ವಾಸ್ತು ಶಾಸ್ತ್ರದಲ್ಲಿ ನವಿಲು ಗರಿಗೇನು ಮಹತ್ವ, ಮನೆಯಲ್ಲಿಟ್ಟುಕೊಳ್ಳಬಹುದಾ?

First Published | Mar 24, 2021, 6:14 PM IST

ನವಿಲು ಗರಿಗಳು ಸುಂದರವಾಗಿದ್ದು, ಗ್ರಹ ದೋಷಗಳು ಮತ್ತು ವಾಸ್ತುದೋಷಗಳಂತಹ ಹಲವು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪೂಜಾ ಮನೆಯಿಂದ ಮಲಗುವ ಕೋಣೆಯವರೆಗೆ ನವಿಲು ಗರಿಗಳನ್ನು ಇಡುವುದರಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಅದರ ಬಗ್ಗೆ ಇಲ್ಲಿ ತಿಳಿಯಿರಿ. 

ನವಿಲು ಗರಿಯನ್ನು ಶ್ರೀಕೃಷ್ಣತನ್ನ ತಲೆಯ ಮೇಲೆ ಧರಿಸುತ್ತಾನೆ. ಇದನ್ನು ಪವಿತ್ರ ಎಂದು ಹೇಳಲಾಗುತ್ತದೆ. ಅದೇ ರೀತಿ ನವಿಲು ಗರಿಗಳನ್ನು ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಕಾರ್ತಿಕೇಯನ ವಾಹನ ನವಿಲು.
ಇದಲ್ಲದೆ, ನವಿಲು ಗರಿಗಳು ಗಣೇಶನಿಗೆ, ಮಾತಾ ಸರಸ್ವತಿ ಮತ್ತು ಇತರೆದೇವತೆಗಳಿಗೆ ತುಂಬಾ ಪ್ರಿಯ. ನವಿಲುಗರಿಯು ಸುಂದರವಾಗಿ ಕಾಣುವುದರಿಂದ ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ನವಿಲು ಗರಿಗಳು ಮನೆಯಲ್ಲಿನ ವಾಸ್ತು ದೋಷ ನಿವಾರಿಸಲು ಸಹಕರಿಸುತ್ತದೆ.
Tap to resize

ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಆಗುವ ಲಾಭಗಳು1. ನಕರಾತ್ಮಕ ಶಕ್ತಿಮನೆಯೊಳಗೆ ಪ್ರವೇಶಿಸದಂತೆ ಮುಖ್ಯ ಬಾಗಿಲಿನ ಮೇಲೆ 3 ನವಿಲು ಗರಿಗಳನ್ನು ಇರಿಸಿ ಮತ್ತು ಅದರ ಕೆಳಗೆ ಗಣೇಶನ ವಿಗ್ರಹವನ್ನು ಇರಿಸಿ. ಹೀಗೆ ಮಾಡುವುದರಿಂದ ನಕರಾತ್ಮಕ ಶಕ್ತಿಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಸುಖ ಶಾಂತಿ ಮತ್ತು ಸಂತೋಷವು ಇರುತ್ತದೆ.
2. ಪೂಜಾ ಕೋಣೆಯಲ್ಲಿ ದೇವತೆಗಳ ಜೊತೆಗೆ ನವಿಲು ಗರಿಯನ್ನು ಇಡುವುದು ತುಂಬಾ ಮಂಗಳಕರ. ಇದು ಮನೆಯಲ್ಲಿ ಸುಖ-ಸಮೃದ್ಧಿಯನ್ನು ಕಾಪಾಡುತ್ತದೆ ಮತ್ತು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.
3. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಪಡೆಯಬೇಕೆಂದು ಬಯಸಿದರೆ, ಕುಟುಂಬದ ಸದಸ್ಯರ ನಡುವಿನ ಅಂತರವನ್ನು ಕಡಿಮೆ ಮಾಡಿ ಮತ್ತು ಪ್ರೀತಿಸಲು ಬಯಸಿದರೆ, ಮನೆಯ ಲೀವಿಂಗ್ ರೂಮ್‌ನಲ್ಲಿ ನವಿಲು ಗರಿಯನ್ನು ಇರಿಸಿ.
4.ನವಿಲಿನ ಗರಿಗಳು ಪ್ರೀತಿಯ ಸಂಕೇತವೂ ಹೌದು, ಆದ್ದರಿಂದ ಬೆಡ್ ರೂಂನಲ್ಲೂ ಕೂಡ ನವಿಲಿನ ಗರಿಗಳನ್ನು ಇಡಬಹುದು. ವಾಸ್ತು ಶಾಸ್ತ್ರವು ಹೇಳುವಂತೆ, ಮಲಗುವ ಕೋಣೆಯಲ್ಲಿ 2 ನವಿಲು ಗರಿಗಳನ್ನು ಒಟ್ಟಿಗೆ ಇಡುವುದರಿಂದ ಪತಿಯ ಪತ್ನಿಯ ನಡುವಿನ ಸಂಬಂಧ ಮತ್ತು ಪ್ರೀತಿ ಹೆಚ್ಚುತ್ತದೆ.
5.ಶ್ರೀಕೃಷ್ಣನ ಪ್ರಿಯವಾದ ಕೊಳಲಿನ ಜೊತೆಗೆ ನವಿಲಿನ ಗರಿಯನ್ನು ಇಟ್ಟರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ.
6.ಸರಸ್ವತಿ ದೇವಿಗೂ ನವಿಲು ಗರಿ ಪ್ರಿಯ. ಆದ್ದರಿಂದ ಮಗು ಓದಿನಲ್ಲಿ ದುರ್ಬಲವಾಗಿದ್ದರೆ, ನವಿಲುಗರಿಗಳನ್ನು ಪುಸ್ತಕಗಳ ಮಧ್ಯದಲ್ಲಿ ಇಡುವುದರಿಂದ ಅಧ್ಯಯನದಲ್ಲಿ ಮಗುವಿನ ಗಮನ ಹೆಚ್ಚಾಗುತ್ತದೆ.
7. ಹಣ ಅಥವಾ ಒಡವೆಗಳನ್ನು ಇಡುವ ಮನೆಯ ಜಾಗದಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

Latest Videos

click me!