ನಿಮಗೆ ಗೊತ್ತಿಲ್ಲದ ಮನಃಶಾಸ್ತ್ರದಲ್ಲಿರುವ ಬಣ್ಣದ ಗುಟ್ಟನ್ನು ಇಲ್ ಹೇಳ್ತೀವಿ ಕೇಳಿ!

First Published Nov 26, 2020, 4:34 PM IST

ಬಣ್ಣಗಳು ನಮ್ಮ ಮನಸ್ಸಿಗೆ ಎಷ್ಟು ಹತ್ತಿರವಿದೆ ಅಂದರೆ ಅದರಲ್ಲಿ ಒಂದು ಸಂವಹನ ಶಕ್ತಿ ಅಡಗಿದೆ ಎಂದರೆ ನಂಬಲು ಅಸಾಧ್ಯ. ಕಲಾವಿದರು ಮತ್ತು ಮನೆ ವಿನ್ಯಾಸಕರಲ್ಲಿ ಬಣ್ಣಗಳ ಬಗ್ಗೆ ಬಹಳ ನಂಬಿಕೆ ಇರುತ್ತದೆ. ಅವರು ಬಣ್ಣಗಳು ನಮ್ಮ ಮನಸ್ಸಿನಲ್ಲಿ ಪ್ರೀತಿ, ಕೋಪ, ಭಯ, ಸಂತೋಷವನ್ನು ಹೇಗೆ ಬದಲಾಯಿಸುತ್ತದೆ ಎಂದು ಹೇಳುತ್ತಾರೆ. ಎಲ್ಲರಿಗೂ ಬಣ್ಣಗಳಲ್ಲಿ ಅವರದೇ ಆದ ಇಷ್ಟಗಳಿರುತ್ತವೆ. ಕೆಲವರಿಗೆ ಕಪ್ಪು ಇಷ್ಟವಾದರೆ, ಕೆಲವರಿಗೆ ಬಿಳಿ, ಇನ್ನು ಕೆಲವರಿಗೆ ನೀಲಿ, ಕೆಂಪು, ಗುಲಾಬಿ ಬಣ್ಣ . 

ಏನೇ ಇರಲಿ ನಾವು ವಾಸಿಸುವ ಮನೆಗಳಲ್ಲಿ ಬಣ್ಣಗಳು ನಮ್ಮ ಮೇಲೆ ಅಲ್ಲದೆ ನಮ್ಮ ಆರೋಗ್ಯದ ಮೇಲು ಬಹಳ ಪ್ರಭಾವ ಬೀರುತ್ತದೆ. ಮನಃಶಾಸ್ತ್ರದಲ್ಲಿ ಬಣ್ಣಗಳ ಬಗ್ಗೆ ತಿಳಿಯಲು ತುಂಬಾನೇ ಇದೆ. 1666 ರಲ್ಲಿ ಇಂಗ್ಲೆಂಡ್ ನ ವಿಜ್ಞಾನಿ ಐಸಾಕ್ ನ್ಯೂಟನ್ ಪ್ರಿಸಂ ( ಆಶ್ರಗ ) ಮೂಲಕ ಬಿಳಿಬೆಳಕು ಹರಿಯಲು ಬಿಟ್ಟಾಗ 7 ಬಣ್ಣಗಳಿಗೆ ಕಾರಣ ಎಂದು ತೋರಿಸಿಕೊಟ್ಟವನು. ಇದರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಇದೆ.
undefined
ಈ ಏಳು ಬಣ್ಣಗಳು ಅದೆಷ್ಟೋ ಬಣ್ಣಗಳಿಗೆ ಕಾರಣವಾಗಿದೆ. ಹಾಗಾಗಿ ಇವೆಲ್ಲ ಬಣ್ಣಗಳ ಆಟ ಎನ್ನಬಹುದು. ಹಳದಿ ಕೆಂಪು ಮಿಶ್ರಣವಾದರೆ ಕೇಸರಿ ಬಣ್ಣ ಹುಟ್ಟುತ್ತದೆ. ನೀಲಿ ಮತ್ತು ಹಳದಿ ಮಿಶ್ರಣವಾದರೆ ಹಸಿರು ಬಣ್ಣ ಹುಟ್ಟುತ್ತದೆ. ಕೆಂಪು ಮತ್ತು ನೀಲಿ ಮಿಶ್ರಣ ವಾದರೆ ನೇರಳೆ ಬಣ್ಣ ಹುಟ್ಟುತ್ತದೆ. ಹೀಗೆ ಹಲವು ಬಣ್ಣ ಗಳ ಮಿಶ್ರಣ ದಿಂದ ಹೊಸಬಣ್ಣ ಹುಟ್ಟುತ್ತದೆ. ಮುಖ್ಯವಾದ ಬಣ್ಣಗಳ ಬಗ್ಗೆ ತಿಳಿದು ಕೊಳ್ಳೋಣ.
undefined
ನೀಲಿ ಬಣ್ಣ ಇದು ಪ್ರಶಾಂತತೆ ಸೌಮ್ಯದಿಂದ ಕೂಡಿದ್ದು ಇದು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಈ ಬಣ್ಣವನ್ನು ನೋಡುವುದರಿಂದ ಮನಸ್ಸು ಶಾಂತದಿಂದ ಇರುತ್ತದೆ. ಹಾಗಾಗಿ ಈ ಬಣ್ಣಗಳನ್ನು ಬೆಡ್ ರೂಮ್ ಗಳ ಗೋಡೆಗಳಲ್ಲಿ ಹಾಕಿದರೆ ಒಳ್ಳೆಯದು.
undefined
ಹಸಿರು ಬಣ್ಣ ವಿಶ್ರಾಂತಿ ಸೌಮ್ಯ, ಸಮೃದ್ಧಿ ಹೊಸತನ ಹೊಂದಿರುವ ಬಣ್ಣ. ಇದು ಸೌಹಾರ್ದತೆಯನ್ನು ತೋರಿಸುವ ಬಣ್ಣ. ಇದು ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಹಾಗಾಗಿ ಹಸಿರು, ಹಳದಿ ಮಿಶ್ರಿತ ಬಣ್ಣಗಳು ಗೋಡೆಗಳಿಗೆ ಸುಂದರವಾಗಿ ಕಾಣುತ್ತದೆ.
undefined
ಗುಲಾಬಿ ಬಣ್ಣ ಗುಲಾಬಿಬಣ್ಣ ಶಾಂತಿಯನ್ನು ಉಂಟುಮಾಡುವ ಬಣ್ಣ ಅಲ್ಲದೆ ಹೆಚ್ಚಿನ ಹೆಣ್ಣುಮಕ್ಕಳ ಇಷ್ಟದ ಬಣ್ಣ ಹಾಗಾಗಿ ಹೆಣ್ಣು ಮಕ್ಕಳ ಕೋಣೆಗೆ ಗುಲಾಬಿಬಣ್ಣ ಬಳಿದಿರುತ್ತಾರೆ. ಪೆಂಗ್ ಚುಯ್ ಪ್ರಕಾರ ನಮ್ಮ ಶಕ್ತಿಯನ್ನು ಸಮತೋಲನದಲ್ಲಿ ಇಡುವ ಬಣ್ಣವಿದು. ಇದು ಸುಂದರ ಬಣ್ಣಗಳಲ್ಲಿ ಒಂದು.
undefined
ಬಿಳಿಬಣ್ಣ ಸ್ವಚ್ಛ ಮತ್ತು ಹೊಸತನವನ್ನು ಬಿಂಬಿಸುವ ಬಣ್ಣ. ಇದು ನಮ್ಮ ಮನಸ್ಸಿನ ನೈಜತೆಯನ್ನು ತೋರಿಸುತ್ತದೆ. ಹಾಗಾಗಿ ಬಿಳಿಬಣ್ಣವಿಡ್ಸ ಕೊಠಡಿ ಗರ್ಭಿಣಿಯರಿಗೆ ಒಳ್ಳೆಯದು. ಹಾಗಾಗಿ ಆಸ್ಪತ್ರೆಗಳಲ್ಲಿ ಬಿಳಿಬಣ್ಣದ ಬಳಕೆ ಹೆಚ್ಚು.
undefined
ಹಳದಿ ಬಣ್ಣ ದಲ್ಲಿ ಧನಾತ್ಮಕ ಗುಣವಿದೆ. ಅಲ್ಲದೆ ಜೀವಂತಿಕೆ ಹುರುಪು ಕೊಡುತ್ತದೆ ಹಾಗಾಗಿ ಮನೆಗಳಲ್ಲಿ ಹಳದಿಬಣ್ಣ ಉಪಯೋಗಿಸುತ್ತಾರೆ. ಇದು ನಮ್ಮನ್ನು ಕ್ರಿಯಾತ್ಮಕವಾಗಿ ಇಡುತ್ತದೆ.
undefined
ನೇರಳೆ ಬಣ್ಣ ಶಕ್ತಿ , ಶಾಂತಿ ಮತ್ತು ಬುದ್ದಿವಂತಿಕೆಯನ್ನು ತೋರಿಸುವ ಬಣ್ಣ . ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಧ್ಯಾನ ಮಾಡುವವರು ಈ ಬಣ್ಣಗಳ ನಡುವೆ ಮಾಡಿದರೆ ಒಳ್ಳೆಯದು. ಈ ಬಣ್ಣಗಳನ್ನು ಮನೆಗಳ ಹಾಲ್ ಗಳಲ್ಲಿ ಇದ್ದರೆ ಚೆಂದ.
undefined
ಬೂದು ಬಣ್ಣ ಇದು ಉತ್ತೇಜಕವಲ್ಲದ ಮತ್ತು ಉದಾಸೀನ ಹೊಂದುವಂತೆ ಮಾಡುವ ಬಣ್ಣ. ಆದರೂ ಈ ಬಣ್ಣ ನೀಲಿ ಮತ್ತು ಬಿಳಿಯ ಜೊತೆ ಕೂಡಿದರೆ ಶಾಂತತೆಯ ಪರಿಸರ ಉಂಟುಮಾಡುತ್ತದೆ.
undefined
ಗಾಡವಾದ ಬಣ್ಣಗಳಾದ ಕೆಂಪು ಕಪ್ಪು ಹೆಚ್ಚಾಗಿ ಬಳಕೆ ಮಾಡದ ಬಣ್ಣ ಇವು ಮನಸ್ಸಿಗೆ ಋಣಾತ್ಮಕ ಭಾವನೆಗಳ್ಳನ್ನು ತುಂಬುತ್ತವೆ. ಹಾಗಾಗಿ ಇಂತಹ ಬಣ್ಣ ಆದಷ್ಟು ಬಳಕೆ ಬೇಡ.
undefined
click me!