ಮನೆ ಸುತ್ತ ಗಿಡ ಇರಬೇಕು, ಒಳ್ಳೇದು, ಒಣಗಿದರೆ ದರಿದ್ರ ಒಕ್ಕರಿಸುತ್ತೆ!

First Published Aug 2, 2022, 1:27 PM IST

ಮನೆಯಲ್ಲಿರುವ ಸಸ್ಯಗಳಿಗೆ ಆಹಾರವನ್ನು ಅಂದರೆ ನೀರನ್ನು ನೀಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಸಸ್ಯಗಳು ಹಚ್ಚಹಸುರಾಗಿದ್ರೆ ಅದರಿಂದ ಮನೆಗೆ ಮಂಗಳವಾಗುತ್ತೆ ಎನ್ನಲಾಗುತ್ತೆ, ಆದರೆ ಅವು ಒಣಗಿದ್ರೆ, ಮನೆಯ ಮೇಲೆ ನಕಾರಾತ್ಮಕ ಶಕ್ತಿ ಆವರಿಸಿದೆ ಎಂದು ಅರ್ಥ. ಹೀಗೆ ಆದ್ರೆ ಸಮಸ್ಯೆ ಉಂಟಾಗುತ್ತದೆ ಅನ್ನೋದನ್ನು ಸೂಚಿಸುತ್ತದೆ. ಅವುಗಳ ಬಗ್ಗೆ ತಿಳಿಯೋಣ.
 

ಮನೆಯ ಸಣ್ಣ ತೋಟವಾಗಿರಬಹುದು ಅಥವಾ ಬಾಲ್ಕನಿಯ ಮೂಲೆಯಾಗಿರಬಹುದು. ಅನೇಕರು ಅದನ್ನು ಹಸಿರಾಗಿಡಲು ಮತ್ತು ಕೆಲವು ರೀತಿಯ ಸಸ್ಯಗಳನ್ನು ನೆಡಲು ಇಷ್ಟಪಡುತ್ತಾರೆ. ಅದು ತುಳಸಿಯಾಗಿರಲಿ ಅಥವಾ ಮನಿ ಪ್ಲಾಂಟ್ ಆಗಿರಲಿ, ಈ ಎಲ್ಲಾ ಗಿಡಗಳು ಮನೆಯನ್ನು ಅಲಂಕರಿಸಲು ಸಹಾಯ ಮಾಡುತ್ತೆ ಮತ್ತು ವಾಸ್ತುವಿಗೆ ಸಂಬಂಧಿಸಿದ ಕೆಲವು ನಂಬಿಕೆಗಳಿಗಾಗಿಯೂ ಈ ಗಿಡಗಳನ್ನು ಬಳಸಲಾಗುತ್ತೆ. 

ಕೆಲವೊಮ್ಮೆ ಬಹಳ ಕಾಳಜಿಯಿಂದ ನೆಟ್ಟ ಸಸ್ಯಗಳು ಕಣ್ಣಿನ ಮುಂದೆ ಒಣಗಿದಾಗ ತುಂಬಾ ಬೇಸರವಾಗುತ್ತೆ. ಯಾಕಪ್ಪಾ ಹೀಗಾಯ್ತು ಎಂದು ಯೋಚ್ನೆ ಮಾಡುತ್ತೇವೆ. ಗಿಡಗಳಿಗೆ ಬೇಕಾದಷ್ಟು ನೀರು ನೀಡಿ, ಗೊಬ್ಬರ ಹಾಕಿ ಚೆನ್ನಾಗಿ ಸಾಕಿದರೂ ಇಂತಹ ಸಮಸ್ಯೆ ಬಂದಾಗ ಬೇಸರವಾಗುತ್ತೆ. ಆದರೆ ನಿಮಗೊಂದು ವಿಷ್ಯ ಗೊತ್ತಾ? ಕೆಲವೊಂದು ಗಿಡಗಳು ಒಣಗಿದಾಗ ಮನೆಗೆ ನಕಾರಾತ್ಮಕ ಶಕ್ತಿ (Negative Energy) ಆವರಿಸಿದೆ ಅನ್ನೋದನ್ನು ತೋರಿಸುತ್ತೆ. 

ತುಳಸಿ

ತುಳಸಿಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ, ಈ ಸಸ್ಯಗಳು ಒಣಗಿದರೆ, ಅದನ್ನು ಹಣದ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಳಸಿ ಸಸ್ಯವು ಒಣಗುವುದು ಎಂದರೆ ತಾಯಿ ಲಕ್ಷ್ಮಿ ಅಸಮಾಧಾನಗೊಂಡಿದ್ದಾಳೆ ಎಂಬ ನಂಬಿಕೆಯಿದೆ. ಅದುದರಿಂದ ಗಿಡ ಒಣಗಲು ಬಿಡಬೇಡಿ.

ತುಳಸಿ ಗಿಡ ಒಣಗುವುದು ಹಣದ ನಷ್ಟಕ್ಕೆ ಕಾರಣವಾಗುತ್ತದೆ. ತುಳಸಿ ಸಸ್ಯವನ್ನು ಭಗವಾನ್ ವಿಷ್ಣುವಿನ ಪ್ರೀತಿಪಾತ್ರ ಗಿಡ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಸಸ್ಯವನ್ನು ಯಾವಾಗಲೂ ನೋಡಿಕೊಳ್ಳಬೇಕು. ಇದಕ್ಕೆ ನಿಯಮಿತವಾಗಿ ನೀರು ಹಾಕಬೇಕು ಮತ್ತು ಸಸ್ಯದ ಯಾವುದೇ ಭಾಗವು ಹುಳುಕಾಗಿದ್ದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು.

ಮನಿಪ್ಲಾಂಟ್

ಮನಿ ಪ್ಲಾಂಟ್‌ ಬಳ್ಳಿಯನ್ನು ಅಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ಹರಡಿದರೆ ಅದು ತುಂಬಾ ಸುಂದರವಾಗಿ ಕಾಣುತ್ತದೆ. ಯಾವಾಗಲೂ ಈ ಸಸ್ಯವನ್ನು ಮನೆಯ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಿ. ಇದರಿಂದ ಮನೆಗೆ ಸಮೃದ್ಧಿಯನ್ನು ನೀಡುತ್ತದೆ. ಇದರಿಂದ ಮನೆಗೆ ಒಳ್ಳೆಯದಾಗುತ್ತೆ.

ಮನಿ ಪ್ಲಾಂಟ್‌ನಲ್ಲಿ ಗಣೇಶ ನೆಲೆಸಿದ್ದಾನೆ ಎಂಬ ನಂಬಿಕೆಯಿದೆ. ಅವನು ಸಂತೋಷ ಸಮೃದ್ಧಿಯನ್ನು ನೀಡುತ್ತಾನೆ. ಆದ್ದರಿಂದ, ಮನಿ ಪ್ಲಾಂಟ್ ಗಿಡ ಒಣಗಿಸೋದನ್ನು ಸಂತೋಷ ಮತ್ತು ಸಮೃದ್ಧಿಯ ದೃಷ್ಟಿಯಿಂದ ಶುಭವೆಂದು ಪರಿಗಣಿಸಲಾಗುವುದಿಲ್ಲ. ಮನಿ ಪ್ಲಾಂಟ್ ಬೆಳೆಯಲು, ಬಳ್ಳಿಯ ವಿಸ್ತರಣೆಗೆ ಸರಿಯಾದ ಸ್ಥಳಾವಕಾಶ ಮತ್ತು ಸಾಧನಗಳು ಇರಬೇಕು.

ಶಮಿ ಸಸ್ಯ

ಶನಿ ಗ್ರಹಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ, ಶಮಿ ಸಸ್ಯವನ್ನು ಪೂಜಿಸುವ ಸಂಪ್ರದಾಯವಿದೆ. ಈ ಸಸ್ಯ ಒಣಗಿದರೆ, ಶನಿ ಕೋಪಕ್ಕೆ ಗುರಿಯಾಗಬೇಕಾಗಬಹುದು ಅಥವಾ ನೀವು ಶಿವನ ಕೋಪವನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ಕೆಲಸಕ್ಕೆ ಅಡ್ಡಿಯಾಗುತ್ತದೆ. ಈ ಸಸ್ಯಕ್ಕೆ ರಾಸಾಯನಿಕ ಗೊಬ್ಬರಗಳನ್ನು (chemical fertiliser) ನೀಡುವ ಬದಲು ಸಾವಯವ ಗೊಬ್ಬರ ನೀಡಬೇಕು. ಅದು ಒಣಗಿದರೆ, ಅದರ ಜಾಗದಲ್ಲಿ ಹೊಸ ಸಸ್ಯವನ್ನು ನೆಡಬೇಕು.

ಅಶೋಕ ವೃಕ್ಷ

ಅಶೋಕ ವೃಕ್ಷ ಧನಾತ್ಮಕ ಶಕ್ತಿಯನ್ನು (possitive energy) ನೀಡುತ್ತದೆ ಎಂದು ನಂಬಲಾಗಿದೆ. ಅಶೋಕ ವೃಕ್ಷ ಒಣಗಲು ಪ್ರಾರಂಭಿಸಿದರೆ, ಮನೆಯ ಸಂತೋಷ ಮತ್ತು ಶಾಂತಿಯನ್ನು ಭಂಗಗೊಳಿಸಬಹುದು. ಆದ್ದರಿಂದ ಅಶೋಕ ಗಿಡವನ್ನು ಒಣಗಲು ಬಿಡಬೇಡಿ ಮತ್ತು ಅದು ಒಣಗಿದರೆ, ಅದನ್ನು ಅಂಗಳದಿಂದ ತೆಗೆದುಹಾಕಿ.
 

click me!