ಮನೆಯಲ್ಲಿ ಪೂರ್ವಜರ ಫೋಟೋ ಇಡುವುದು ಸರಿಯೇ?

First Published | Mar 21, 2024, 5:50 PM IST

ಮನೆಯಲ್ಲಿ ಹಿರಿಯರು ಸಾವನ್ನಪ್ಪಿದ ಬಳಿಕ ಅವರ ಫೋಟೋವನ್ನು ಮಾಡಿ ನಾವು ಮನೆಯಲ್ಲಿ ನೇತು ಹಾಕುತ್ತೇವೆ. ಆದರೆ ಹಾಗೆ ಮಾಡೋದು ಸರಿಯಲ್ಲ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಿದ್ರೆ, ಫೋಟೋ ಹಾಕೋದಾದ್ರೆ ಏನು ಮಾಡಬೇಕು. ಎಲ್ಲಿ ಹಾಕಬೇಕು ನೋಡೋಣ… 

ಹಿಂದೂ ಧರ್ಮದಲ್ಲಿ  (Hindu Dharm) ಪಿತೃಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಅಲ್ಲದೆ, ಪೂರ್ವಜರನ್ನು ಮೆಚ್ಚಿಸಲು ಅನೇಕ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಅನೇಕ ಜನರು ತಮ್ಮ ಮನೆಯಲ್ಲಿ ಪೂರ್ವಜರ ಫೋಟೋಗಳನ್ನು (ancestors photo) ಸಹ ನೇತು ಹಾಕುತ್ತಾರೆ.  ಆದರೆ ಮನೆಯಲ್ಲಿ ಪೂರ್ವಜರ ಚಿತ್ರವನ್ನು ಹಾಕುವುದು ಸರಿಯೇ . ಹೀಗೆ ಫೋಟೋ ಇಡೋದರಿಂದ ಒಬ್ಬ ವ್ಯಕ್ತಿಯು ಯಾವ ಪರಿಣಾಮ ಬೀರಬಹುದು ಎಂದು ತಿಳಿಯೋಣ.
 

ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂರ್ವಜರ ಆಶೀರ್ವಾದ (blessings) ನಮ್ಮ ಮೇಲಿದ್ದರೆ ನಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರೋದೆ ಇಲ್ಲ ಎನ್ನಲಾಗುತ್ತದೆ. ಅದೇ ಸಮಯದಲ್ಲಿ, ಪಿತೃಗಳು ಕೋಪಗೊಂಡರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಯಲ್ಲಿ ಪೂರ್ವಜರ ಚಿತ್ರವನ್ನು ಹಾಕುವಾಗ ಅನೇಕ ವಿಷಯಗಳನ್ನು ನೋಡಿಕೊಳ್ಳಬೇಕು, ಇಲ್ಲದಿದ್ದರೆ ವ್ಯಕ್ತಿಯು ಅಶುಭ ಫಲಿತಾಂಶಗಳನ್ನು ಸಹ ಪಡೆಯಬಹುದು.
 

Tap to resize

ಈ ವಿಷಯಗಳನ್ನು ನೆನಪಿನಲ್ಲಿಡಿ
ಪೂರ್ವಜರ ಫೋಟೋಗಳನ್ನು ಮನೆಯಲ್ಲಿ ನೇತುಹಾಕಬಾರದು ಎಂದು ವಾಸ್ತು ಶಾಸ್ತ್ರದಲ್ಲಿ (vaastu shastra) ನಂಬಲಾಗಿದೆ. ಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಹೆಚ್ಚು ಇಡುವುದು ಸರಿಯಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೆ, ಪೂರ್ವಜರ ಚಿತ್ರವನ್ನು ಎಲ್ಲರೂ ನೋಡಬಹುದಾದ ಸ್ಥಳದಲ್ಲಿ ಸಹ ಇಡಬಾರದು ಎನ್ನಲಾಗಿದೆ.

ಪೂರ್ವಜರ ಛಾಯಾಚಿತ್ರ ಇಡುವ ನಿಯಮಗಳು
ಪೂರ್ವಜರ ಚಿತ್ರವನ್ನು ಗೋಡೆಯ ಮೇಲೆ ನೇತುಹಾಕುವ ಬದಲು ಮರದ ಸ್ಟ್ಯಾಂಡ್ ಗಳನ್ನು ಇಡುವುದು ಉತ್ತಮ. ಅಲ್ಲದೆ, ವಾಸ್ತು ಶಾಸ್ತ್ರದಲ್ಲಿ ಪೂರ್ವಜರ ಚಿತ್ರವನ್ನು ಇರಿಸಲು ಉತ್ತರ ದಿಕ್ಕನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ. ದಕ್ಷಿಣವನ್ನು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗಿರುವುದರಿಂದ ಮತ್ತು ಚಿತ್ರವನ್ನು ಉತ್ತರ ದಿಕ್ಕಿನಲ್ಲಿ (north) ಇರಿಸುವ ಮೂಲಕ, ಪೂರ್ವಜರ ಮುಖವು ದಕ್ಷಿಣದ ಕಡೆಗೆ (south face)ಉಳಿಯುತ್ತದೆ, ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಈ ತಪ್ಪುಗಳನ್ನು ಮಾಡಬೇಡಿ
ಪೂರ್ವಜರ ಚಿತ್ರವನ್ನು ಎಂದಿಗೂ ಪೂಜಾ ಸ್ಥಳದ ಬಳಿ ಇಡಬಾರದು. ಹಾಗೆ ಮಾಡುವುದರಿಂದ ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು. ಇದರೊಂದಿಗೆ, ಜೀವಂತ ವ್ಯಕ್ತಿಯ ಚಿತ್ರವನ್ನು ಪೂರ್ವಜರ ಚಿತ್ರದ ಜೊತೆ ಇಡಬಾರದು ಎಂದು ನಂಬಲಾಗಿದೆ. ಏಕೆಂದರೆ ಹಾಗೆ ಮಾಡುವುದರಿಂದ ಆ ವ್ಯಕ್ತಿಯ ಆಯಸ್ಸು ಕಡಿಮೆ ಮಾಡಬಹುದು.

Latest Videos

click me!