ಕಷ್ಟಗಳನ್ನು ದೂರ ಮಾಡಿ ಜೀವನದಲ್ಲೂ ಮಾಧುರ್ಯ ತುಂಬೋ ಸಕ್ಕರೆ

First Published | Nov 18, 2022, 5:24 PM IST

ಸಕ್ಕರೆಯಿಂದ ಚಹಾ, ಕಾಫಿ ಅಥವಾ ಯಾವುದೇ ತಿಂಡಿ ಸಿಹಿಯಾಗುತ್ತೆ ಅನ್ನೋದು ನಿಮಗೆ ಗೊತ್ತು. ಆದರೆ ಸಕ್ಕರೆಯ ಕೆಲವು ಉಪಾಯಗಳನ್ನು ಅನುಸರಿಸುವ ಮೂಲಕ ನಿಮ್ಮ ಜೀವನವನ್ನು ಸಂತೋಷವಾಗಿರಿಸಬಹುದು ಅನ್ನೋದು ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಕೆಲವು ಸಲಹೆಗಳು.
 

ಸಕ್ಕರೆ ನಮ್ಮ ಜೀವನದಲ್ಲಿ ಮಾಧುರ್ಯವನ್ನು ತುಂಬಿಸುವ ಕೆಲಸ ಮಾಡುತ್ತೆ. ಇದು ವಿವಿಧ ರೀತಿಯ ಭಕ್ಷ್ಯಗಳನ್ನು ಮತ್ತಷ್ಟು ಸವಿಯಾಗುವಂತೆ ಮಾಡುತ್ತೆ. ಪ್ರತಿದಿನ ನಮ್ಮ ಚಹಾಕ್ಕೆ ಉತ್ತಮ ರುಚಿ ನೀಡುತ್ತದೆ. ಆದರೆ ಸಕ್ಕರೆಯ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ, ನಿಮ್ಮ ಮನೆಯ ಆರ್ಥಿಕ ಸ್ಥಿತಿ (Economic Condition) ಸುಧಾರಿಸಬಹುದು, ತಾಯಿ ಲಕ್ಷ್ಮಿಯ ಕೃಪೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬಹುದು ಅನ್ನೋದು ನಿಮಗೆ ತಿಳಿದಿದೆಯೇ? ನಿಮ್ಮ ಗ್ರಹಗಳ ಸ್ಥಿತಿಯನ್ನು ಸುಧಾರಿಸುವ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುವಂತಹ ಸಕ್ಕರೆಯ ಕೆಲವು ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ ಅವುಗಳನ್ನು ಅನುಸರಿಸಿ.

ಪಿತೃದೋಷವನ್ನು ತೊಡೆದುಹಾಕಲು

ಪಿತೃದೋಷದಿಂದಾಗಿ, ಕುಟುಂಬದಲ್ಲಿ ಸಮಸ್ಯೆಗಳು ಮತ್ತು ದುಃಖ ಉಂಟಾಗುತ್ತೆ. ಹಾಗಾಗಿ ಪಿತೃ ದೋಷ ನಿವಾರಣೆ ಮಾಡೋದು ಬಹಳ ಮುಖ್ಯವಾಗುತ್ತೆ. ಹಿಟ್ಟಿನಲ್ಲಿ ಸಕ್ಕರೆ ಬೆರೆಸಿ ಚಪಾತಿ ತಯಾರಿಸಿ ಮತ್ತು ಈ ರೊಟ್ಟಿಯನ್ನು ಕಾಗೆಗಳಿಗೆ (roti for crow) ತಿನ್ನಿಸಿ. ಇದು ಪಿತೃದೋಷ ತೊಡೆದುಹಾಕುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುವಂತೆ ಮಾಡುತ್ತೆ.

Tap to resize

ರಾಹು ದೋಷ ನಿವಾರಿಸಲು

ಜಾತಕದಲ್ಲಿ ರಾಹು ಗ್ರಹದ ಸ್ಥಿತಿಯನ್ನು ಬಲಪಡಿಸಲು ಈ ಪರಿಹಾರವು ಪರಿಣಾಮಕಾರಿಯಾಗಿದೆ. ಸ್ವಲ್ಪ ಸಕ್ಕರೆಯನ್ನು ಕೆಂಪು ಬಟ್ಟೆಯಲ್ಲಿ(red cloths) ಕಟ್ಟಿ. ರಾತ್ರಿ ಮಲಗುವಾಗ ಅದನ್ನು ದಿಂಬಿನ ಕೆಳಗೆ ಇರಿಸಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿ. ಇದು ರಾಹು ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಅದೃಷ್ಟ ನಿಮ್ಮದಾಗಿಸಲು

ಯಾವುದೇ ಪ್ರಮುಖ ಕೆಲಸಕ್ಕೆ ಮೊದಲು ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುವ ಅಭ್ಯಾಸ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿರುತ್ತೆ. ಯಾವುದೇ ದೊಡ್ಡ ಮತ್ತು ಪ್ರಮುಖ ಕೆಲಸ ಮಾಡಿದಾಗ ನಿಮಗೆ ಅದೃಷ್ಟ (good luck) ನೀಡುವ ಮತ್ತೊಂದು ಪರಿಹಾರವಿದೆ. ತಾಮ್ರದ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಕರಗಿಸಿ ಮತ್ತು ಮನೆಯಿಂದ ಹೊರಹೋಗುವ ಮೊದಲು ಕುಡಿಯಿರಿ. ಇದರಿಂದ ಉತ್ತಮ ಫಲಿತಾಂಶ ನಿಮ್ಮದಾಗುತ್ತೆ.
 

ಶನಿದೇವನನ್ನು ಸಂತೋಷಪಡಿಸಲು

ಇರುವೆಗಳಿಗೆ ಪುಡಿಮಾಡಿದ ಸಕ್ಕರೆ ಮತ್ತು ತೆಂಗಿನಕಾಯಿಯನ್ನು ಒಟ್ಟಿಗೆ ತಿನ್ನಲು ಇಟ್ಟರೆ. ಶನಿದೇವ ಸಂತೋಷಪಡುತ್ತಾನೆ. ಈ ಪರಿಹಾರ ಶನಿಯನ್ನು ಶಾಂತವಾಗಿಡಲು ಸಹ ಸಹಾಯ ಮಾಡುತ್ತದೆ. ಇದರಿಂದ ಶನಿ ದೋಷ ಸಹ ನಿವಾರಣೆಯಾಗುವ ಸಾಧ್ಯತೆ ಇದೆ. 

ಸೂರ್ಯ ಬಲಗೊಳ್ಳಲು

ನಿಮ್ಮ ಜಾತಕದಲ್ಲಿ ಸೂರ್ಯ ಗ್ರಹವು ದುರ್ಬಲಗೊಳ್ಳುವುದರಿಂದ ತೊಂದರೆಗೀಡಾಗಿದ್ದರೆ, ಈ ಪರಿಹಾರ ನಿಮ್ಮ ಸಹಾಯಕ್ಕೆ ಬರಬಹುದು. ತಾಮ್ರದ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಬೆರೆಸಿ ಕುಡಿಯುವುದರಿಂದ ಸೂರ್ಯ ಬಲಗೊಳ್ಳುತ್ತಾನೆ ಮತ್ತು ಅದು ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Latest Videos

click me!