ಜರಿ ಒಂದು ರೀತಿಯ ಹುಳುವಾಗಿದ್ದು, ಮಳೆಗಾಲದಲ್ಲಿ ಹೆಚ್ಚಿನ ಮನೆಗಳಲ್ಲಿ ಮೂಲೆ, ಮೂಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಅನೇಕ ಮನೆಗಳಲ್ಲಿ, ಅವು ಯಾವುದೇ ಟೈಮಲ್ಲಿ ಬೇಕಾದರೂ ಹೊರಬರುತ್ತವೆ. ಸಾಮಾನ್ಯವಾಗಿ ಜನರು ಜರಿ ಹುಳುವನ್ನು ನೋಡಲು ಹೆದರುತ್ತಾರೆ. ಆದರೆ ವಾಸ್ತು ಪ್ರಕಾರ, ಜರಿ ಹುಳು ಅದೃಷ್ಟ ಮತ್ತು ದುರಾದೃಷ್ಟವನ್ನು ಸೂಚಿಸುತ್ತದೆ. ಜರಿ ಹುಳುವನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ನೀವು ಎಂದಾದರೂ ಮನೆಯೊಳಗೆ ಅಥವಾ ಹೊರಗೆ, ಜರಿ ಹುಳು ಕಂಡು ಬಂದರೆ, ಅದನ್ನು ಕೊಲ್ಲಬೇಡಿ. ಬದಲಾಗಿ ಅದನ್ನು ಮನೆಯಿಂದ ಹೊರಗೆ ಎಸೆಯಿರಿ. ಏಕೆಂದರೆ ಜರಿ ಹುಳು ಕೊಲ್ಲುವುದರಿಂದ ಜಾತಕದಲ್ಲಿ ರಾಹುವಿನ ಸ್ಥಾನ ದುರ್ಬಲವಾಗುತ್ತದೆ. ಮನೆಯಲ್ಲಿ ಜರಿ ಹುಳು ಹೇಗೆ ಮಂಗಳಕರವಾಗಿ ಅಥವಾ ಅಶುಭವಾಗಿ ಕಾಡುತ್ತದೆ ಅನ್ನೋದನ್ನು ತಿಳಿಯಿರಿ.
ಈ ಸ್ಥಳಗಳಲ್ಲಿ ಜರಿ ಹುಳು ಕಂಡು ಬಂದರೆ
ವಾಸ್ತು ಪ್ರಕಾರ, ಜರಿ ಹುಳು ಮನೆಯ ನೆಲದಲ್ಲಿ ತೆವಳುತ್ತಿರುವುದು ಕಂಡುಬಂದರೆ, ಮನೆಯಲ್ಲಿ ವಾಸ್ತು ದೋಷವಿದೆ (vastu dosha) ಎಂದು ಅರ್ಥಮಾಡಿಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಎಸೆಯಿರಿ. ಯಾವತ್ತೂ ಅದನ್ನು ಕೊಲ್ಲಲು ಹೋಗಬೇಡಿ.
ಅಡುಗೆಮನೆಯಲ್ಲಿ ಜರಿ ಹುಳು ಕಂಡುಬಂದರೆ, ಅಲ್ಲಿಯ ವಾಸ್ತು ಕೆಟ್ಟದಾಗಿದೆ ಎಂದು ಅರ್ಥ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ (health effec) ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅವುಗಳ ಬಗ್ಗೆ ಎಚ್ಚರವಹಿಸಿ.
ರಾಹು ದುರ್ಬಲನಾಗುವ ಸಂಕೇತ
ವಾಸ್ತು ಪ್ರಕಾರ, ಮುಖ್ಯ ದ್ವಾರದ ಹೊಸ್ತಿಲು, ಶೌಚಾಲಯ ಅಥವಾ ಮೆಟ್ಟಿಲಲ್ಲಿ ಜರಿ ಹುಳು ಹರಿದಾಡುವುದನ್ನು ನೋಡಿದರೆ, ನಿಮ್ಮ ಜಾತಕದಲ್ಲಿ ರಾಹು ದುರ್ಬಲನಾಗಿದ್ದಾನೆ ಎಂದು ಅರ್ಥಮಾಡಿಕೊಳ್ಳಿ. ಇದಕ್ಕೆ ಸರಿಯಾದ ಪರಿಹಾರ ಮಾಡಿಕೊಳ್ಳೋದು ಉತ್ತಮ.
ವಾಸ್ತು ಶಾಸ್ತ್ರದ ಪ್ರಕಾರ, ಜರಿ ಹುಳು ತಲೆ ಮೇಲೆ ಹತ್ತಿದರೆ, ಅದನ್ನು ರಾಹು ದುರ್ಬಲನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮುಂಬರುವ ಸಮಯದಲ್ಲಿ, ನೀವು ಕೆಲವು ಕಾಯಿಲೆಗಳಿಂದ ಬಳಲಬಹುದು. ಆದುದರಿಂದ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸೋದು ಉತ್ತಮ.
ಅದೃಷ್ಟದ ಸಂಕೇತಗಳನ್ನು ನೀಡುವ ಜರಿ ಹುಳು
ವಾಸ್ತು ಶಾಸ್ತ್ರದ ಪ್ರಕಾರ, ಜರಿ ಹುಳು ದುರಾದೃಷ್ಟ ಮತ್ತು ಅದೃಷ್ಟದ ಸಂಕೇತವಾಗಿದೆ. ನಿಮ್ಮ ಪೂಜಾ ಮನೆಯಲ್ಲಿ ಜರಿ ಹುಳು ತೆವಳುತ್ತಿರುವುದು ಕಂಡುಬಂದರೆ, ಅದು ಅದೃಷ್ಟದ ಸಂಕೇತವಾಗಿದೆ. ಇದರಿಂದ ಮನೆಯಲ್ಲಿ ಎಲ್ಲವೂ ಉತ್ತಮವಾಗುತ್ತೆ ಎಂದು ತಿಳಿದು ಬಂದಿದೆ.
ನೀವು ಮನೆಯಲ್ಲಿ ಜರಿ ಹುಳುವನ್ನು ಒಂದು ಸಲ ನೋಡಿದರೆ ಮತ್ತು ನಂತರ ಅದು ಇದ್ದಕ್ಕಿದ್ದಂತೆ ಕಣ್ಮರೆಯಾದರೆ, ಅದರ ಬಗ್ಗೆ ಯೋಚನೆ ಮಾಡಿ, ಟೆನ್ಷನ್ ಮಾಡಿಕೊಳ್ಳಬೇಡಿ.ಇದರ ಅರ್ಥ ನೀವು ಅಂದುಕೊಂಡ ಕೆಲವು ಕೆಲಸಗಳು ಖಂಡಿತವಾಗಿಯೂ ಪೂರ್ಣಗೊಳ್ಳುತ್ತವೆ ಎಂದು ಅರ್ಥಮಾಡಿಕೊಳ್ಳಿ.
ಮನೆಯ ಮುಖ್ಯ ಬಾಗಿಲಿನಲ್ಲಿ ಜರಿ ಹುಳು ಕಂಡು ಬಂದರೆ
ವಾಸ್ತುವಿನ ಪ್ರಕಾರ, ಜರಿ ಹುಳು ಮನೆಯ ಮುಖ್ಯ ಬಾಗಿಲಿನಿಂದ ಹೊರಗೆ ಹೋಗುವುದನ್ನು ನೋಡಿದರೆ, ಜರಿ ಹುಳು ಮನೆಯ ಪ್ರತಿಯೊಂದು ಸಮಸ್ಯೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳಿ. ಅದೇ ಸಮಯದಲ್ಲಿ, ಜರಿ ಹುಳು ಒಳಗೆ ಬರುವುದನ್ನು ನೀವು ನೋಡಿದರೆ, ಅದು ಸಮಸ್ಯೆಗಳನ್ನು ಮನೆಗೆ ತರುತ್ತಿದೆ ಎಂದು ಸೂಚಿಸುತ್ತದೆ.
ಸತ್ತ ಜರಿ ಹುಳುವನ್ನು ನೋಡಿದರೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ನೆಲದ ಮೇಲೆ ಜರಿ ಹುಳು (centipede) ಸತ್ತಿರುವುದು ಕಂಡುಬಂದರೆ, ನಿಮ್ಮ ಮನೆಯಲ್ಲಿ ದೊಡ್ಡ ವಿಪತ್ತು ಸಂಭವಿಸುವ ಸಾಧ್ಯತೆ ಇತ್ತು, ಆದರೆ ಅದೀಗ ತಪ್ಪಿ ಹೋಗಿದೆ ಎಂದು ಅರ್ಥ ಅನ್ನೋದನ್ನು ಜ್ಯೋತಿಷ್ಯ ಶಾಸ್ತ್ರ ಸೂಚಿಸುತ್ತದೆ.