ಹೋಳಿ ಹಬ್ಬದಂದು ಈ 5 ವಸ್ತು ಮನೆಗೆ ತಂದ್ರೆ ಎಲ್ಲವೂ ಶುಭವಾಗುತ್ತೆ

First Published | Mar 20, 2024, 6:26 PM IST

ಬಣ್ಣಗಳ ಹಬ್ಬ ಹೋಳಿಯನ್ನು ಭಾರತದಲ್ಲಿ ಅತ್ಯಂತ ಪವಿತ್ರ ಹಬ್ಬ ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತರೋದು ಪವಿತ್ರ ಎಂದು ಹೇಳಲಾಗುತ್ತದೆ ಅವುಗಳ ಬಗ್ಗೆ ನೋಡೋಣ. 
 

ಹೋಳಿ ಹಬ್ಬವನ್ನು (Holi festival) ಭಾರತದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಾನ್ಯತೆ ಇದೆ. ಹೋಳಿ ದಿನದಂದು ವ್ಯಕ್ತಿಯು ಕೆಲವು ವಿಶೇಷ ವಸ್ತುಗಳನ್ನು ಮನೆಗೆ ತಂದರೆ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ರೆ ಈ ದಿನದಂದು ಮನೆಗೆ ಯಾವ ವಸ್ತುಗಳನ್ನು ತರಬೇಕು ಎಂದು ತಿಳಿಯೋಣ. 
 

ಬಿದಿರು ಗಿಡ  (Bamboo Tree): ಹೋಳಿ ದಿನದಂದು ಬಿದಿರಿನ ಸಸ್ಯವನ್ನು ಮನೆಗೆ ತರುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ, ಮನೆಯಿಂದ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತೆ ಎಂದು ಹೇಳಲಾಗುತ್ತದೆ. 

Tap to resize

ತೋರಣ (Thoran): ಹೋಲಷ್ಟಕ್ ಮತ್ತು ಹೋಲಿಕಾ ದಹನ ನಡುವೆ, ಮಾವಿನ ಎಲೆಗಳನ್ನು ಮನೆಯಲ್ಲಿ ಬಾಗಿಲಿಗೆ ತೋರಣ ಮಾಡಿ ಹಾಕಬೇಕು, ಅಥವಾ ಎಲೆಗಳನ್ನು ಮನೆಯಲ್ಲಿ ತೂಗು ಹಾಕಬೇಕು. ಇದನ್ನು ಮಾಡುವುದರಿಂದ, ವಾಸ್ತು ದೋಷವನ್ನು ತೊಡೆದುಹಾಕಬಹುದು.  

ಲೋಹದ ಆಮೆ (Tortoise): ಹೋಳಿ ದಿನದಂದು ಸ್ಫಟಿಕ ಅಥವಾ ಲೋಹದ ಆಮೆಯನ್ನು ಮನೆಗೆ ತರುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. 

ವಿಂಡ್ ಚೈಮ್ (Wind Chime): ಹೋಳಿ ದಿನದಂದು, ವಿಂಡ್ ಚೈಮ್ ಗಳನ್ನು ಮನೆಗೆ ತರಬೇಕು ಎಂದು ನಂಬಲಾಗಿದೆ. ಅದರ ಮಧುರ ಧ್ವನಿ ಮನೆಗೆ ಸಂತೋಷವನ್ನು ತರುತ್ತದೆ.  ಇದರಿಂದ ನೆಗೆಟಿವ್ ಎನರ್ಜಿಯು ದೂರವಾಗುತ್ತದೆ ಎಂದು ನಂಬಲಾಗಿದೆ. 

ಬೆಳ್ಳಿ ನಾಣ್ಯ (Silver Coin): ಹೋಳಿ ದಿನದಂದು ನೀವು ಬೆಳ್ಳಿಯ ನಾಣ್ಯವನ್ನು ಮನೆಗೆ ತರಬಹುದು. ಇದನ್ನು ಮಾಡುವುದರಿಂದ, ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ಅವಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. 

ಬೆಳ್ಳಿ ನಾಣ್ಯ ಪರಿಹಾರ: ಮನೆಯಲ್ಲಿ ಬೆಳ್ಳಿಯ ನಾಣ್ಯವನ್ನು ತಂದ ನಂತರ, ಅದನ್ನು ಕೆಂಪು ಬಟ್ಟೆಯಲ್ಲಿ ಕೆಲವು ಅಕ್ಕಿಯ ಕಾಳುಗಳೊಂದಿಗೆ ಕಟ್ಟಿ. ಈಗ ಅದರ ಮೇಲೆ ಅರಿಶಿನವನ್ನು ಹಾಕಿ ಮತ್ತು ಅದನ್ನು ನಿಮ್ಮ ಲಾಕರ್ ನಲ್ಲಿ ಇಡಿ.  ಹೋಳಿ ದಿನದಂದು ಬೆಳ್ಳಿಯ ನಾಣ್ಯಗಳ ಈ ಪರಿಹಾರವನ್ನು ಮಾಡುವುದರಿಂದ, ವ್ಯಕ್ತಿಯು ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತೆ. ಅಲ್ಲದೆ, ಲಾಭವೂ ಉಂಟಾಗುತ್ತೆ.  

Latest Videos

click me!