ಕರ್ಪೂರವನ್ನು ಈ ರೀತಿ ಬಳಸಿದ್ರೆ, ಜೀವನ ಬದಲಾಗುತ್ತೆ ನೋಡಿ!

First Published | Nov 28, 2022, 4:28 PM IST

ಹಿಂದೂ ಧರ್ಮದಲ್ಲಿ ಆರಾಧನೆ ಬಹಳ ಮುಖ್ಯ ಮತ್ತು ಈ ಕಾರಣದಿಂದಾಗಿ, ದೇವರುಗಳು ಮತ್ತು ದೇವತೆಗಳನ್ನು ಆಚರಣೆಗಳೊಂದಿಗೆ ಪೂಜಿಸಲಾಗುತ್ತೆ. ಪೂಜೆ ಮಾಡುವಾಗ, ವ್ಯಕ್ತಿ ದೀಪ, ಧೂಪ, ಊದುಬತ್ತಿ, ಹೂಮಾಲೆ ಇತ್ಯಾದಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. ಈ ಪೂಜಾ ಸಾಮಗ್ರಿಗಳಲ್ಲಿ ಕರ್ಪೂರ ಮುಖ್ಯವಾದ ಸಾಮಗ್ರಿಯಾಗಿದೆ. ಅದರ ಪ್ರಾಮುಖ್ಯತೆ ಬಗ್ಗೆ ಇಲ್ಲಿ ತಿಳಿಯಿರಿ. 

ಹಿಂದೂ ಧರ್ಮದಲ್ಲಿ ಆರಾಧನೆ ಬಹಳ ಮುಖ್ಯ ಮತ್ತು ಈ ಕಾರಣದಿಂದಾಗಿ, ದೇವರುಗಳು ಮತ್ತು ದೇವತೆಗಳನ್ನು ಆಚರಣೆಗಳೊಂದಿಗೆ ಪೂಜಿಸಲಾಗುತ್ತೆ. ಪೂಜೆ ಮಾಡುವಾಗ, ವ್ಯಕ್ತಿ ದೀಪ, ಧೂಪ, ಊದುಬತ್ತಿ, ಹೂಮಾಲೆ ಇತ್ಯಾದಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. ಈ ಪೂಜಾ ಸಾಮಗ್ರಿಗಳಲ್ಲಿ ಕರ್ಪೂರ (Camphor) ಮುಖ್ಯವಾದ ಸಾಮಗ್ರಿಯಾಗಿದೆ. ಅದರ ಪ್ರಾಮುಖ್ಯತೆ ಬಗ್ಗೆ ಇಲ್ಲಿ ತಿಳಿಯಿರಿ. 

ಮನೆಯಲ್ಲಿ ಸಂತೋಷ ಮತ್ತು ಶಾಂತಿಗಾಗಿ: ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಗಾಗಿ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತುಪ್ಪದಲ್ಲಿ ಕರ್ಪೂರವನ್ನು ನೆನೆಸಿ, ಅದನ್ನು ಸುಟ್ಟು ಅದರ ಪರಿಮಳವನ್ನು ಮನೆಯಾದ್ಯಂತ ಹರಡಿ. ಇದನ್ನು ಮಾಡೋದರಿಂದ, ಮನೆಯಲ್ಲಿ ನಕಾರಾತ್ಮಕ ಶಕ್ತಿ(Negative energy ) ತೆಗೆದುಹಾಕಲಾಗುತ್ತೆ ಮತ್ತು ಮನೆಯ ಸದಸ್ಯರ ನಡುವೆ ಪರಸ್ಪರ ಪ್ರೀತಿ ಉಳಿಯುತ್ತೆ. ಇದರೊಂದಿಗೆ, ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಶಾಂತಿ ಇರುತ್ತೆ ಮತ್ತು ಸಕಾರಾತ್ಮಕ ಶಕ್ತಿ ಉಳಿಯುತ್ತೆ.

Tap to resize

ದೃಷ್ಟಿ ತೆಗೆಯಲು (Evil eye): ದೃಷ್ಟಿ ತಾಗಿದೆ ಎಂದು ಅನಿಸಿದರೆ ಅಂತಹ ಕುಟುಂಬದಲ್ಲಿನ ವ್ಯಕ್ತಿ ನೇರವಾಗಿ ನಿಲ್ಲಬೇಕು. ಇದರ ನಂತರ, ಕರ್ಪೂರದ ತುಂಡನ್ನು ತೆಗೆದುಕೊಳ್ಳಿ ಮತ್ತು ಗಡಿಯಾರ ತಿರುಗೋ ಹಾಗೆ  ತಲೆಯಿಂದ ಕಾಲಿನವರೆಗೆ ಮೂರು ಬಾರಿ ದೃಷ್ಟಿ ತೆಗೆಯಿರಿ. ಇದರ ನಂತರ, ಕರ್ಪೂರವನ್ನು ಅಲ್ಲಿ ನೆಲದ ಮೇಲೆ ಸುಟ್ಟುಹಾಕಿ. ಇದನ್ನು ಮಾಡುವಾಗ,  ಅದನ್ನು ನೆಲದ ಮೇಲೆ ಇರಿಸಿ ಮತ್ತು ಅದಕ್ಕೆ ನೇರವಾಗಿ ಬೆಂಕಿ ಹಚ್ಚಿ. ಇದನ್ನು ಮಾಡೋದರಿಂದ,ಕೆಟ್ಟ ದೃಷ್ಟಿ ದೂರವಾಗುತ್ತೆ.

ಹಣವನ್ನು(Money) ಪಡೆಯಲು: ಶಾಸ್ತ್ರದ ಪ್ರಕಾರ, ಗುಲಾಬಿ ಹೂವಿನಲ್ಲಿ ಕರ್ಪೂರದ ತುಂಡನ್ನು ಇರಿಸಿ. ನಂತರ ಸಂಜೆ, ಹೂವಿನಲ್ಲಿ ಕರ್ಪೂರವನ್ನು ಸುಟ್ಟು, ದುರ್ಗಾ ದೇವಿಗೆ ಹೂವನ್ನು ಅರ್ಪಿಸಿ. ಇದು ನಿಮಗೆ ಹಠಾತ್ ಹಣ ನೀಡುತ್ತೆ ಮತ್ತು  ಸ್ಥಗಿತಗೊಂಡ ಹಣ ಸಹ ಪುನಃ ಕೈ ಸೇರುತ್ತೆ.  ಈ ಕೆಲಸವನ್ನು ಯಾವಾಗ ಬೇಕಾದರೂ ಪ್ರಾರಂಭಿಸಬಹುದು ಮತ್ತು ಕನಿಷ್ಠ 43 ದಿನಗಳವರೆಗೆ ಇದನ್ನು ಮಾಡಬೇಕು. ನವರಾತ್ರಿಯ ಸಮಯದಲ್ಲಿ ಈ ಕೆಲಸ ಮಾಡಿದ್ರೆ, ಹೆಚ್ಚು ಸಕಾರಾತ್ಮಕ ಪರಿಣಾಮ ನೋಡಬಹುದು.

ಆರೋಗ್ಯ (Health) ಸುಧಾರಿಸಲು: ನಿಮ್ಮ ಆರೋಗ್ಯವು ದೀರ್ಘಕಾಲದಿಂದ ಹದಗೆಡುತ್ತಿದ್ದರೆ, ಆಗ ಕರ್ಪೂರವನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಬಟ್ಟೆಯಲ್ಲಿ ಕಟ್ಟಿಕೊಂಡು ಇರಿಸಿ ಮತ್ತು ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಅದರ ವಾಸನೆ ನೋಡುತ್ತಿರಿ. ಹಾಗೆ ಮಾಡೋದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತೆ. ರಾತ್ರಿ ಮಲಗುವಾಗ ಕರ್ಪೂರವನ್ನು ದಿಂಬಿನ ಕೆಳಗೆ ಇಡಬಹುದು. ಇದನ್ನು ಮಾಡೋದರಿಂದ ಸಹ ಪ್ರಯೋಜನ ಪಡೆಯಬಹುದು.

ಕೆಲಸದ(Work) ಸಮಸ್ಯೆ ನಿವಾರಿಸಲು: ಕೆಲಸ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ಆಗ ಕರ್ಪೂರವನ್ನು ಕರವಸ್ತ್ರದಲ್ಲಿ ಕಟ್ಟಿ ಮತ್ತು ಅದನ್ನು ನಿಮ್ಮ ಕೆಲಸದ ಮೇಜಿನ ಬಳಿ ಇರಿಸಿ. ಹಾಗೆ ಮಾಡುವ ಮೂಲಕ, ಕರ್ಪೂರ ತನ್ನ ಸಕಾರಾತ್ಮಕ ಶಕ್ತಿಯಿಂದ ಸುತ್ತಮುತ್ತಲಿನ ಪರಿಸರವನ್ನು ಸಕಾರಾತ್ಮಕಗೊಳಿಸುತ್ತೆ.

Latest Videos

click me!