ದೇವರ ಕೋಣೆಯಲ್ಲಿ ಬೆಳ್ಳಿ ನಾಣ್ಯವಿಟ್ಟರೆ ಏನಾಗುತ್ತೆ? ದುಡ್ಡು ಹೆಚ್ಚಾಗಲು ಮಾಡಿ ನೋಡಿ

First Published | Jul 5, 2023, 5:35 PM IST

ವಾಸ್ತು ಶಾಸ್ತ್ರದಲ್ಲಿ, ಮನೆಯ ದೇವರ ಕೋಣೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇಟ್ಟರೆ ಮತ್ತು ವಾಸ್ತುವಿನ ಸರಿಯಾದ ನಿಯಮಗಳನ್ನು ಅನುಸರಿಸಿದ್ರೆ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತೆ ಮತ್ತು ಸಮೃದ್ಧಿ ಬರುತ್ತೆ ಎಂದು ನಂಬಲಾಗಿದೆ. 

ವಾಸ್ತು (Vaastu) ನಿಯಮಗಳ ಪ್ರಕಾರ ಮನೆಯ ದೇವರ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಿದ್ರೆ, ಸಂತೋಷ ಮತ್ತು ಸಮೃದ್ಧಿ ಉಳಿಯುತ್ತೆ. ದೇವರ ಕೋಣೆ ಸರಿಯಾದ ದಿಕ್ಕು ಮತ್ತು ಸ್ಥಳವನ್ನು ಹೊಂದಿರಬೇಕು ಮತ್ತು ಮನೆಯ ಸಂತೋಷ ಮತ್ತು ಸಮೃದ್ಧಿ ಕಾಪಾಡಿಕೊಳ್ಳಲು ಕೆಲವು ವಿಶೇಷ ವಸ್ತುಗಳನ್ನು ಅದರಲ್ಲಿ ಇಡಬೇಕು.

ಆ ವಸ್ತುಗಳಲ್ಲಿ ಒಂದು ಬೆಳ್ಳಿ ನಾಣ್ಯ (Silver coin) ಇಟ್ಟರೆ, ಮನೆಯಲ್ಲಿ ಸಂತೋಷ ನೆಲೆಸುತ್ತೆ ಎಂದು ನಂಬಲಾಗಿದೆ. ಪೂಜಾ ಕೋಣೆಯಲ್ಲಿ ಬೆಳ್ಳಿಯ ನಾಣ್ಯ ಇಡುವ ಪ್ರಾಮುಖ್ಯತೆಯು ವ್ಯಕ್ತಿಯ ನಂಬಿಕೆ ಮತ್ತು ಸಂಪ್ರದಾಯಗಳನ್ನು ಅವಲಂಬಿಸಿ ಬದಲಾಗುತ್ತೆ.

Tap to resize

ವಾಸ್ತುವನ್ನು ನಂಬಿದರೆ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಇದನ್ನು ಮಾಡೋದರಿಂದ ಮನೆಯಲ್ಲಿ ವಾಸ್ತು ದೋಷವಿರೋಲ್ಲ, ತಾಯಿ ಲಕ್ಷ್ಮಿಯ (Goddess Lakshmi) ಕೃಪೆ ಯಾವಾಗಲೂ ಇರುತ್ತೆ ಮತ್ತು ಮನೆಯ ಜನರ ಆರೋಗ್ಯವು ಉತ್ತಮವಾಗಿರುತ್ತೆ. 

ಬೆಳ್ಳಿಯ ನಾಣ್ಯ ಲಕ್ಷ್ಮಿಯನ್ನು ಆಕರ್ಷಿಸುತ್ತೆ 
ಬೆಳ್ಳಿ ಯಾವಾಗಲೂ ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಮನೆಯ ದೇವರ ಕೋಣೆಯಲ್ಲಿ(Pooja room) ಬೆಳ್ಳಿಯ ನಾಣ್ಯ ಇಡುವುದು ಯಾವಾಗಲೂ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಕಾಪಾಡುತ್ತೆ ಮತ್ತು ಮನೆಗೆ ಆರ್ಥಿಕ ಸಮೃದ್ಧಿಯನ್ನು ತರುತ್ತೆ ಎಂದು ನಂಬಲಾಗಿದೆ.

ಬೆಳ್ಳಿ ನಾಣ್ಯವು ಧನಾತ್ಮಕ ಶಕ್ತಿಯನ್ನು ಹರಿಸುತ್ತೆ, ಅದು ಹಣವನ್ನು ಆಕರ್ಷಿಸುತ್ತೆ ಮತ್ತು ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತೆ. ಬೆಳ್ಳಿ ಪರಿಶುದ್ಧತೆ, ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದ ಲೋಹವೆಂದು ಹೇಳಲಾಗುತ್ತೆ. ದೇವರ ಕೋಣೆಯಲ್ಲಿ ಬೆಳ್ಳಿ ನಾಣ್ಯವನ್ನು ಇರಿಸುವ ಮೂಲಕ, ವ್ಯಕ್ತಿ ಈ ಗುಣಗಳನ್ನು ತನ್ನ ಮನೆಗೆ ಆಹ್ವಾನಿಸುತ್ತಾನೆ ಎಂದು ನಂಬಲಾಗಿದೆ. 

ದೇವತೆಗಳನ್ನು ಗೌರವಿಸುವ ಒಂದು ಮಾರ್ಗ. 
ದೇವರ ಕೋಣೆಯಲ್ಲಿ ಬೆಳ್ಳಿಯ ನಾಣ್ಯವನ್ನು ಇಡುವ ಕ್ರಿಯೆಯು ಒಂದು ರೀತಿಯ ಪೂಜೆಯಾಗಿದೆ. ಇದು ದೇವತೆಗಳಿಗೆ ಗೌರವವನ್ನು ತೋರಿಸುವ ಮತ್ತು ಅವರ ಆಶೀರ್ವಾದವನ್ನು ಪಡೆಯುವ ಒಂದು ಮಾರ್ಗವಾಗಿದೆ. ನೀವು ಬೆಳ್ಳಿಯ ನಾಣ್ಯವನ್ನು ಮನೆಯ ದೇವಾಲಯದಲ್ಲಿ ಸರಿಯಾದ ಸ್ಥಳದಲ್ಲಿ ಇಟ್ಟರೆ, ದೇವತೆಗಳ ಆಶೀರ್ವಾದ ನಿಮ್ಮ ಮೇಲೆ ಉಳಿಯುತ್ತೆ.

ಬೆಳ್ಳಿಯು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರನನ್ನು ಸಂಪತ್ತು, ಪ್ರೀತಿ (Love) ಮತ್ತು ಸೌಂದರ್ಯದ ದೇವರು ಎಂದು ಹೇಳಲಾಗುತ್ತೆ ಮತ್ತು ಪೂಜಿಸಲಾಗುತ್ತೆ. ಬೆಳ್ಳಿಯ ನಾಣ್ಯವನ್ನು ಮನೆಯ ದೇವರ ಕೋಣೆಯಲ್ಲಿ ಇಟ್ಟರೆ ಶುಕ್ರನನ್ನು ಸಂತೋಷಪಡಿಸಬಹುದು. ದೇವರ ಕೋಣೆಯಲ್ಲಿ ನಾಣ್ಯವನ್ನು ಇಟ್ಟಾಗ, ಆ ಸಮಯದಲ್ಲಿ ನೀವು ಶುಕ್ರನನ್ನು ಪ್ರಾರ್ಥಿಸಬೇಕು ಮತ್ತು ಮನೆಯ ಸಮೃದ್ಧಿಯನ್ನು ಬಯಸಬೇಕು.

ಬೆಳ್ಳಿ ನಾಣ್ಯವನ್ನು ಮನೆಯ ದೇವರ ಕೋಣೆಯಲ್ಲಿ ಎಲ್ಲಿ ಇಡಬೇಕು? 
ಮನೆಯ ದೇವರ ಕೋಣೆಯಲ್ಲಿ ಬೆಳ್ಳಿಯ ನಾಣ್ಯವನ್ನು ಇಡೋದಾದ್ರೆ, ಅದರ ಸ್ಥಳವೂ ಮುಖ್ಯವಾಗಿದೆ. ವಾಸ್ತು ನಿಯಮಗಳ ಪ್ರಕಾರ, ಇದನ್ನು ಕೋಣೆಯಲ್ಲಿ ಈಶಾನ್ಯ ಮೂಲೆಯಲ್ಲಿ ಇರಿಸಬೇಕು, ಇದು ಸಂಪತ್ತು ಮತ್ತು ಸಮೃದ್ಧಿಯ ದಿಕ್ಕು.

ನಾಣ್ಯವನ್ನು ಮೇಲಕ್ಕೆ ಮುಖ ಮಾಡಿ ಇಡಬೇಕು, ಯಾಕಂದ್ರೆ ಅದು ಇನ್ನೂ ಹೆಚ್ಚಿನ ಹಣವನ್ನು ಆಕರ್ಷಿಸುತ್ತೆ. ಶುಕ್ರವಾರ ಹೊಸ ಬೆಳ್ಳಿಯ ನಾಣ್ಯವನ್ನು ಮನೆಗೆ ತರಬೇಕೆಂದು ನಂಬಲಾಗಿದೆ ಏಕೆಂದರೆ ಈ ದಿನ ಲಕ್ಷ್ಮಿಯ ದಿನ ಮತ್ತು ಹಾಗೆ ಮಾಡೋದರಿಂದ, ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಎಂದು ನಂಬಲಾಗಿದೆ. ನಾಣ್ಯವನ್ನು ದೇವಾಲಯದಲ್ಲಿ ಇಡುವ ಮೊದಲು ಅದನ್ನು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸೋದು ಅವಶ್ಯಕ. 

ಬೆಳ್ಳಿ ನಾಣ್ಯವು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತೆ. ಬೆಳ್ಳಿ ಲೋಹವು ರಕ್ಷಣಾತ್ಮಕ ಗುಣಲಕ್ಷಣಗಳನ್ನು ಸಹ ಹೊಂದಿದೆ. ನಿಮ್ಮ ಮನೆಯ ದೇವರ ಕೋಣೆ ಅಥವಾ ಕೆಲಸದ ಸ್ಥಳದಲ್ಲಿ ಬೆಳ್ಳಿಯ ನಾಣ್ಯವನ್ನು ಇರಿಸುವ ಮೂಲಕ, ನಕಾರಾತ್ಮಕ ಶಕ್ತಿಯನ್ನು ತಪ್ಪಿಸಬಹುದು.

ಬೆಳ್ಳಿಯ ನಾಣ್ಯಗಳನ್ನು ಮನೆಯ ಈ ಸ್ಥಳಗಳಲ್ಲಿ ಇಡಬಹುದು. 
ಬೆಳ್ಳಿ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಲೋಹವಾಗಿದೆ.  ಮನೆಯ ಈಶಾನ್ಯ ಮೂಲೆಯಲ್ಲಿ ಬೆಳ್ಳಿಯ ನಾಣ್ಯವನ್ನು ಇಡೋದರಿಂದ ಶಕ್ತಿಯ ಹರಿವು ಸುಧಾರಿಸುತ್ತೆ ಮತ್ತು ಹೆಚ್ಚು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತೆ.  

Latest Videos

click me!