ಅತ್ಯುತ್ತಮ ದಾಂಪತ್ಯಕ್ಕಾಗಿ ಜ್ಯೋತಿಷ್ಯ ನೀಡೋ ಸಲಹೆಗಳಿವು, ಫಾಲೋ ಮಾಡೋಕೇನು ಅಲ್ವಾ?

First Published | Mar 17, 2021, 4:59 PM IST

ಮದುವೆಯಾದ ಮೊದಲ ಕೆಲವು ವರ್ಷಗಳ ನಂತರ, ಮಹಿಳೆಯರು ಪುರುಷ  ತನ್ನ ಮೇಲಿನ ಆಸಕ್ತಿಯನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಾರೆ ಮತ್ತು ಪುರುಷರು ಸಹಜವಾಗಿಯೇ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ಪತಿ ಮತ್ತು ಪತ್ನಿ ನಡುವಿನ ಸಂಬಂಧ ಉತ್ತಮವಾಗಿರುವುದು ಮತ್ತು ಪತಿ -ಪತ್ನಿಯ ಮೇಲಿನ ಆಸಕ್ತಿಯನ್ನು ಉಳಿಸಿಕೊಳ್ಳುವಂತೆ ಮಾಡುವುದು ಮುಖ್ಯ. ಪತಿ ಅಥವಾ ಜೀವನ ಸಂಗಾತಿಯನ್ನು ನಿಯಂತ್ರಿಸಲು ಆಸ್ಟ್ರೊ ಸಲಹೆಗಳು ಇಲ್ಲಿವೆ.

ಮಲಗುವ ಕೋಣೆಯ ವಾಯುವ್ಯ ಗೋಡೆಯಲ್ಲಿ ಆಕಾಶದಲ್ಲಿ ಹಾರಾಡುವ ಬಿಳಿ ಪಾರಿವಾಳಗಳ ಚಿತ್ರವನ್ನು ಇರಿಸಿ. ಚಿತ್ರದಲ್ಲಿ ನೀರು ಇರಬಾರದು.
ಶಾರ್ಟ್ ಟೆಂಪೆರ್ಡ್ ವ್ಯಕ್ತಿ ಹೆಚ್ಚಾಗಿ ಲಿವಿಂಗ್ ರೂಮಿನ ವಾಯುವ್ಯ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು. ಚಂದ್ರನು ವಾಯುವ್ಯ ದಿಕ್ಕಿನ ಅಧಿಪತಿಯಾಗಿದ್ದು, ಮೂಡ್ ಮತ್ತು ಭಾವನೆಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ.
Tap to resize

ಗುಲಾಬಿ, ನೀಲಿ, ಹಸಿರು, ಪೀಚ್ ಮತ್ತು ಬಿಳಿ ಬಣ್ಣಗಳ ಮೃದುವಾದ ಶೇಡ್‌ಗಳನ್ನು ಪೀಠೋಪಕರಣಗಳಿಗೆ ಬಳಸಿ.
ಮಲಗುವ ಕೋಣೆವಾಯುವ್ಯ ಮೂಲೆಯಲ್ಲಿ ನವಿಲುಗರಿಗಳ ಗೊಂಚಲುಗಳನ್ನು ಇರಿಸಿ.
ಲೀವಿಂಗ್ ರೂಮ್‌ನ ನೈಋತ್ಯ ಮೂಲೆಯಲ್ಲಿ ಶುದ್ಧ ಮತ್ತು ಶುಭ್ರವಾದ ಸ್ಫಟಿಕ ಮತ್ತು ಹಸಿರು ಅಗೇಟ್ ಸ್ಫಟಿಕವನ್ನು ಇಡಿ.
ಹಸಿರು ಅಥವಾ ಬಿಳಿ ರಾತ್ರಿ ದೀಪ ಮೃದು ಭಾವನೆಗಳನ್ನು ಪೋಷಿಸುತ್ತದೆ.
ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣರ ಭಾವಚಿತ್ರವನ್ನು ಇರಿಸಿ. ಇದರಿಂದ ಪ್ರೀತಿ ಹೆಚ್ಚುತ್ತದೆ.
ಇವಿಷ್ಟು ಮಾಡಿದರೆ ದಂಪತಿನಡುವೆ ಪ್ರೀತಿ ಹೆಚ್ಚುತ್ತದೆ. ಜೊತೆಗೆ ಸದಾ ಕಾಲ ಅನ್ಯೋನ್ಯವಾಗಿ ಇರಲು ಸಾಧ್ಯವಾಗುತ್ತದೆ.

Latest Videos

click me!