ಪ್ರತಿಯೊಬ್ಬರಿಗೂ ತಮ್ಮ ಮನೆ ಆರೋಗ್ಯ, ಐಶ್ವರ್ಯ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಬೇಕೆಂಬುದೇ ಆಸೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಮನೆಯ ಆರ್ಥಿಕ ಸ್ಥಿತಿಯೇ ಹದಗೆಡುತ್ತದೆ. ಸಂಬಂಧಗಳು ಹಾಳಾಗುತ್ತವೆ. ಹಾಗಾಗಿ ನಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುವುದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಯುವಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ. ಅದರ ಪ್ರಕಾರ, ಮನೆಯಲ್ಲಿ ಕೆಲವು ಸ್ಥಳಗಳಲ್ಲಿ ಕಸವನ್ನು ಅಥವಾ ಕಸದ ಬುಟ್ಟಿಯನ್ನು ಇಡಬಾರದು. ಇಲ್ಲದಿದ್ದರೆ ಅದು ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಹಾಗಾದರೆ ಆ ಸ್ಥಳಗಳು ಯಾವುವು ನೋಡೋಣ ಬನ್ನಿ…