ಇತ್ತೀಚೆಗೆ ವಾಸ್ತು ಶಾಸ್ತ್ರವನ್ನು(Vaastu shastra) ಕಟ್ಟಡ ನಿರ್ಮಾಣದಲ್ಲಿ ಸಾಕಷ್ಟು ಬಳಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ವಾಸ್ತುವಿನ ಪ್ರಕಾರ ತನ್ನ ಮನೆಯನ್ನು ನಿರ್ಮಿಸುತ್ತಿದ್ದಾನೆ. ಮನೆಯೊಳಗಿನ ಅಲಂಕಾರವನ್ನು ಸಹ ವಾಸ್ತು ಪ್ರಕಾರ ಮಾಡಲು ಪ್ರಾರಂಭಿಸಲಾಗಿದೆ. ವಾಸ್ತುವಿನಲ್ಲಿ ತಿಳಿಸಿದಂತೆ ಯಾವ ಮರಗಳಿಂದ ಮನೆಯ ಅಲಂಕಾರ ಮಾಡಬಹುದು ಮತ್ತು ಯಾವ ಮರದಿಂದ ಮನೆಯ ಅಲಂಕಾರ ಮಾಡಬಾರದು ಅನ್ನೋದನ್ನು ತಿಳಿಯಿರಿ.
ಜನರು ತಮ್ಮ ಮನೆಯನ್ನು ಅಲಂಕರಿಸಲು ವಿವಿಧ ರೀತಿಯ ಮರದ ವಸ್ತುಗಳನ್ನು ಒಳಗೊಂಡಂತೆ ಅನೇಕ ವಸ್ತುಗಳನ್ನು ಬಳಸುತ್ತಾರೆ, ಆದರೆ ಇದು ಯಾವಾಗಲೂ ಪ್ರಯೋಜನಕಾರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಈ ವಿಶೇಷ ರೀತಿಯ ಮರ ಇಡುವುದು ತುಂಬಾ ಅಶುಭವೆಂದು(Unlucky) ಪರಿಗಣಿಸಲಾಗುತ್ತೆ. ಆದ್ದರಿಂದ ನೀವು ಅಂತಹ ವಸ್ತುವನ್ನು ಖರೀದಿಸಿದಾಗಲೆಲ್ಲಾ, ಮೊದಲನೆಯದಾಗಿ, ಅವುಗಳನ್ನು ತಯಾರಿಸಲು ಯಾವ ರೀತಿಯ ಮರ ಬಳಸಲಾಗಿದೆ ಎಂದು ನೋಡಿ.
ಹಾಲು ಬರುವ ಮರ
ನೀವು ಹಾಲು ಬರುವ ಮರಗಳನ್ನು ಅನೇಕ ಸ್ಥಳಗಳಲ್ಲಿ ನೋಡಿರಬಹುದು, ಅದರ ಕೊಂಬೆ ಅಥವಾ ಎಲೆಗಳು(Leaves) ಮುರಿದಾಗ, ಬಿಳಿ ಬಣ್ಣದ ಅಂಟು ಪದಾರ್ಥವು ಅವುಗಳಿಂದ ಹೊರಬರುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಮರ ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು.
ರಬ್ಬರ್ ಮರ (rubber tree) ಮತ್ತು ಅಕ್ ಟ್ರೀ ಎರಡು ಮರಗಳಾಗಿದ್ದು, ಅವುಗಳಿಂದ ಈ ಬಿಳಿ ಅಂಟು ಪದಾರ್ಥವು ಬಿಡುಗಡೆಯಾಗುತ್ತೆ. ಮರವನ್ನು ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ತಪ್ಪಿಯೂ ಮನೆಗೆ ತರಬೇಡಿ.ಇದರಿಂದ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ.
ಚಿತಾಗಾರದಲ್ಲಿ(Crematorium) ಬೆಳೆಯುವ ಮರಗಳು
ಚಿತಾಗಾರದಲ್ಲಿರುವ ಮರವನ್ನು ಅಲಂಕಾರಿಕ ವಸ್ತು, ವಿಗ್ರಹ ಅಥವಾ ಫ್ರೇಮ್ ತಯಾರಿಸಲು ಬಳಸಿದ್ದರೆ, ಅದನ್ನು ಮನೆಗೆ ತರಬೇಡಿ. ಈ ರೀತಿಯ ಮರವು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಹೆಚ್ಚಿಸುತ್ತೆ.
ಚಿತಾಗಾರದಲ್ಲಿ ಬೆಳೆದ ಮರಗಳು ಮನೆಯ ಆರ್ಥಿಕ ಸಮೃದ್ಧಿಯನ್ನು ಹಾಳುಮಾಡಬಹುದು. ಚಿತಾಗಾರದಲ್ಲಿ ಚಿತೆ ಸುಡಲು ಬಳಸುವ ಮರವನ್ನು ಸಹ ಮನೆಗೆ ತರಬಾರದು. ಅಂತಹ ಮರವು ಮನೆಯಿಂದ ದೂರವಿದ್ದರೆ ಒಳ್ಳೆಯದು. ಇಲ್ಲವಾದರೆ ಮನೆಯಲ್ಲಿ ನೆಗೆಟಿವಿಟಿ(Negativity) ಆವರಿಸುತ್ತೆ.
ದುರ್ಬಲ ಮತ್ತು ಒಣಗಿದ ಮರಗಳು(Dry Trees)
ದುರ್ಬಲ ಅಥವಾ ಒಣಗಿದ ಮರವನ್ನು ಅಲಂಕಾರಿಕ ವಸ್ತು (Decorative Item) ಅಥವಾ ವಿಗ್ರಹ ತಯಾರಿಸಲು ಬಳಸಿದ್ದರೆ, ಅದನ್ನು ಮನೆಗೆ ತರಬೇಡಿ. ಗೆದ್ದಲು ಅಥವಾ ಇರುವೆಗಳಿಂದ ಟೊಳ್ಳಾದ ಮರವನ್ನು ಸಹ ಬಳಸಬೇಡಿ. ಇದರಿಂದ ಮನೆಗೆ ತೊಂದರೆಯಾಗುತ್ತೆ.
ಎಲೆಗಳು ಒಣಗಿರುವ (Dried leaves)ಮತ್ತು ಕೇವಲ ಎರಡು ಒಣಗಿದ ಕೊಂಬೆಗಳನ್ನು ಹೊಂದಿರುವ ಮರಗಳಿಂದ ತಯಾರಿಸಿದ ವಸ್ತುಗಳನ್ನು ಅಥವಾ ಮರವನ್ನು ಮನೆಗೆ ತರಬಾರದು.ಅವುಗಳಿಂದ ಮನೆಯ ಜನರಿಗೆ ತೊಂದರೆಯೇ ಹೆಚ್ಚು. ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸಮಸ್ಯೆ ಉಂಟಾಗೋದು ತಪ್ಪುತ್ತೆ.