ಕರಿಯರ್ ಅಭಿವೃದ್ಧಿಗಾಗಿ ಈ ಫೆಂಗ್ ಶುಯಿ ಟಿಪ್ಸ್ ಫಾಲೋ ಮಾಡಿ!

First Published Jan 12, 2023, 3:32 PM IST

ನೀವು ಎಷ್ಟೇ ಕಷ್ಟ ಪಟ್ಟರೂ ಕರಿಯರ್ ಬೆಳವಣಿಯಾಗೋದ್ರಲ್ಲಿ, ಏನಾದ್ರೂ ಕಷ್ಟ ಆಗ್ತಿದ್ಯಾ?, ಹಾಗಿದ್ರೆ  ಇಲ್ಲಿ ಹೇಳಿರುವ ಫೆಂಗ್ ಶುಯಿ ಟಿಪ್ಸ್ ಫಾಲೋ ಮಾಡಿ, ನಂತರ ನೀವೇ ನಿಮ್ಮ ಕರಿಯರ್ ಗ್ರೋಥ್ನಲ್ಲಿ ಆಗೋ ಮ್ಯಾಜಿಕ್ ನೋಡಿ.  

ಫೆಂಗ್ ಶುಯಿ(Feng shui) ಪ್ರಾಚೀನ ಕಾಲದಿಂದಲೂ ಜನರು ಪಾಲಿಸಿಕೊಂಡು ಬರುತ್ತಿರುವಂತಹ ಚೀನೀ ಅಭ್ಯಾಸ. ಫೆಂಗ್ ಶುಯಿಯಲ್ಲಿ ನೆಗೆಟಿವಿಟಿ ದೂರ ಮಾಡಲು, ಆರ್ಥಿಕತೆ ಹೆಚ್ಚಿಸಲು ಹಲವಾರು ಸಲಹೆಗಳನ್ನು ನೀಡಲಾಗಿದೆ. ಇಲ್ಲಿ ಸುಲಭವಾದ ಫೆಂಗ್ ಶುಯಿ ಪರಿಹಾರಗಳ ಬಗ್ಗೆ ಹೇಳಲಾಗಿದೆ, ಇದರ ಸಹಾಯದಿಂದ ನೀವು ವೃತ್ತಿಜೀವನದಲ್ಲಿ (Career) ಪ್ರಗತಿಯನ್ನು ಸಾಧಿಸಬಹುದು. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ತಿಳಿಯಲು ನೀವು ಮುಂದೆ ಓದಿ… 

ವರ್ಕ್ ಫ್ರಮ್ ಹೋಂ ಮಾಡುವ ಜನರು ತಮ್ಮ ಪ್ರೊಡಕ್ಟಿವಿಟಿ ಹೆಚ್ಚಿಸಲು ತಮ್ಮ ಕೆಲಸದ ಸ್ಥಳದಲ್ಲಿ ವಿಂಡ್ ಚೈಮ್, ಬೆಲ್ ಅಥವಾ ಮ್ಯೂಸಿಕ್ ಬಾಕ್ಸ್ (Musical box) ಇಡಬೇಕು. ಇದರಿಂದ ಪಾಸಿಟಿವ್ ಎನರ್ಜಿ ನಿಮ್ಮ ಸುತ್ತಲೂ ಇರುತ್ತೆ. ಜೊತೆಗೆ ಇದು ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ.

ಆಫೀಸಿನಲ್ಲಿ ಕೆಲಸ ಮಾಡುವ ಅಥವಾ ಮನೆಯಿಂದ ಕೆಲಸ ಮಾಡುವ ಜನರು, ತಮ್ಮ ಕೆಲಸ ಮತ್ತು ಕಠಿಣ ಪರಿಶ್ರಮವನ್ನು ಯಶಸ್ವಿಗೊಳಿಸಲು ಬಯಸೋದಾದ್ರೆ, ಈಶಾನ್ಯ ದಿಕ್ಕಿನತ್ತ ನಿಮ್ಮ ವರ್ಕ್ ಪ್ಲೇಸ್ (Work place) ಮಾಡೋದು ಉತ್ತಮ ಆಯ್ಕೆಯಾಗಿದೆ. ನಿಮ್ಮ ಕೆಲಸದ ಟೇಬಲ್ ಮೇಲೆ ಕೆಂಪು ಟೇಬಲ್ ಲ್ಯಾಂಪ್  ಇರಿಸಲು ಮರೆಯಬೇಡಿ.

ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರು ತಮ್ಮ ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯನ್ನು (Positive Energy) ತರಲು ವರ್ಕ್ ಟೇಬಲ್ ಒಳಗೆ ಅಥವಾ ಸುತ್ತಲೂ ಹಸಿರು ಸಸ್ಯಗಳನ್ನು ಇಡಬೇಕು. ಕ್ಯಾಕ್ಟಸ್(Cactus) ಸಸ್ಯ ಮರೆತೂ ಕೂಡ ಇಡಬೇಡಿ. ಬೇರೆ ಬೇರೆ ರೀತಿಯ ಇನ್ ಡೋರ್ ಪ್ಲ್ಯಾಂಟ್ ಗಳನ್ನು ಇಟ್ಟರೆ ಉತ್ತಮವಾಗಿರುತ್ತೆ.

ನಕಾರಾತ್ಮಕ ಶಕ್ತಿಯು (Negative Energy) ಆದಾಯ ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು, ನಿಮ್ಮ ಟೇಬಲ್ ಅಥವಾ ಅದರ ಸುತ್ತಲಿನ ಚೂಪಾದ ಅಂಚುಗಳನ್ನು ಮುಚ್ಚಲು ಪ್ರಯತ್ನಿಸಿ. ಸಾಧ್ಯವಾದಷ್ಟು ನಿಮ್ಮ ಟೇಬಲ್ ರೌಂಡ್ ಆಗಿರಲಿ. ಇದರಿಂದ ಪಾಸಿಟಿವಿಟಿ (Positivity) ಹೆಚ್ಚುತ್ತೆ. 

ವಾಯುವ್ಯ ದಿಕ್ಕು ಯಶಸ್ಸು, ಶಕ್ತಿ ಮತ್ತು ಬಡ್ತಿಯನ್ನು ತರುತ್ತೆ ಅನ್ನೋ ನಂಬಿಕೆಯಿದೆ. ಹಾಗಾಗಿ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸ್ಫಟಿಕವನ್ನು ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಜೊತೆಗೆ ಆಫೀಸ್ನ ಉತ್ತರ ದಿಕ್ಕಿನಲ್ಲಿ ನೀರಿನ ಸಣ್ಣ ಫೌಂಟನ್(Fountain) ಇರಿಸೋದು ವೃತ್ತಿಜೀವನದ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತೆ

ನಿಮ್ಮ ವರ್ಕ್ ಪ್ಲೇಸ್ ಆಫೀಸಿನ ಮಧ್ಯದಲ್ಲಿದ್ದರೆ ಮತ್ತು ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೆ. ಅದರಿಂದ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು, ನೆಲದ ಮೇಲೆ ನೀಲಿ, ಕಪ್ಪು ಅಥವಾ ಬೂದು ಕಾರ್ಪೆಟ್(Carpet) ಇರಿಸಿ. ಇದು ನೆಗೆಟಿವಿಟಿಯನ್ನು ದೂರ ಮಾಡುತ್ತದೆ.

ವೃತ್ತಿಜೀವನ, ವ್ಯವಹಾರ ಮತ್ತು ಅಧ್ಯಯನದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯಲು, ತಾಜಾ ಹೂವುಗಳನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಆದರೆ ಯಾವತ್ತೂ ಹೂವು ಬಾಡದಂತೆ ನೋಡಿಕೊಳ್ಳುವುದು ಉತ್ತಮ. ಜೊತೆಗೆ ಬಾಡಿದ ಹೂವನ್ನು ಮರೆತು ಕೂಡ ಇಡಬೇಡಿ. ಹೂವು ಬಾಡಿದ ಕೂಡಲೆ ಅದನ್ನು ಬೀಸಾಡುವುದು ಉತ್ತಮ. ಇಲ್ಲವಾದರೆ ನೆಗೆಟಿವಿಟಿ (Negativity) ಹೆಚ್ಚುತ್ತದೆ. 

ಫೆಂಗ್ ಶುಯಿ ಪ್ರಕಾರ, ನೈಋತ್ಯ ದಿಕ್ಕು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತೆ, ಆದ್ದರಿಂದ ಈ ದಿಕ್ಕಿನಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಮತ್ತು ಸ್ವಚ್ಛವಾಗಿಡಬೇಕು (Clean) ನಿಮ್ಮ ಕೆಲಸದ ಸ್ಥಳವನ್ನು ಸಹ ನೀವು ಚೊಕ್ಕವಾಗಿರಿಸಬೇಕು.ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಕೆರಿಯರ್ ಗ್ರೋಥ್ ಹೇಗಾಗುತ್ತೆ ನೀವೇ ನೋಡಿ.  

click me!