ಮನೆಕಟ್ಟುವಾಗಲೇ ನಾವು ತಿಳಿದುಕೊಳ್ಳಬೇಕು. ಮನೆಯ ಮೇಲೆ ಯಾವುದರ ನೆರಳು ಬೀಳುತ್ತದೆ. ಎಷ್ಟು ಹೊತ್ತಿಗೆ ಬೀಳುತ್ತದೆ ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲೇಬೇಕು. ದೊಡ್ಡ ಕಟ್ಟಡ, ದೇವಸ್ಥಾನ, ದೇವಸ್ಥಾನದ ಧ್ವಜ ಇತ್ಯಾದಿ ಯಾವುದೇ ನೆರಳು ಮನೆಯ ಮೇಲೆ ಬೀಳಬಹುದು. ಅದನ್ನು ತಿಳಿದುಕೊಳ್ಳಬೇಕು. ವಾಸ್ತು ಪ್ರಕಾರ ಮನೆಯ ಮೇಲೆ ಈ ಐದು ನೆರಳು ಬೀಳದಂತೆ ನೋಡಿಕೊಳ್ಳಬೇಕು.
ದೇವಸ್ಥಾನದ ಧ್ವಜ:ದೇವಸ್ಥಾನದ ನೂರು ಅಡಿ ವ್ಯಾಪ್ತಿಯೊಳಗೆ ಮನೆಯ ಮೇಲೆ ದೇವಸ್ಥಾನದ ಧ್ವಜದ ನೆರಳು ಬೀಳುತಿದ್ದರೆ ಅದರಿಂದ ವಾಸ್ತು ದೋಷ ಉಂಟಾಗುತ್ತದೆ. ದೇವಸ್ಥಾನದ ಎತ್ತರ ಕಡಿಮೆ ಇದ್ದು, ಅದರ ನೆರಳು ಮನೆಯ ಮೇಲೆ ಬೀಳದೆ ಹೋದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ದೇವಸ್ಥಾನದ ಧ್ವಜದ ಎತ್ತರಕ್ಕಿಂತ ಎರಡು ಪಟ್ಟು ದೂರದಲ್ಲಿ ಮನೆ ಕಟ್ಟಿದರೆ, ವಾಸ್ತು ದೋಷ ಉಂಟಾಗುವುದಿಲ್ಲ. ಆದುದರಿಂದ ದೇವಸ್ಥಾನದ ಬಳಿ ಮನೆ ಕಟ್ಟುವಾಗ ಇದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ,
ದೇವಸ್ಥಾನದ ನೆರಳು:ದೇವಸ್ಥಾನದ ನೆರಳು ಕೂಡಾ ವಾಸ್ತುದೋಷಕ್ಕೆ ಕಾರಣವಾಗಬಹುದು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಯಾವುದೇ ದೇಗುಲದ ನೆರಳು ಮನೆಯ ಮೇಲೆ ಬೀಳುತಿದ್ದರೆ, ಅದರಿಂದ ವಾಸ್ತುದೋಷ ಉಂಟಾಗುತ್ತದೆ. ಇದರಿಂದ ಗ್ರಹ ಕಲಹ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಉಂಟಾಗುತ್ತದೆ.
ಪರ್ವತದ ನೆರಳು:ಪೂರ್ವ ದಿಕ್ಕಿನಲ್ಲಿರುವ ಯಾವುದೇ ಪರ್ವತ ಅಥವಾ ಕಟ್ಟಡದ ನೆರಳು ಮನೆಯ ಮೇಲೆ ಬೀಳುತ್ತಿದ್ದರೆ, ಅದು ವಾಸ್ತುದೋಷಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಇದರಿಂದ ಮಾನ ಸಮ್ಮಾನ ಕುಸಿಯುತ್ತದೆ. ಸೋಲು ಉಂಟಾಗುತ್ತದೆ.
ಮತ್ತೊಂದು ಮನೆಯ ನೆರಳು:ಮನೆಯ ಮೇಲೆ ಇನ್ನೊಂದು ಮನೆ ಅಥವಾ ಕಟ್ಟಡದ ನೆರಳು ಬಿದ್ದರೂ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪರಿವಾರ ವಿನಾಶದ ಅಂಚಿಗೆ ಹೋಗಬಹುದು.
ಬೃಹತ್ ಮರದ ನೆರಳು:ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಯಾವುದೇ ಮರದ ನೆರಳು ಮನೆಯ ಮೇಲೆ ಬೀಳುತಿದ್ದರೆ, ಅದರಿಂದ ವಾಸ್ತುದೋಷ ಉಂಟಾಗುತ್ತದೆ. ಮನೆಯ ಆಗ್ನೇಯ ದಿಕ್ಕಿನಲ್ಲಿ ವಟ ವೃಕ್ಷ, ಅಶ್ವತ್ಥ ಮರ ಇದ್ದರೂ ವಾಸ್ತು ದೋಷ ಉಂಟಾಗುತ್ತದೆ.