
ಪ್ರತಿಯೊಬ್ಬರೂ ಹಸಿರು ಗಿಡ (Plants) ಮರಗಳನ್ನು ಇಷ್ಟಪಡುತ್ತಾರೆ. ಹಸಿರು ಯಾವಾಗಲೂ ಜನರ ಗಮನ ಸೆಳೆಯುತ್ತೆ. ಅನೇಕ ಜನರು ತಮ್ಮ ಮನೆಯಲ್ಲಿ ಮತ್ತು ಮನೆಯ ಸುತ್ತಲೂ ಗಿಡ ಮರಗಳನ್ನು ನೆಡುತ್ತಾರೆ. ಮನೆಯ ಸುತ್ತಲೂ ಮರ ನೆಡೋದು ಪರಿಸರವನ್ನು ಶುದ್ಧೀಕರಿಸುತ್ತೆ. ಅಲ್ಲದೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮ ಕಡಿಮೆಯಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಮರ ಮತ್ತು ಸಸ್ಯಗಳು ಮನೆಯಲ್ಲಿ ನೆಡುವ ಮೂಲಕ ಹೋದ ಹಣ ಅಥವಾ ಆಕಸ್ಮಿಕ ಹಣ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ಜ್ಯೋತಿಷಿಗಳು ಅಂತಹ ಕೆಲವು ಸಸ್ಯಗಳ ಬಗ್ಗೆ ಹೇಳಿದ್ದಾರೆ. ಯಾವುದೆಂದು ತಿಳಿದುಕೊಳ್ಳೋಣ...
ವಾಸ್ತು ಶಾಸ್ತ್ರದ ಪ್ರಕಾರ, ನಾಚಿಕೆ ಮುಳ್ಳು ಮನೆಯಲ್ಲಿ ನೆಡುವ ಮೂಲಕ ಅದೃಷ್ಟ ಬದಲಾಯಿಸುವ ಶಕ್ತಿ ಹೊಂದಿರುವ ಸಸ್ಯವಾಗಿದೆ. ನಾಚಿಕೆಮುಳ್ಳು ಮನೆಯ ಈಶಾನ್ಯ ಮೂಲೆಯಲ್ಲಿ ನೆಡುವುದು ಒಳ್ಳೆಯದು. ಮನೆಯಲ್ಲಿರುವ ನಾಚಿಕೆಮುಳ್ಳಿನ ಗಿಡಕ್ಕೆ ಪ್ರತಿದಿನ ನೀರು ಹಾಕಬೇಕು. ಇದನ್ನು ಮಾಡೋದರಿಂದ, ವ್ಯಕ್ತಿಯ ಜಾತಕದಲ್ಲಿ ರಾಹು ದೋಷ ನಿವಾರಣೆಯಾಗುತ್ತೆ ಮತ್ತು ಹಣದ(Money) ಆಗಮನದ ಮಾರ್ಗವು ಪ್ರಾರಂಭವಾಗುತ್ತೆ .
ಗರಿಕೆ ಇಲ್ಲದೆ ಗಣೇಶನನ್ನು(Lord Ganesh) ಪೂಜಿಸಲಾಗೋದಿಲ್ಲ. ದೀರ್ಘ ಕಾಲದಿಂದ ಮಗು ಪಡೆಯದ ವ್ಯಕ್ತಿ ತನ್ನ ಮನೆಯಲ್ಲಿ ಗರಿಕೆ ಸಸ್ಯ ನೆಡಬೇಕು ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಮನೆಯಲ್ಲಿ ನೆಡಬೇಕು ಮತ್ತು ಈ ಸಸ್ಯಕ್ಕೆ ಪ್ರತಿದಿನ ನೀರೆರೆಯಬೇಕು ಮತ್ತು ಅದರ ಕೆಲವು ಎಲೆ ಗಣೇಶನಿಗೆ ಅರ್ಪಿಸಬೇಕು. ಇದನ್ನು ಮಾಡೋದರಿಂದ, ಗಣೇಶನ ಕೃಪೆಗೆ ಪಾತ್ರರಾಗ್ತಿರ ಮತ್ತು ಕಳೆದು ಹೋದ ಹಣ ಮರಳಿ ಪಡೆಯುತ್ತೀರಿ.
ಸ್ನೇಕ್ ಪ್ಲಾಂಟ್ ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತೆ. ಈ ಸಸ್ಯದ ಎಲೆ ದಪ್ಪ ಮತ್ತು ಕತ್ತಿಯ ಆಕಾರದಲ್ಲಿರುತ್ತೆ. ಈ ಸಸ್ಯ ನೆಡೋದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಈ ಸಸ್ಯವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಸ್ನೇಕ್ ಪ್ಲಾಂಟ್ ನಿಮ್ಮ ಮಲಗುವ ಕೋಣೆಯಲ್ಲಿ ಇಡಬಹುದು.
ಮನಿ ಪ್ಲಾಂಟ್ ಹಣವನ್ನು ಆಕರ್ಷಿಸುತ್ತವೆ ಎಂದು ಹೇಳಲಾಗುತ್ತೆ. ಅದರ ರೆಂಬೆ ನೆಲವನ್ನು ಮುಟ್ಟಬಾರದು. ಅದನ್ನು ಒಂದು ಹಗ್ಗದ ಸಹಾಯದಿಂದ ಮೇಲಕ್ಕೆ ಅಥವಾ ಮಣ್ಣಿನಲ್ಲಿ ಒಂದು ದೊಡ್ಡ ಕೋಲಿನ ಸಹಾಯದಿಂದ ಕಟ್ಟಿ. ಮನಿ ಪ್ಲಾಂಟ್ ಮುಖ್ಯ ಬಾಗಿಲಿಗೆ ಇಡೋದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಿಸುತ್ತೆ ಎಂದು ನಂಬಲಾಗಿದೆ.
ಆರ್ಕಿಡ್, ಅತ್ಯಂತ ಸುಂದರವಾದ ನೆಲಹಾಸಿನ ಸಸ್ಯಗಳಲ್ಲಿ ಒಂದಾಗಿದೆ, ಆರ್ಕಿಡ್ ಅದೃಷ್ಟ ಮತ್ತು ಪ್ರೀತಿಯಲ್ಲಿ ಅದೃಷ್ಟ ನೀಡುವ ವಿಶಿಷ್ಟ ಸಾಮರ್ಥ್ಯ ಹೊಂದಿವೆ. ಪ್ರೀತಿ (Love) ಮತ್ತು ಸಂಗಾತಿಯನ್ನು (Companion) ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿಸುತ್ತೆ. ಆರ್ಕಿಡ್ಸ್ ರಾತ್ರಿಯಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತೆ, ಉತ್ತಮ ರಾತ್ರಿಯ ನಿದ್ರೆ ಪಡೆಯಲು ಆರ್ಕಿಡ್ಸ್ ಹೆಚ್ಚು ಉಪಯುಕ್ತ.
ಆರೋಗ್ಯ, ಸಮೃದ್ಧಿ ಮತ್ತು ಅದೃಷ್ಟ ಒದಗಿಸುವ ಈ ಸಸ್ಯ ಕಚೇರಿಯ ಪೂರ್ವ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಬೇಕು.ಈ ಲಕ್ಕಿ ಬಾಂಬೂ ಬಂಚ್ ನಲ್ಲಿ ಬೆಸ ಸಂಖ್ಯೆಯ ಗಿಡಗಳು ಇದ್ದರೆ ಮತ್ತಷ್ಟು ಉತ್ತಮ.
ಮೂರು ಕಾಂಡಗಳು ದೀರ್ಘಾಯುಷ್ಯ, ಸಂತೋಷ (Happiness) ಮತ್ತು ಸಂಪತ್ತನ್ನು ಸೂಚಿಸುತ್ತೆ .
ಐದು ಕಾಂಡಗಳು ಸಂಪತ್ತನ್ನು ಪ್ರತಿನಿಧಿಸುತ್ತವೆ.
ಏಳು ಕಾಂಡಗಳು ಅತ್ಯುತ್ತಮ ಆರೋಗ್ಯವನ್ನು (Health) ಪ್ರತಿನಿಧಿಸುತ್ತವೆ.
ಒಂಭತ್ತು ಕಾಂಡಗಳು ಅದೃಷ್ಟವನ್ನು (Luck) ಪ್ರತಿನಿಧಿಸುತ್ತವೆ
ಸೂಪರ್-ಪವರ್ಫುಲ್ ಆಶೀರ್ವಾದಕ್ಕಾಗಿ 21-ಕಾಂಡದ ಸಸ್ಯ ಉತ್ತಮ.
ಲಕ್ಕಿ ಬಾಂಬೂ ಸಸ್ಯವು ಹವಾನಿಯಂತ್ರಿತ ಕಚೇರಿಗಳಿಗೆ ಸೂಕ್ತ ಯಾಕಂದ್ರೆ ಇದು ನೇರ ಸೂರ್ಯನ ಬೆಳಕನ್ನು ಸಹಿಸೋದಿಲ್ಲ ಮತ್ತು ತಂಪಾದ ವಾತಾವರಣದಲ್ಲಿ ಬೆಳೆಯುತ್ತೆ. ಕಲ್ಲು ಮತ್ತು ನೀರಿನಿಂದ ಕೂಡಿದ ಪಾತ್ರೆಯಲ್ಲಿ ಅದನ್ನು ಇರಿಸಿ, ಮತ್ತು ನಿಯಮಿತವಾಗಿ ನೀರನ್ನು ಬದಲಿಸಿ.
ತುಳಸಿ ಹೆಚ್ಚಿನ ಭಾರತೀಯ ಮನೆಗಳಲ್ಲಿ ಬೆಳೆಯುವ ಒಂದು ಪವಿತ್ರ ಸಸ್ಯ. ಇದೊಂದು ಅದ್ಭುತ ಸುವಾಸನೆಯ ಏಜೆಂಟ್ ಮಾತ್ರವಲ್ಲ, ಇದು ಆರೋಗ್ಯಕರ ಪ್ರಯೋಜನಗಳನ್ನು ಸಹ ಹೊಂದಿದೆ. ವಾಸ್ತು ಪ್ರಕಾರ, ಸಕಾರಾತ್ಮಕತೆ ಮತ್ತು ಉತ್ತಮ ಆರೋಗ್ಯವನ್ನು ಒದಗಿಸಲು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ತುಳಸಿಯನ್ನು ಮನೆಯ ದಕ್ಷಿಣದಲ್ಲಿ ಇಟ್ಟರೆ ದುರಾದೃಷ್ಟ ತರಬಹುದು. ಈ ಸಸ್ಯ ಬೆಳೆಯಲು, ಸಾಕಷ್ಟು ಸೂರ್ಯನ ಬೆಳಕು ಮತ್ತು ನಿಯಮಿತ ನೀರುಣಿಸುವಿಕೆಯ ಅಗತ್ಯವಿದೆ.
ದುಂಡಗಿನ ಎಲೆಗಳನ್ನು ಹೊಂದಿರುವ ಜೇಡ್ ಸಸ್ಯ ಅದೃಷ್ಟ(Luck) ತರುತ್ತೆ. ಜೇಡ್ ಪ್ಲಾಂಟ್ ಹೊಸ ವ್ಯಾಪಾರ ಮಾಲೀಕರಿಗೆ ನೀಡಬಹುದಾದ ಸಾಂಪ್ರದಾಯಿಕ ಉಡುಗೊರೆಯಾಗಿದೆ ಮತ್ತು ಬಾಗಿಲಿಗೆ ಹಾಕಿದಾಗ ಸಮೃದ್ಧಿ ಮತ್ತು ಯಶಸ್ಸನ್ನು ಉತ್ತೇಜಿಸುತ್ತೆ.
ರಬ್ಬರ್ ಸಸ್ಯಗಳನ್ನು ಸಂಪತ್ತಿನ ಸಸ್ಯಗಳು ಎಂದು ಕರೆಯಲಾಗುತ್ತೆ. ಅವು ಸಮೃದ್ಧಿ, ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುತ್ತವೆ. ವೃತ್ತಾಕಾರದ ಎಲೆಗಳು ಹಣ ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತವೆ ಎಂದು ಭಾವಿಸಲಾಗಿದೆ.