Vastu tips : ಮನೆಯಿಂದ ಹೊರಡೋ ಮುನ್ನ ಈ ಕೆಲಸ ಮಾಡಿದ್ರೆ, ಎಲ್ಲವೂ ಶುಭವಾಗುತ್ತೆ!

First Published | Jan 6, 2023, 4:34 PM IST

ವಾಸ್ತು ಶಾಸ್ತ್ರದಲ್ಲಿ ಮನೆಗೆ, ವ್ಯವಹಾರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ನಾವು ಕಾಣಬಹುದು. ಆದರೆ ನೀವು ಯಾವತ್ತಾದರೂ ಮನೆಯಿಂದ ಹೊರಗಡೆ ಯಾವುದೋ ಮುಖ್ಯ ಕೆಲಸ ಮಾಡಲು ಹೋಗಿ ಯಶಸ್ವಿಯಾಗದೇ ಬಂದಿದ್ದೀರಾ? ಹಾಗಿದ್ರೆ ಇನ್ನು ಮುಂದೆ ಮನೆಯಿಂದ ಹೊರಡೋ ಮುನ್ನ ಈ ಕೆಲಸ ಮಾಡಿ.
 

ಅನೇಕ ಬಾರಿ ನಾವು ಕೆಲವೊಂದು ಮುಖ್ಯವಾದ ಕೆಲಸ ಮಾಡಲು ಮನೆಯಿಂದ ಹೊರ ಹೋಗುತ್ತೇವೆ. ಆದರೆ ನಾವು ಹೋದ ಕೆಲಸ ಯಶಸ್ಸನ್ನು ಕಾಣುತ್ತಾ ಎಂಬ ಪ್ರಶ್ನೆ ಮನಸ್ಸಿನಲ್ಲಿರುತ್ತೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವ ಮೊದಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿದುಕೊಳ್ಳಿ. ವಾಸ್ತು ಶಾಸ್ತ್ರದಲ್ಲಿ(Vaastu shastra) ಕೆಲವೊಂದು ನಿಯಮಗಳನ್ನು ತಿಳಿಸಲಾಗಿದೆ. ಇವುಗಳನ್ನು ಮಾಡಿದ್ರೆ ಖಂಡಿತಾ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 

ಯಾವುದಾದರೂ  ಶುಭ ಕಾರ್ಯಗಳಿಗಾಗಿ ಮನೆಯಿಂದ ಹೊರಟರೆ. ಉದಾಹರಣೆಗೆ, ಸಂದರ್ಶನ ಅಥವಾ ಮೀಟಿಂಗ್ (Meeting) ಅಥವಾ ಮದುವೆ ಅಥವಾ ಇತರ ಯಾವುದೇ ಪ್ರಮುಖ ಕೆಲಸದ ಬಗ್ಗೆ ಮಾತನಾಡುವಾಗ, ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವು ಅನ್ನೋದನ್ನು ನೋಡೋಣ. 

Tap to resize

ಈ ಕ್ರಮಗಳ ಬಗ್ಗೆ ಯಾವುದೇ ವೈಜ್ಞಾನಿಕ ಸತ್ಯಾಂಶವಿಲ್ಲದಿದ್ದರೂ, ದೀರ್ಘಕಾಲದಿಂದ, ಜನರು ಈ ಕ್ರಮಗಳನ್ನು ಮಂಗಳಕರವೆಂದು ಪರಿಗಣಿಸುತ್ತಿದ್ದಾರೆ. ಮನೆಯಿಂದ(House) ಹೊರಹೋಗುವ ಮೊದಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಅದರಿಂದ ಏನಾಗುತ್ತದೆ ಅನ್ನೋದನ್ನು ಇಲ್ಲಿ ತಿಳಿಯಿರಿ-

ಮನೆಯಿಂದ ಹೊರಡುವ ಮೊದಲು, ಅಕ್ಕಿಯ ಒಂದು ಸಣ್ಣ ರಾಶಿಯ ಮೇಲೆ ಕಲಶ(Kalash) ಇರಿಸಿ ಮತ್ತು ಊದುಬತ್ತಿಯಿಂದ ಆರತಿ ಮಾಡಿ. ನೀವು ಹೋಗುತ್ತಿರುವ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಎಂದು ಪ್ರಾರ್ಥಿಸಿ. ಮನೆಗೆ ಹಿಂದಿರುಗಿದ ನಂತರ, ಶಿವನ ದೇವಾಲಯಕ್ಕೆ ಅಕ್ಕಿ ಮತ್ತು ಹಣವನ್ನು ಅರ್ಪಿಸಿ.
 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಿಂದ ಹೊರಹೋಗುವಾಗ, ಒಂದೇ ಧ್ವನಿಯಲ್ಲಿ ದೇವರ ನಾಮ ಅಥವಾ ಮಂತ್ರವನ್ನು(Mantra) ಪಠಿಸುವ ಮೂಲಕ ಮನೆಯಿಂದ ಹೊರಹೋಗಿ. ಇದನ್ನು ಮಾಡೋದರಿಂದ, ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂದು ನಂಬಲಾಗಿದೆ. ಪ್ರಯಾಣವು ಆಹ್ಲಾದಕರವಾಗಿರುತ್ತೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಿಂದ ಹೊರ ಹೋಗುವ ಮೊದಲು ಯಾವುದೇ ನಿಂದನಾತ್ಮಕ ಅಥವಾ ತಪ್ಪು ಪದಗಳನ್ನು ಹೇಳಬೇಡಿ. ಯಾರೊಂದಿಗೂ ಜಗಳ (Fight) ಮಾಡಿಕೊಂಡು ಮನೆಯಿಂದ ಹೊರ ಬರಬೇಡಿ. ಮನೆಯಿಂದ ಹೊರಹೋಗುವ ಮೊದಲು ಯಾವುದೇ ನಕಾರಾತ್ಮಕ ಶಬ್ದಗಳನ್ನು ಬಳಸಬೇಡಿ. ಹಾಗೆ ಮಾಡೋದರಿಂದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
 

ಮನೆಯಿಂದ ಹೊರ ಹೋಗುವಾಗ, ಬೆಲ್ಲ (Jaggery) ತಿನ್ನಿ ಮತ್ತು ಸ್ವಲ್ಪ ನೀರು ಕುಡಿಯಿರಿ. ಇದನ್ನು ಮಾಡೋದರಿಂದ, ಕೆಲಸದಲ್ಲಿ ಯಶಸ್ಸು ಸಿಗುತ್ತೆ ಎಂದು ನಂಬಲಾಗಿದೆ. ಇದಲ್ಲದೆ, ಮನೆಯ ಹೊರಗೆ ಕೆಲವು ಕರಿಮೆಣಸು ಕಾಳುಗಳನ್ನು ಹರಡಿ ಮತ್ತು ಅದರ ಮೇಲೆ ನಿಮ್ಮ ಪಾದಗಳನ್ನು ಇರಿಸಿ, ನಂತರ ಹಿಂತಿರುಗಿ ನೋಡಬೇಡಿ. 

ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು, ಮನೆಯಿಂದ ಹೊ ರಹೋಗುವ ಮೊದಲು ಕನ್ನಡಿಯಲ್ಲಿ(Mirror) ಮುಖನೋಡಿ. ಹಾಗೆ ಮಾಡುವುದು ಶುಭವೆಂದು ಹೇಳಲಾಗುತ್ತೆ. ಕನ್ನಡಿ  ನಿಮ್ಮೊಳಗಿನ ಧನಾತ್ಮಕ ಶಕ್ತಿಯನ್ನು ದ್ವಿಗುಣಗೊಳಿಸುತ್ತೆ. ಇದರಿಂದ ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತೆ ಎಂದು ನಂಬಲಾಗಿದೆ. 

Latest Videos

click me!