ನೀರಿನ ಬಳಕೆಗೆ ಏನು ಹೇಳುತ್ತೆ ವಾಸ್ತು ಶಾಸ್ತ್ರ, ಯಾವುದೊಳ್ಳೆಯದು?
First Published | Apr 6, 2021, 6:17 PM ISTಮಾನವ ಶರೀರವು ಪಂಚಭೂತಗಳಿಂದ (ಗಾಳಿ, ಅಗ್ನಿ, ಭೂಮಿ, ನೀರು ಮತ್ತು ಆಕಾಶ) ಕೂಡಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಇವುಗಳಿಲ್ಲದೇ ಜೀವನ ಅಸಾಧ್ಯವಾದ್ದರಿಂದ ಗಾಳಿ ಮತ್ತು ನೀರು ಇವುಗಳಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ನೀರಿನ ಅಧಿಪತಿ ವರುಣ ದೇವ ಮತ್ತು ಈ ನೀರು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ನೀರನ್ನು ಸರಿಯಾಗಿ ಬಳಸಿಕೊಂಡರೆ ಚಂದ್ರ ಮತ್ತು ಶುಕ್ರ ಗ್ರಹಗಳೆರಡೂ ಬಲಗೊಳ್ಳಬಹುದು.