Vastu Tips: ಸಂತೋಷ ಹಾಳು ಮಾಡುವ ಈ ಐದು ಸಸ್ಯಗಳನ್ನು ಮನೆಯಲ್ಲಿ ಬೆಳೆಸ್ಬೇಡಿ!

First Published | Jul 23, 2022, 1:51 PM IST

ಮನೆಗೆ ಸಸ್ಯಗಳನ್ನು ನೀವು ಆರಿಸುವಾಗ, ಹಾನಿಕಾರಕ ಸಸ್ಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು, ನೀವು ಮನೆಯಲ್ಲಿ ಇರಬಾರದ ಕೆಲವು ಸಸ್ಯಗಳಿವೆ. ಏಕೆಂದರೆ, ಅವು ಮನೆಯ ಸಂತೋಷವನ್ನು ಹಾಳು ಮಾಡುತ್ತವೆ. 

ಮುಳ್ಳಿನ ಗಿಡಗಳು(thorny plants)
ಕೆಲವರು ತಮ್ಮ ಮನೆಯಲ್ಲಿ ಕಳ್ಳಿ, ಕ್ಯಾಕ್ಟಸ್ ಮೊದಲಾದ ಮುಳ್ಳಿನ ಗಿಡಗಳನ್ನು ಶೋಪೀಸ್ ಆಗಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಸಸ್ಯಗಳಿಂದ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ, ಇದು ಮನೆಯ ಸಂತೋಷ ಮತ್ತು ಶಾಂತಿಯನ್ನು ಕ್ರಮೇಣ ಕೊನೆಗೊಳಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುಳ್ಳಿನ ಗುಲಾಬಿ ಗಿಡಗಳನ್ನು ಕೂಡ ತಪ್ಪಿಸಬೇಕು. ಅನೇಕ ಇತರ ಮುಳ್ಳಿನ ಸಸ್ಯಗಳು ಮಾರುಕಟ್ಟೆಯಲ್ಲಿ ಪ್ರದರ್ಶನವಾಗಿ ಕಾಣಿಸಿಕೊಳ್ಳುತ್ತವೆ, ಆದರೆ ಅಂಥ ಸಸ್ಯಗಳನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸಿ. ದೊಡ್ಡ ಅಂಗಳವೋ, ಹಿತ್ತಿಲೋ ಇದ್ದರೆ ಅಲ್ಲಿ ನೆಡಬಹುದು. ಮನೆಯ ಬಾಲ್ಕನಿ, ಟೆರೇಸ್‌ನಲ್ಲಿ ಬೇಡ. 

ಮೆಹಂದಿ ಗಿಡ ನೆಡಬೇಡಿ
ಕೆಲವರು ತಮ್ಮ ಮನೆಯ ಅಂಗಳದಲ್ಲಿ ಮೆಹಂದಿ ಗಿಡವನ್ನು ಬಹಳ ಉತ್ಸಾಹದಿಂದ ನೆಡುತ್ತಾರೆ, ಆದರೆ ಇದನ್ನು ವಾಸ್ತು ಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ನಕಾರಾತ್ಮಕ ಶಕ್ತಿಗಳು ಈ ಸಸ್ಯದ ಕಡೆಗೆ ಬೇಗನೆ ಆಕರ್ಷಿತವಾಗುತ್ತವೆ ಎಂದು ಹೇಳಲಾಗುತ್ತದೆ. ಈ ಸಸ್ಯವು ಬೆಳೆದಂತೆ, ನಕಾರಾತ್ಮಕ ಶಕ್ತಿಗಳ ಪರಿಣಾಮವೂ ಹೆಚ್ಚಾಗುತ್ತದೆ. ಅನೇಕ ಬಾರಿ ಅದು ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಮನೆಯ ಹತ್ತಿರ ಯಾವತ್ತೂ ಮೆಹಂದಿ ಗಿಡವನ್ನು ನೆಡಬೇಡಿ.

Tap to resize

ಅಮರ್ಬೆಲ್ ಸಸ್ಯ(cuscuta)
ಅಮರ್ಬೆಲ್ ಸಸ್ಯವು ನೋಟದಲ್ಲಿ ಸುಂದರವಾಗಿ ಕಾಣಿಸಬಹುದು, ಆದರೆ ಅದನ್ನು ಮನೆಯಲ್ಲಿ ನೆಡಬೇಡಿ. ಈ ಬಳ್ಳಿಯು ಬಹಳ ವೇಗವಾಗಿ ಹರಡುತ್ತದೆ ಮತ್ತು ಇತರ ಮರಗಳು ಮತ್ತು ಸಸ್ಯಗಳಿಗೆ ಅಂಟಿಕೊಳ್ಳುವ ಮೂಲಕ, ಅದು ನಿಧಾನವಾಗಿ ಅವುಗಳನ್ನು ಸೆರೆ ಹಿಡಿದು ಉಸಿರುಗಟ್ಟಿಸುತ್ತದೆ. ಆದ್ದರಿಂದ ಇದನ್ನು ನಕಾರಾತ್ಮಕ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದರ ನಕಾರಾತ್ಮಕ ಪರಿಣಾಮವು ಕುಟುಂಬದ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ, ಎಲೆ ಇಲ್ಲದ ಸಸ್ಯ ಖಂಡಿತಾ ಒಳ್ಳೆಯ ಸಸ್ಯವೆಂದು ಪರಿಗಣಿತವಾಗುವುದಿಲ್ಲ.

ನಿಂಬೆಗಿಡ(Lemon plant)
ಮನೆಯ ಮುಖ್ಯ ಬಾಗಿಲು ಅಥವಾ ಟೆರೇಸ್ ಮೇಲೆ ನಿಂಬೆ ಗಿಡವನ್ನು ನೆಡಬೇಡಿ. ಇದೂ ಕೂಡಾ ಮುಳ್ಳಿನ ಗಿಡವಾಗಿದ್ದು ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸಬಹುದು. ನಿಂಬೆ ಗಿಡವನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ನೆಡಬಹುದು. ಬ್ರಹ್ಮಸ್ಥಾನವಾಗಿರುವ ಕಾರಣ ಅಂಗಳದ ಮಧ್ಯದಲ್ಲಿಯೂ ನಿಂಬೆಯನ್ನು ನೆಡಬಾರದು. ನೀವು ಅದನ್ನು ಮನೆಯ ಸುತ್ತಲೂ ನೆಟ್ಟರೆ, ಅದರೊಂದಿಗೆ ತುಳಸಿಯನ್ನು ನೆಡಬೇಕು, ತುಳಸಿಯು ಅದರ ನಕಾರಾತ್ಮಕತೆಯನ್ನು ಕೊನೆಗೊಳಿಸುತ್ತದೆ.

Latest Videos

click me!