ಹಣವನ್ನು ಕೊಡುವುದು ಅಥವಾ ಕೊಳ್ಳುವ ವಿಚಾರ ಇದ್ದರೆ ಅದನ್ನು ಸೋಮವಾರ ಅಥವಾ ಬುಧವಾರ ಮಾಡಿದರೆ ಉತ್ತಮ. ಈ ದಿನಗಳಲ್ಲಿ ಹಣ ಕೊಡುವುದು ತೆಗೆದುಕೊಳ್ಳುವುದು ಮಾಡಿದರೆ ಲಾಭವಾಗುತ್ತದೆ. ಶುಕ್ರವಾರ ಹಣ ಕೊಡುವ ಕಾರ್ಯ ಮಾಡಬೇಡಿ.
ಮನೆಯ ಗೋಡೆಯ ಮೇಲೆ ಮಕ್ಕಳು ಪೆನ್ಸಿಲ್ ಅಥವಾ ಚಾಕ್ ನಿಂದ ಗೆರೆ ಎಳೆಯುತ್ತಾರೆ. ಆದರೆ ಮನೆಯ ಗೋಡೆಯ ಮೇಲೆ ಯಾವುದೇ ಕಲೆ ಮಾಡಬೇಡಿ. ಇದರಿಂದ ಸಾಲ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಆರ್ಥಿಕ ಸಮಸ್ಯೆ ಉಂಟಾದರೆ ನೀವು ಬಿಳಿ ಬಣ್ಣದ ವಸ್ತು ಅಂದರೆ ಹಾಲು, ಖೀರು, ಬಿಳಿ ಹೂವು ಅಥವಾ ಅಕ್ಕಿ ದಾನ ಮಾಡಿ. ಇದರಿಂದ ಧನ ಪ್ರಾಪ್ತಿಯಾಗುತ್ತದೆ.
ಮನೆಯಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆಯೇ? ಹಲವಾರು ಉಪಾಯಗಳನ್ನು ಮಾಡಿದರೂ ಸಮಸ್ಯೆ ದೂರವಾಗಿಲ್ಲವೇ? ಹಾಗಿದ್ದರೆ ಸಮಸ್ಯೆ ದೂರವಾಗಬೇಕಾದರೆ ಗೋಧಿಯಲ್ಲಿ ಸಕ್ಕರೆ ಮಿಶ್ರಣ ಮಾಡಿ ಕಪ್ಪು ಇರುವೆಗೆ ನೀಡಿ. ಇದರಿಂದ ಎಲ್ಲವೂ ಉತ್ತಮವಾಗುತ್ತದೆ.
ನಿಮಗಾಗಿ ತಿನ್ನಲು ಮಾಡಿದ ರೊಟ್ಟಿ ಅಥವಾ ಅನ್ನವನ್ನು ನೀವು ತಿನ್ನುವ ಮೊದಲು ದನಕ್ಕೆ ನೀಡಿ. ಇದರಿಂದ ಮನೆ ಮಂದಿಗೆ ಒಳಿತಾಗುತ್ತದೆ.
ಬೆಳಗ್ಗೆ ಮನೆಯಲ್ಲಿ ಉಪಾಹಾರ ಸೇವನೆ ಮಾಡುವ ಮೊದಲು ಮನೆಯನ್ನು ಕ್ಲೀನ್ ಮಾಡಿ. ಮನೆ ಗಲೀಜಾಗಿದ್ದರೆ ದಾರಿದ್ರ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಎಷ್ಟು ಸಾಧ್ಯವೋ ಅಷ್ಟು ಮನೆಯನ್ನು ಶುಚಿಯಾಗಿಟ್ಟುಕೊಳ್ಳಿ.
ಮನೆಯಲ್ಲಿ ಕಸ ಇದ್ದರೆ ಕೆಲವರು ಸಂಜೆಯ ಸಮಸ್ಯೆ ಅದನ್ನು ಕ್ಲೀನ್ ಮಾಡುತ್ತಾರೆ. ಆದರೆ ಮನೆಯಲ್ಲಿ ಸಂಜೆಯ ಸಮಯ ಕಸ ಗುಡಿಸಬಾರದು. ಇದರಿಂದ ಲಕ್ಷ್ಮೀ ಕೋಪಗೊಳ್ಳುತ್ತಾಳೆ. ಮನೆಯಿಂದ ಹೊರ ಹೋಗುತ್ತಾಳೆ ಎನ್ನಲಾಗುತ್ತದೆ.
ಮನೆಯಲ್ಲಿ ಇರಿಸಿದ ದೇವರ ಮೂರ್ತಿಯ ಮೇಲೆ ಬೆಳಿಗ್ಗೆ ಸ್ನಾನದ ನಂತರ ಕುಂಕುಮ, ಚಂದನ ಹಚ್ಚಿ. ಇದರಿಂದ ದೇವರು ಪ್ರಸನ್ನಗೊಳ್ಳುತ್ತಾರೆ. ಜೊತೆಗೆ ದೇವರಕೋಣೆಯನ್ನು ಶುಚಿಯಾಗಿಟ್ಟುಕೊಳ್ಳುವುದನ್ನು ಕಲಿಯಿರಿ.
ಲಕ್ಷ್ಮಿಯನ್ನು ಪ್ರಸನ್ನ ಮಾಡಲು ಪ್ರತಿ ಗುರುವಾರ ಸುಮಂಗಲಿ ಮಹಿಳೆಗೆ ಸುಮಂಗಲಿಯ ಸಾಮಾಗ್ರಿಗಳನ್ನು ದಾನ ಮಾಡಿ. ಇದರಿಂದ ಲಕ್ಷ್ಮಿ ಒಲಿದು ಬರುತ್ತಾಳೆ.
ಚೆಕ್‌ಬುಕ್, ಪಾಸ್‌ಬುಕ್ ಅಥವಾ ಹಣಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಶ್ರೀ ಯಂತ್ರ, ಕುಬೇರ ಯಂತ್ರದ ಬಳಿ ಇಡಿ. ಇದರಿಂದ ಹಣಕಾಸು ವೃದ್ಧಿಯಾಗುತ್ತದೆ.