ಕನಸಿನಲ್ಲಿ ಕೋತಿ: ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ?

First Published | Nov 24, 2022, 5:45 PM IST

ವೈದಿಕ ಜ್ಯೋತಿಷ್ಯವು ನಮ್ಮ ಜೀವನವನ್ನು ಶ್ರೀಮಂತಗೊಳಿಸಲು ಸಹಾಯ ಮಾಡುವ ಅನೇಕ ಆಲೋಚನೆ ಮತ್ತು ದೃಷ್ಟಿಕೋನಗಳನ್ನು ನೀಡುತ್ತೆ. ಇದರಲ್ಲಿ ಕನಸುಗಳ ಬಗ್ಗೆ ಸಹ ಮಾಹಿತಿ ನೀಡಲಾಗಿದೆ. ಕೋತಿಗಳು ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಯಾಕಂದ್ರೆ ಅವು ನಮ್ಮ ಭೂಮಿಯೊಂದಿಗೆ ನಿಕಟ ಸಂಬಂಧ ಹೊಂದಿವೆ. ನಾವು ಕೋತಿಗಳಿಗೆ ಆಹಾರ ನೀಡಿದಾಗ, ಅವು ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡಬಲ್ಲವು. ಅವು ನಮ್ಮ ಜೀವನದಲ್ಲಿ ಇರುವ ನಕಾರಾತ್ಮಕ ಚೈತನ್ಯವನ್ನು (Negative Energy) ದೂರಮಾಡಲು ಸಹಾಯ ಮಾಡುತ್ತವೆ.
 

ವಿವಿಧ ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಕೋತಿಗಳು(Monkey) ಮಾನವ ವಿಕಾಸದೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ನಮಗೆ ತಿಳಿದಿದೆ. ಹಾಗೆಯೇ ಅವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮಲ್ಲಿ ಕೋತಿಗಳು ಸಾಕುಪ್ರಾಣಿಗಳಾಗಿ ಇಲ್ಲದಿದ್ದರೂ, ಅವುಗಳನ್ನು ನಮ್ಮ ಮನೆಗಳ ಬಳಿ, ವಿಶೇಷವಾಗಿ ಹಳ್ಳಿಗಳಲ್ಲಿ ಕಾಣಬಹುದು. ಈ ಮೂಲಕ ಕೋತಿಗಳು ಮಾನವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪ್ರಾಣಿ ಎಂದು ಹೇಳಬಹುದು.

ಕೋತಿಗಳಿಗೆ ಆಹಾರ (Food) ನೀಡುವುದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳಿವೆ, ಹಾಗೆಯೇ ಕನಸಿನಲ್ಲಿ ಕೋತಿಯನ್ನು ನೋಡೋದರ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಕನಸಿನಲ್ಲಿ ಕೋತಿಗಳನ್ನು ನೋಡೋದ್ರಿಂದ ಏನಾಗುತ್ತೆ ಅನ್ನೋದರ ಬಗ್ಗೆ ತಿಳಿಯೋಣ .

Tap to resize

ಕನಸಿನಲ್ಲಿ ಕೋತಿ ಕೋಪಗೊಳ್ಳೋ(Angry) ಹಾಗೆ ನೋಡಿದ್ರೆ ಏನರ್ಥ?

ಕನಸಿನಲ್ಲಿ ಕೋತಿ ಕೋಪಗೊಳ್ಳೋ ಹಾಗೆ ನೋಡಿದ್ರೆ, ನಾವು ಯಾರೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆಯೋ ಅವರೊಂದಿಗೆ ಬಿರುಕು ಉಂಟಾಗಬಹುದು ಎಂದು ಅದು ಸೂಚಿಸುತ್ತೆ. ಅದು ನಮ್ಮ ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು, ಯಾರೇ ಆಗಿರಬಹುದು.

ಸಂತೋಷದ(Happy) ಕೋತಿಯನ್ನು ನೋಡೋದು ಒಳ್ಳೆಯದಲ್ಲ.

ಕನಸಿನಲ್ಲಿ ನೋಡುವ ಕೋತಿ ಸಂತೋಷವಾಗಿದ್ದರೆ, ಅದು ಸಕಾರಾತ್ಮಕ ಸಂಕೇತವಲ್ಲ. ಇದು ನಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗಿನ ನಮ್ಮ ಬಂಧವು ಹದಗೆಡಬಹುದು ಎಂಬುದರ ಸಂಕೇತವಾಗಿದೆ.

ಕೋತಿ ತಿನ್ನೋದನ್ನು ನೋಡಿದ್ರೆ ಹಾನಿಯಾಗಬಹುದು ಎಂದರ್ಥ

ಕೋತಿ ಕನಸಿನಲ್ಲಿ(Dreams) ಏನನ್ನಾದರೂ ತಿನ್ನೋದನ್ನು ನೋಡಿದಾಗ, ಅದು  ಆರ್ಥಿಕ ಸ್ಥಿತಿಯ ಮೇಲೆ  ಪರಿಣಾಮ ಬೀರಬಹುದು ಎಂಬುದರ ಸೂಚನೆಯಾಗಿದೆ. ಆರ್ಥಿಕ ರಂಗದಲ್ಲಿ ನಷ್ಟದ ಸಾಧ್ಯತೆಯನ್ನು ಅದು ಸೂಚಿಸುತ್ತೆ. 

ಒಂದು ವೇಳೆ ನಿಮಗೆ ಕನಸಿನಲ್ಲಿ ಕೋತಿ ತಿನ್ನುತ್ತಿರುವಂತೆ ಕಂಡರೆ ಮುಂದೆಯಿಂದ ಪ್ರಯೋಜನಕಾರಿ ಎಂದು ತೋರುವ ಯಾವುದೇ ಕೆಲಸ ಪ್ರಯತ್ನಿಸಬೇಡಿ ಮತ್ತು ಮಾಡಬೇಡಿ, ಅದು ನಮ್ಮನ್ನು ನಷ್ಟದ(Failure) ಸುಳಿಯಲ್ಲಿ ಸಿಲುಕಿಸುತ್ತೆ. ಹಾಗಾಗಿ ಜಾಗರೂಕರಾಗಿರೋದು ಮುಖ್ಯ.

ಮಂಗಗಳ ಕಡಿತ ಅಂದರೆ ಆರೋಗ್ಯ(Health) ಹದಗೆಡುವುದು ಎಂದರ್ಥ

ಕೋತಿಯೊಂದು ಬಂದು ನಮ್ಮನ್ನು ಕಚ್ಚಿದಂತೆ ಕನಸು ಕಂಡರೆ, ಅದನ್ನ ಇಗ್ನೋರ್ ಮಾಡಬೇಡಿ. ಯಾಕಂದ್ರೆ ಅದು ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದರ್ಥ.ಹಾಗಾಗಿ ಹುಷಾರಾಗಿರಿ! 

Latest Videos

click me!