Vastu Tips: ದಾಸವಾಳದ ಹೂ ಪೂಜೆಗೆ ಯೋಗ್ಯವೇ? ಸುವಾಸನೆ ಇಲ್ಲ ಹೂ ದೇವರಿಗೆ ಅರ್ಪಿಸಬಹುದಾ?

Published : Oct 15, 2026, 03:14 PM IST

ದಾಸವಾಳ ಹೂವಿಗೆ ಸುವಾಸನೆ ಇಲ್ಲದಿದ್ದರೂ, ಇದನ್ನು ದೇವರಿಗೆ ಅರ್ಪಿಸಬಹುದೇ ಎಂಬ ಗೊಂದಲ ಹಲವರಲ್ಲಿದೆ. ಶಾಸ್ತ್ರಗಳ ಪ್ರಕಾರ, ಬಣ್ಣ ಮತ್ತು ಆಕರ್ಷಣೆಯಿಂದಾಗಿ ಇದು ಶಕ್ತಿಶಾಲಿ ಪುಷ್ಪವಾಗಿದೆ. ಭಕ್ತಿಯಿಂದ ಅರ್ಪಿಸಿದರೆ ಇದು ಪರಮ ಶ್ರೇಷ್ಠ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

PREV
17
ಪರಿಮಳವಿಲ್ಲದ ದಾಸವಾಳ ಪೂಜೆಗೆ ಯೋಗ್ಯವೇ? ಅಚ್ಚರಿಯ ಸತ್ಯ!

ದಾಸವಾಳದ ಹೂವಿನ ಗಡಿ ಬಹುತೇಕ ಮನೆಗಳ ಆವರಣದಲ್ಲಿರುತ್ತದೆ. ಪ್ರಮುಖವಾಗಿ ಗ್ರಾಮಗಳಲ್ಲಿ ಪ್ರತಿಯೊಂದು ಮನೆಯ ಬಳಿಯೂ ದಾಸವಾಳ ಬೆಳೆಸುತ್ತಾರೆ. ದಾಸವಾಳ ಹೂ ಸಂಪತ್ತಿಗೆ ಸಂಕೇತವಾದ ಲಕ್ಷ್ಮೀ ದೇವಿಗೆ ಪ್ರತೀಕವಾಗಿದೆ ಎಂದು ಹಲವರು ನಂಬುತ್ತಾರೆ. ಇನ್ನು ವಾಸ್ತು ಶಾಸ್ತ್ರದಲ್ಲೂ ಈ ಗಿಡವನ್ನು ಮನೆಯ ನಿರ್ಧಿಷ್ಟ ಪ್ರದೇಶದಲ್ಲಿ ನಾಟಿ ಮಾಡಿ ಬೆಳೆಸಿದರೆ ಮನೆಯ ಸಮಸ್ಯೆಗಳಿಗೆ ಪರಿಷ್ಕರ ಸಿಗಲಿದೆ ಎಂದು ಹೇಳಲಾಗುತ್ತದೆ.

27
ದೇವರಿಗೆ ಅರ್ಪಿಸಬಹುದೇ?

ಆದರೆ, ಸಾಮಾನ್ಯವಾಆಗಿ ಹಿಂದೂ ಧರ್ಮದಲ್ಲಿ ದೇವರಿಗೆ ಪೂಜೆ ಸಲ್ಲಿಸುವಾಗ ಸುವಾಸನೆಭರಿತ ಹೂವುಗಳನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಾಸವಾಳ ಹೂವಿಗೆ ಯಾವುದೇ ಸುಗಂಧ ಇಲ್ಲ, ಹಾಗಿದ್ದರೂ ಇದನ್ನು ದೇವರಿಗೆ ಅರ್ಪಿಸಬಹುದೇ? ಇದಕ್ಕೆ ಪೂಜೆ ಯೋಗ್ಯವೇ ಎಂಬ ಗೊಂದಲ ಹಲವರನ್ನು ಕಾಡುತ್ತಿದೆ. ಈ ಬಗ್ಗೆ ಪುಷ್ಪ ಎಂಬವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಈ ಬಗ್ಗೆ ತಮ್ಮ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

37
ಪೂಜೆಯಿಂದ ದಾಸವಾಳವನ್ನು ಹೊರಗಿಡಲಾಗಿಲ್ಲ

ಶಾಸ್ತ್ರಗಳ ಪ್ರಕಾರ, ಕೆಲವು ಹೂಗಳಿಗೆ ಬಾಹ್ಯ ಸುಗಂಧವಿಲ್ಲದಿದ್ದರೂ, ಅವುಗಳ ಬಣ್ಣ, ಆಕರ್ಷಣೆ ಮತ್ತು ಆಯಾ ದೇವತೆಗಳಿಗೆ ಪ್ರಿಯವಾದ ಶಕ್ತಿಯನ್ನು ಹೊಂದಿರುತ್ತದೆ. ಇದೇ ರೀತಿ ಕೆಂಪಿ ದಾಸವಾಳ ಹೂ, ಶಕ್ತಿಶಾಲಿ ಮತ್ತು ಪವಿತ್ರ ಪುಷ್ಪಗಳ ಸಾಲಿಗೆ ಸೇರುತ್ತದೆ. ಆದ್ದರಿಂದ ಕೇವಲ ಸುವಾಸನೆ ಇಲ್ಲ ಎಂಬ ಕಾರಣಕ್ಕೆ ಪೂಜೆಯಿಂದ ದಾಸವಾಳವನ್ನು ಹೊರಗಿಡಲಾಗಿಲ್ಲ. ಬದಲಿಗೆ ಈ ಹೂವಿಗೆ ದೇವತೆಗಳ ಪೂಜೆಯಲ್ಲಿ ಪ್ರಥಮ ಸ್ಥಾನ ನೀಡಲಾಗಿದೆ.

47
ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಿದರೆ ಅದೇ ಪರಮ ಶ್ರೇಷ್ಠ

ಪುಷ್ಪ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವರು, ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ಅರ್ಪಿಸುವ ಹೂವು ಸುವಾಸನೆಯ ಮಲ್ಲಿಗೆಯೇ ಆಗಿರಲಿ ಅಥವಾ ಪರಿಮಲವಿಲ್ಲದ ದಾಸವಾಳವೇ ಆಗಿರಲಿ ಅವನ್ನು ಅಲಂಕರಿಸಿ ಪೂಜೆ ಮಾಡುವವರು ತನು ಮನ ಶುದ್ದಿಯಿಂದ ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಿದರೆ ಅದೇ ಪರಮ ಶ್ರೇಷ್ಠ ಅಲ್ಲವೇ? ಮನಸ್ಸು ಶುದ್ಧ ವಿಲ್ಲದೆ ಮಲ್ಲಿಗೆಇಟ್ಟು ಪೂಜೆ ಮಾಡಿದರೂ ಅದು ದೇವರಿಗೆ ಸಲ್ಲುವುದಿಲ್ಲ ಎಂದು ವಿಲಾಕ್ಷಿ ಭಟ್ ಎಂಬವರು ತಿಳಿಸಿದ್ದಾರೆ.

57
ವಿಘ್ನಗಳು ದೂರವಾಗಿ ಶುಭವಾಗುತ್ತದೆ

ಹಂದಾಡಿ ಆಂಡ್ರ್ಯೂ ಡಿ'ಸಿಲ್ವಾ ಎಂಬವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೆಂಪು ದಾಸವಾಳ ಹೂವಿಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಕೆಂಪು ದಾಸವಾಳ ಹೂವು ದೇವತೆಗಳಿಗೆ ಅತ್ಯಂತ ಪ್ರಿಯವಾದದ್ದು. ವಿಶೇಷವಾಗಿ ಕಾಳಿ ದೇವಿ, ದುರ್ಗಾ ದೇವಿ ಮತ್ತು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಇದನ್ನು ಬಳಸಲಾಗುತ್ತದೆ. ಗಣೇಶನಿಗೆ ಕೆಂಪು ದಾಸವಾಳವನ್ನು ಅರ್ಪಿಸುವುದರಿಂದ ವಿಘ್ನಗಳು ದೂರವಾಗಿ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಕೆಂಪು ದಾಸವಾಳದ ಗಿಡವನ್ನು ನೆಡುವುದು ಮತ್ತು ಪೂಜಿಸುವುದು ಧನಾತ್ಮಕ ಶಕ್ತಿ ಹಾಗೂ ಲಕ್ಷ್ಮಿ ಕಟಾಕ್ಷವನ್ನು ತರುತ್ತದೆ ಎಂದು ನಂಬಲಾಗಿದೆ ಎಂದು ತಿಳಿಸಿದ್ದಾರೆ.

67
ಕೆಂಪು ಬಿಳಿ ದಾಸವಾಳ, ನಂದಿ ಬಟ್ಟಲು, ಪಾರಿಜಾತ, ಮಲ್ಲಿಗೆ

ನಮ್ಮ ಮನೆಯ ಸಮೀಪ ದೇವಸ್ಥಾನ ಇದೆ, ಈ ದೇವಸ್ಥಾನದ ಪೂಜಾರಿಯವರು ನಮ್ಮ ಬಡಾವಣೆಯ ಮನೆಗಳ ಮುಂದೆ ಇರುವ ಗಿಡಗಳಿಂದ ಬೆಳಗಿನ ಜಾವ ಬೇರೆ ಬೇರೆ ರೀತಿಯ ಹೂಗಳನ್ನು ಸಂಗ್ರಹಿಸಿ ಒಯ್ಯುತ್ತಾರೆ. ಇದರಲ್ಲಿ ಕೆಂಪು ಬಿಳಿ ದಾಸವಾಳ, ನಂದಿ ಬಟ್ಟಲು, ಪಾರಿಜಾತ, ಮಲ್ಲಿಗೆ ಇತ್ಯಾದಿ ಇರುತ್ತವೆ. ಹಾಗೆಯೇ ಮಹಿಳೆಯರು ಕೂಡ ಒಯ್ಯುತ್ತಾರೆ. ನಮ್ಮ ಮನೆಯ ಕೆಂಪು ದಾಸವಾಳ ನಾನೇ ತೆಗೆದು ಕೊಟ್ಟಿದ್ದೇನೆ ಎಂದು ನದಾಫ್ ಎಂಬವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

77
ಗಮನಿಸಿ:

Disclaimer: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಓದುಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವಿವಿಧ ವಿದ್ವಾಂಸರ ಸಲಹೆಗಳು ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಮಾತ್ರ ಇದನ್ನು ಒದಗಿಸಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಮಾಹಿತಿಯನ್ನು ದೃಢಿಕರಿಸುವುದಿಲ್ಲ.

Read more Photos on
click me!

Recommended Stories