ಸಂತೋಷ ಮತ್ತು ಸಮೃದ್ಧಿಗಾಗಿ ಮನೇಲಿ ಇರಲಿ ಮಾತೆ ಅನ್ನಪೂರ್ಣೆಯ ಚಿತ್ರ!

First Published Mar 20, 2023, 4:58 PM IST

ಹಿಂದೂ ಧರ್ಮದಲ್ಲಿ ತಾಯಿ ಅನ್ನಪೂರ್ಣೆಗೆ ವಿಶೇಷ ಸ್ಥಾನವಿದೆ. ತಾಯಿ ಅನ್ನಪೂರ್ಣಳನ್ನು ಆಹಾರದ ದೇವತೆಯಾಗಿ ಪೂಜಿಸಲಾಗುತ್ತೆ. ಮಾತೆ ಅನ್ನಪೂರ್ಣೆಯ ಕೃಪೆಯಿಂದ, ಕುಟುಂಬ ಸದಸ್ಯರು ಆಹಾರವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ನಿಜವಾದ ಭಕ್ತಿಯಿಂದ ಅನ್ನಪೂರ್ಣ ದೇವಿಯನ್ನು ಪೂಜಿಸುವ ಯಾವುದೇ ಭಕ್ತನ ಮನೆಯಲ್ಲಿ ಎಂದಿಗೂ ಆಹಾರ ಖಾಲಿಯಾಗೋದಿಲ್ಲ ಎಂದು ಹೇಳಲಾಗುತ್ತೆ.

ಮಾತಾ ಅನ್ನಪೂರ್ಣಳನ್ನು(Maatha Annapoorna) ಆಹಾರ, ಅದೃಷ್ಟ ಮತ್ತು ಸಂಪತ್ತಿನ ದೇವತೆಯಾಗಿ ಪೂಜಿಸಲಾಗುತ್ತೆ. ಜನರು ಅನ್ನಪೂರ್ಣೆಯ ಚಿತ್ರವನ್ನು ಮನೆಗಳಲ್ಲಿ ಇಡಲು ಇದು ಕಾರಣವಾಗಿದೆ. ಆದರೆ ನಾವು ವಾಸ್ತುವಿನ ನಿಯಮಗಳ ಬಗ್ಗೆ ಮಾತನಾಡೋದಾದ್ರೆ, ತಾಯಿಯ ವಿಗ್ರಹ ಅಥವಾ ಚಿತ್ರವನ್ನು ಮನೆಯ ಕೆಲವು ವಿಶೇಷ ಸ್ಥಳಗಳಲ್ಲಿ ಇಡುವುದು ಸೂಕ್ತ.

ತಾಯಿ ಅನ್ನಪೂರ್ಣೆಯ ಚಿತ್ರವನ್ನು ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡೋದು ಶುಭ ಮತ್ತು ನೀವು ಅದನ್ನು ಮನೆಯ ಅಡುಗೆಮನೆಯಲ್ಲಿ(Kitchen) ಪ್ರತಿಷ್ಠಾಪಿಸುತ್ತಿದ್ದರೆ ನೀವು ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನುಇಲ್ಲಿ ತಿಳಿದುಕೊಳ್ಳೋಣ. ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು. 

ಮಾತಾ ಅನ್ನಪೂರ್ಣ ಪ್ರತಿಮೆಯನ್ನಿಡಲು ಸರಿಯಾದ ದಿಕ್ಕು 
ವಾಸ್ತು ಶಾಸ್ತ್ರದ ಪ್ರಕಾರ, ಮಾತಾ ಅನ್ನಪೂರ್ಣೆಯ ಚಿತ್ರಕ್ಕೆ ಅತ್ಯಂತ ಶುಭ ದಿಕ್ಕು ಪೂರ್ವ-ದಕ್ಷಿಣ ಅಂದರೆ ಆಗ್ನೇಯ ಕೋನದ ಮಧ್ಯ ಭಾಗ. ದೇವತೆಗಳು ಈ ದಿಕ್ಕಿನಲ್ಲಿ ವಾಸಿಸುತ್ತಾರೆ. ಆದ್ದರಿಂದ, ತಾಯಿ ಅನ್ನಪೂರ್ಣೆಯ ಚಿತ್ರವನ್ನು ಇಲ್ಲಿ ಇಡೋದರಿಂದ, ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ (Luck) ಬರುತ್ತೆ ಮತ್ತು ಎಂದಿಗೂ ಆಹಾರದ ಕೊರತೆಯಿರೋಲ್ಲ. ಮನೆಯಲ್ಲಿ ತಾಯಿಯ ಚಿತ್ರ ಇಡೋದರಿಂದ ವಾಸ್ತು ದೋಷಗಳಿಂದ ಪರಿಹಾರ ಸಿಗುತ್ತೆ. 

ಮನೆಯಲ್ಲಿ ಪೂಜಾ ಸ್ಥಳದಲ್ಲಿ(Pooja room) ಮಾತಾ ಅನ್ನಪೂರ್ಣ ವಿಗ್ರಹ 
ನೀವು ಮನೆಯ ಪೂಜಾ ಸ್ಥಳದಲ್ಲಿ ಮಾತಾ ಅನ್ನಪೂರ್ಣೆಯ ಚಿತ್ರವನ್ನು ಇಟ್ಟರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ನಿಯಮಿತವಾಗಿ ತಾಯಿಯನ್ನು ಪೂಜಿಸಲು ಮತ್ತು ಆಕೆಗೆ ನೈವೇದ್ಯ ಅರ್ಪಿಸಲು ನೀವು ಕಾಳಜಿ ವಹಿಸಬೇಕು. ಪೂಜಾ ಸ್ಥಳದಲ್ಲಿ ಮಾತಾ ಅನ್ನಪೂರ್ಣೆಯ ಚಿತ್ರವನ್ನು ಈಶಾನ್ಯ ದಿಕ್ಕಿನಲ್ಲಿ ಇಡೋದು ಸೂಕ್ತ. 

ಸ್ಟೋರ್ ರೂಮ್ ನಲ್ಲಿ(Store room) ಅನ್ನಪೂರ್ಣ ಮಾತೆಯ ಚಿತ್ರ ಇರಿಸಿ 
ನಿಮ್ಮ ಮನೆಯಲ್ಲಿ ಧಾನ್ಯ ಸಂಗ್ರಹಿಸುವ ಸ್ಥಳವಿದ್ದರೆ, ಆ ಸ್ಥಳದಲ್ಲಿ ತಾಯಿಯ ಚಿತ್ರವನ್ನು ಸ್ಥಾಪಿಸಬಹುದು. ಆದರೆ ನೀವು ಚಿತ್ರವನ್ನು ಹಾಕುತ್ತಿರುವ ಗೋಡೆಯನ್ನು ಸ್ನಾನಗೃಹಕ್ಕೆ ಸೇರಿರಬಾರದು ಎಂಬುದರ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಅದರ ಬಳಿ ಸ್ನಾನಗೃಹವಿದ್ದರೆ, ತಾಯಿಯ ಚಿತ್ರವನ್ನು ಹಾಕಬೇಡಿ. 

ಅಡುಗೆ ಮನೆಯಲ್ಲಿ ಮಾತಾ ಅನ್ನಪೂರ್ಣೆಯ ಚಿತ್ರ ಇಡಿ 
ವಾಸ್ತು ಪ್ರಕಾರ, ಮಾತಾ ಅನ್ನಪೂರ್ಣೆಯ ವಿಗ್ರಹವನ್ನು ಅಡುಗೆಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸಿ, ತಾಯಿ ಅನ್ನಪೂರ್ಣೆಯ ಅನುಗ್ರಹ ಯಾವಾಗಲೂ ಕುಟುಂಬದ ಮೇಲೆ ಇರುತ್ತೆ. ಇದನ್ನು ಈ ದಿಕ್ಕಿನಲ್ಲಿ ಇಡಲು ಸಾಧ್ಯವಾಗದಿದ್ದರೆ, ನೀವು ತಾಯಿ ಅನ್ನಪೂರ್ಣೆಯ ಚಿತ್ರವನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬಹುದು. ಇದರೊಂದಿಗೆ, ಮನೆಯಲ್ಲಿ ಎಂದಿಗೂ ಆಹಾರದ(Food) ಕೊರತೆ ಇರೋದಿಲ್ಲ ಮತ್ತು ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರಲಿದೆ. ಆದರೆ ಅವುಗಳ ಸ್ಥಾಪನೆಯಲ್ಲಿ ನಿಯಮಗಳನ್ನು ಅನುಸರಿಸೋದು ಸಹ ಅವಶ್ಯಕ ಎಂಬುದನ್ನು ನೀವು ಗಮನಿಸಬೇಕು.

ಅನ್ನಪೂರ್ಣೆಯನ್ನು ಸ್ಥಾಪಿಸೋದು ಹೇಗೆ? 
ಅಡುಗೆ ಮನೆಯಲ್ಲಿ ಮಾತಾ ಅನ್ನಪೂರ್ಣೆ ವಿಗ್ರಹ ಸ್ಥಾಪಿಸಲು, ಸ್ವಚ್ಛವಾದ ತಟ್ಟೆಯಲ್ಲಿ ಸ್ವಲ್ಪ ಅಕ್ಷತೆಯನ್ನು ಇರಿಸಿ ಮತ್ತು ಅದರಲ್ಲಿ ಪೂರ್ಣ ಹೆಸರು ಬೇಳೆಯ (Moong daal) ಕೆಲವು ಕಾಳುಗಳನ್ನು ಹಾಕಿಡಿ. ಅದರ ಮೇಲೆ ತಾಯಿಯ ವಿಗ್ರಹವನ್ನು ಇರಿಸಿ ಮತ್ತು ಅವಳ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ. ಇದರ ನಂತರ, ನಿಯಮಿತವಾಗಿ ಮಾತೆಗೆ ಆರತಿ ಮಾಡಿ. ಅಡುಗೆಮನೆಯಲ್ಲಿ ವಿಗ್ರಹವನ್ನು ಸ್ಥಾಪಿಸಿದ ನಂತರ, ನಿಮ್ಮ ಬಂಡಾರ ಭರ್ತಿಯಾಗಲು ತಾಯಿಗೆ ದೈನಂದಿನ ನೈವೇದ್ಯ ನೀಡೋದು ಸಹ ಅವಶ್ಯಕ ಎಂಬುದನ್ನು ನೆನಪಿನಲ್ಲಿಡಿ. 

ಅಡುಗೆಮನೆಯಲ್ಲಿ ಮಾತಾ ಅನ್ನಪೂರ್ಣ ಅವರ ಚಿತ್ರವಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ 
ನಿಮ್ಮ ಅಡುಗೆಮನೆಯಲ್ಲಿ ಮಾತಾ ಅನ್ನಪೂರ್ಣೆಯ ಚಿತ್ರವಿದ್ದರೆ, ನೀವು ಸ್ನಾನ ಮಾಡದೆ ಎಂದಿಗೂ ಆ ಸ್ಥಳಕ್ಕೆ ಪ್ರವೇಶಿಸಬಾರದು. 
ಅಂತಹ ಅಡುಗೆಮನೆಯಲ್ಲಿ, ನೀವು ಮಾಂಸಾಹಾರಿ ಆಹಾರ (Non veg) ತಯಾರಿಸಲೇಬಾರದು ಮತ್ತು ಸಾಧ್ಯವಾದರೆ, ಈರುಳ್ಳಿ ಬೆಳ್ಳುಳ್ಳಿ ಇಲ್ಲದೆ ಆಹಾರವನ್ನು ತಯಾರಿಸಿ. 
ಊಟದ ಮೊದಲ ಭಾಗವನ್ನು ಪ್ರತಿದಿನ ತಾಯಿಗೆ ಅರ್ಪಿಸಬೇಕು. 
ನೀವು ಮನೆಯಲ್ಲಿ ಮಾತಾ ಅನ್ನಪೂರ್ಣೆಯ ಚಿತ್ರ ಅಥವಾ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದರೆ, ಇಲ್ಲಿ ಉಲ್ಲೇಖಿಸಲಾದ ವಿಷಯಗಳ ಬಗ್ಗೆ ಕಾಳಜಿ ವಹಿಸೋದು ಮುಖ್ಯ. 

click me!