟುಬಿಡುತ್ತಾರೆ. ಬೇಗನೆ ಕೈಗೆ ಸಿಗುತ್ತೆ ಎನ್ನುವ ಕಾರಣಕ್ಕೆ ಜನ ಹೀಗೆ ಮಾಡುತ್ತಾರೆ. ಆದರೆ ಇದರಿಂದ ಎಷ್ಟೊಂದು ಸಮಸ್ಯೆಯಾಗುತ್ತೆ ಅನ್ನೋದು ನಿಮಗೆ ಗೊತ್ತಾ?
26
ವಾಸ್ತು ದೋಷದ ಅಪಾಯ
ವಾಸ್ತು ಶಾಸ್ತ್ರದ ಪ್ರಕಾರ, ರೆಫ್ರಿಜರೇಟರ್ ಮೇಲೆ ಇರಿಸಲಾಗಿರುವ ಕೆಲವು ವಸ್ತುಗಳು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರವು ರೆಫ್ರಿಜರೇಟರ್‌ನಲ್ಲಿ ಕೆಲವೊಂದು ವಸ್ತುಗಳನ್ನು ತಪ್ಪಿಯೂ ಇಡಬಾರದು ಎಂದು ಸೂಚಿಸುತ್ತೆ. ಅಂತಹ ವಸ್ತುಗಳ ಲಿಸ್ಟ್ ಇಲ್ಲಿದೆ. ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು. ರೆಫ್ರಿಜರೇಟರ್‌ನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ನೋಡೋಣ..
36
ಔಷಧಿಗಳನ್ನು ಇಡೋದನ್ನು ತಪ್ಪಿಸಿ
ಜನರು ಸಾಮಾನ್ಯವಾಗಿ ಔಷಧಿಗಳನ್ನು ರೆಫ್ರಿಜರೇಟರ್ ಮೇಲೆ ಇಟ್ಟುಬಿಡುತತರೆ., ಇದನ್ನು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಔಷಧಿಗಳನ್ನು ತಪ್ಪಿಯೂ ಕೂಡ ರೆಫ್ರಿಜರೇಟರ್ ಮೇಲೆ ಇಡಬಾರದು, ಇದು ಆರೋಗ್ಯ ಮತ್ತು ಸಂಪತ್ತು ಎರಡನ್ನೂ ಕಳೆದುಕೊಳ್ಳಲು ಕಾರಣವಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ರೆಫ್ರಿಜರೇಟರ್ ಮೇಲೆ ಇರಿಸಲಾದ ಟ್ರೋಫಿ ಅಥವಾ ಪ್ರಶಸ್ತಿಯು ನಕಾರಾತ್ಮಕತೆಯನ್ನು ಸೂಚಿಸುತ್ತದೆ. ತಪ್ಪಿಯೂ ಸಹ ರೆಫ್ರಿಜರೇಟರ್ ಮೇಲೆ ಟ್ರೋಫಿ ಅಥವಾ ಪ್ರಶಸ್ತಿಯನ್ನು ಇಡುವುದನ್ನು ತಪ್ಪಿಸಿ. ಇದು ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು.
56
ಹಣ ಮತ್ತು ಆಭರಣಗಳು
ಕೆಲವರು ಪ್ರಯಾಣ ಮಾಡುವಾಗ ತಮ್ಮ ಹಣ ಅಥವಾ ಹ್ಯಾಂಡ್ ಬ್ಯಾಗ್ ಮರೆತು ಹೋಗಬಾರದು ಎನ್ನುವ ಕಾರಣಕ್ಕೆ, ಎದುರಲ್ಲೇ ಕಾಣುವಂತೆ ರೆಫ್ರಿಜರೇಟರ್ ಮೇಲೆ ಇಡುತ್ತಾರೆ. ಆದಾಗ್ಯೂ, ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸವನ್ನು ತಪ್ಪು ಎಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು.
66
ಗಿಡಗಳನ್ನು ಇಡಬೇಡಿ
ಜನರು ಸಾಮಾನ್ಯವಾಗಿ ಅಲಂಕಾರಕ್ಕಾಗಿ ರೆಫ್ರಿಜರೇಟರ್‌ಗಳ ಮೇಲೆ ಸಣ್ಣ ಸಸ್ಯಗಳನ್ನು ಇಡುತ್ತಾರೆ. ಅವು ಸುಂದರವಾಗಿ ಕಾಣಬಹುದಾದರೂ, ಅವು ಕುಟುಂಬದ ತೊಂದರೆ ಮತ್ತು ಆರ್ಥಿಕ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ವಾಸ್ತು ಶಾಸ್ತ್ರವು ಇದನ್ನು ವಾಸ್ತು ದೋಷಕ್ಕೆ ಒಂದು ಕಾರಣವೆಂದು ಪರಿಗಣಿಸುತ್ತದೆ.