Vastu tips for wealth kannada: ಮನೆಯಲ್ಲಿ ಜಿರಲೆ ಓಡಾಡುವುದನ್ನು ನೋಡಿದ್ರೆ ಸಾಕು, ಕಿರುಚಿಕೊಂಡು ಓಡುವವರೇ ಹೆಚ್ಚು. ಆದರೆ, ಇದೇ ಜಿರಲೆಗೂ ನಿಮ್ಮ ಮನೆಗೆ ಬರುವ ಹಣಕ್ಕೂ ಒಂದು ರಹಸ್ಯ ಸಂಬಂಧವಿದೆ ಅಂದ್ರೆ ನಂಬುತ್ತೀರಾ?.
ಲಕ್ಷ್ಮಿಯ ವಾಹನ ಸಾಮಾನ್ಯವಾಗಿ ಗೂಬೆ, ಆನೆಯನ್ನು ಲಕ್ಷ್ಮಿಯ ಅಂಶವಾಗಿ ನೋಡುತ್ತೇವೆ. ಆದರೆ, ಕೆಲವು ಉತ್ತರ ಭಾರತದ ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಇದ್ದಕ್ಕಿದ್ದಂತೆ 'ಬಿಳಿ' ಜಿರಲೆ ಕಾಣಿಸಿಕೊಂಡರೆ ಅದು ಹಣ ಬರುವ ಸಂಕೇತ ಎಂದು ನಂಬಲಾಗುತ್ತದೆ!
25
ವಾಸ್ತು ಶಾಸ್ತ ಏನ್ ಹೇಳುತ್ತೆ?
ವಾಸ್ತು ಶಾಸ್ತ ಏನ್ ಹೇಳುತ್ತೆ? ವಾಸ್ತು ನಿಯಮಗಳ ಪ್ರಕಾರ, ಜಿರಲೆಗಳು 'ರಾಹು' ಮತ್ತು 'ಶನಿ' ಗ್ರಹಗಳ ಪ್ರಭಾವವನ್ನು ಸೂಚಿಸುತ್ತವೆ. ಮನೆಯಲ್ಲಿ ಅತಿಯಾಗಿ ಜಿರಲೆಗಳು ತುಂಬಿದ್ದರೆ, ಅಲ್ಲಿ ನಕಾರಾತ್ಮಕ ಶಕ್ತಿ (Negative energy) ಮತ್ತು ಹಣದ ನಷ್ಟ ಹೆಚ್ಚಾಗಿರುವುದನ್ನು ಇದು ತೋರಿಸುತ್ತದೆ.
35
ಅಡುಗೆಮನೆಯಲ್ಲಿದ್ದರೆ ಅರ್ಥವೇನು?
ಅಡುಗೆಮನೆಯಲ್ಲಿದ್ದರೆ ಅರ್ಥವೇನು? ಅಡುಗೆಮನೆ ಅನ್ನಪೂರ್ಣೆಯ ವಾಸಸ್ಥಾನ. ಅಲ್ಲಿ ಜಿರಲೆಗಳು ರಾಜ್ಯಭಾರ ನಡೆಸಿದರೆ, ಕುಟುಂಬ ಸದಸ್ಯರಿಗೆ ವೈದ್ಯಕೀಯ ಖರ್ಚುಗಳು ಹೆಚ್ಚಾಗಿ, ಕೈಯಲ್ಲಿರುವ ಹಣವೆಲ್ಲಾ ಖಾಲಿಯಾಗುತ್ತದೆ.
ಲವಂಗ ಅಥವಾ ಕರ್ಪೂರ ಇಡಿ ಮನೆಯಲ್ಲಿ ಬಡತನ ದೂರವಾಗಿ, ಲಕ್ಷ್ಮಿ ಕಟಾಕ್ಷ ಇರಬೇಕೆಂದರೆ, ಮನೆಯ ಮೂಲೆಗಳಲ್ಲಿ, ವಿಶೇಷವಾಗಿ ಅಡುಗೆಮನೆಯಲ್ಲಿ ಲವಂಗ ಅಥವಾ ಕರ್ಪೂರವನ್ನು ಇಡಿ. ಇದರ ವಾಸನೆಗೆ ರಾಹು ದೋಷವೂ ನಿವಾರಣೆಯಾಗುತ್ತದೆ, ಜಿರಲೆಗಳೂ ಮನೆಯಿಂದ ಓಡಿಹೋಗುತ್ತವೆ!
55
ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ
ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ ವಾಸ್ತು ಶಾಸ್ತ್ರವನ್ನು ಹೊರತುಪಡಿಸಿ, ಜಿರಲೆಗಳು ತಮ್ಮ ಜೊಲ್ಲು ಮತ್ತು ಹಿಕ್ಕೆಗಳ ಮೂಲಕ ಟೈಫಾಯ್ಡ್, ಅಲರ್ಜಿಯಂತಹ ರೋಗಗಳನ್ನು ಹರಡುತ್ತವೆ. ಆರೋಗ್ಯ ಕೆಟ್ಟರೆ, ಲಕ್ಷ್ಮಿ ಆ ಜಾಗದಲ್ಲಿ ಉಳಿಯುವುದಿಲ್ಲ ಎನ್ನುವುದೇ ವಾಸ್ತವ.