ತಾಯಿ ಅನ್ನಪೂರ್ಣೆಯನ್ನು ಮೆಚ್ಚಿಸಲು ಈ ವಾಸ್ತು ನಿಯಮ ಪಾಲಿಸಿ

First Published May 12, 2023, 6:14 PM IST

ಸನಾತನ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ, ತಾಯಿ ಅನ್ನಪೂರ್ಣೆ ಅಡುಗೆಮನೆಯಲ್ಲಿ ವಾಸಿಸುತ್ತಾಳೆ. ಸರಳವಾಗಿ ಹೇಳೋದಾದ್ರೆ, ತಾಯಿ ಅನ್ನಪೂರ್ಣ ಅಡುಗೆಮನೆಯಲ್ಲಿ ನೆಲೆಸಿರುತ್ತಾರೆ. ಆದ್ದರಿಂದ, ಅಡುಗೆಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅವಶ್ಯಕ.

ಅಡುಗೆಮನೆಯಲ್ಲಿ ವಾಸ್ತು ನಿಯಮಗಳನ್ನು ಅನುಸರಿಸೋದ್ರಿಂದ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಇರೋದಿಲ್ಲ. ನಿರ್ಲಕ್ಷ್ಯದಿಂದ ಮನೆಯಲ್ಲಿ ವಾಸ್ತು ದೋಷಗಳು ಉದ್ಭವಿಸುತ್ತವೆ. ನೀವು ಸಹ ತಾಯಿ ಅನ್ನಪೂರ್ಣೆಯನ್ನು(Goddess Annapoorna) ಮೆಚ್ಚಿಸಲು ಬಯಸೋದಾದ್ರೆ, ವಾಸ್ತುವಿನ ಈ ನಿಯಮ ಅನುಸರಿಸಿ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ .

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ(Kitchen) ಆಹಾರದ ಸ್ಥಳವು ಪೂರ್ವ ದಿಕ್ಕಿನಲ್ಲಿರಬೇಕು. ಹಾಗೆಯೇ, ಅಡುಗೆಮನೆಯಲ್ಲಿ ಆಹಾರ ಬೇಯಿಸುವಾಗ, ಗೃಹ ಲಕ್ಷ್ಮಿ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಇರುವಂತೆ ಮಾಡುತ್ತೆ. ಹಾಗಾಗಿ, ತಾಯಿ ಅನ್ನಪೂರ್ಣ ಸಂತೋಷದಿಂದಿರುತ್ತಾಳೆ.

ಅಡುಗೆಮನೆಯಲ್ಲಿ ಕುಡಿಯುವ ನೀರು ಮತ್ತು ಪಾತ್ರೆಗಳನ್ನು ತೊಳೆಯುವ ಬೇಸಿನ್(Basin) ಈಶಾನ್ಯ ದಿಕ್ಕಿನಲ್ಲಿರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿನ ಫ್ರಿಡ್ಜ್ (Fridge) ಪಶ್ಚಿಮ ದಿಕ್ಕಿನಲ್ಲಿರಬೇಕು. ಇದು ವಾಸ್ತು ದೋಷಗಳನ್ನು ತೆಗೆದುಹಾಕುತ್ತೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯ ಮುಖ್ಯ ಬಾಗಿಲು(Door) ಅಡುಗೆ ಮಾಡುವವರ ಹಿಂದೆ ಅಥವಾ ಮುಂದೆ ಇರಬಾರದು. ಇದು ವಾಸ್ತು ದೋಷಗಳಿಗೆ ಕಾರಣವಾಗುತ್ತೆ.

ಗ್ಯಾಸ್ ಸ್ಟೌವ್(Gas stove) ಮತ್ತು ಅಡುಗೆಮನೆಯಲ್ಲಿ ನೀರು ಇಡುವ ಸ್ಥಳದ ನಡುವಿನ ಅಂತರ ಅತ್ಯಗತ್ಯ. ಇದು ಮನೆಯ ವಾಸ್ತುವನ್ನು ಉತ್ತಮವಾಗಿರಿಸುತ್ತೆ. ನಿರ್ಲಕ್ಷಿಸುವುದು ವಾಸ್ತು ದೋಷಗಳಿಗೆ ಕಾರಣವಾಗುತ್ತೆ.

ಅಡುಗೆಮನೆಯಲ್ಲಿ ಎಂಜಿಲು ಪಾತ್ರೆಗಳನ್ನು ಹಾಗೇ ಇಡಬೇಡಿ. ಹೀಗೆ ಮಾಡೋದರಿಂದ ಮನೆಯಲ್ಲಿ ವಾಸ್ತು ದೋಷಗಳು ಉದ್ಭವಿಸುತ್ತವೆ. ತಾಯಿ ಅನ್ನಪೂರ್ಣ ಕೂಡ ಕೋಪಗೊಳ್ಳುತ್ತಾಳೆ. ಇದಕ್ಕಾಗಿ, ಅಡುಗೆ ಮಾಡಿದ ಮತ್ತು ಆಹಾರವನ್ನು ಸೇವಿಸಿದ ನಂತರ ಎಂಜಿಲು ಪಾತ್ರೆಗಳನ್ನು ಸ್ವಚ್ಛಗೊಳಿಸಿ.(Clean)

ಸ್ನಾನ(Bath) ಮಾಡಿದ ನಂತರವೇ ಅಡುಗೆ ಮನೆಗೆ ಪ್ರವೇಶಿಸಿ ಅಡುಗೆ ಮಾಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಅಡುಗೆ ಮಾಡಿದ ನಂತರ, ಮೊದಲನೆಯದಾಗಿ, ಅಗ್ನಿ ದೇವನಿಗೆ ಆಹಾರವನ್ನು ಅರ್ಪಿಸಬೇಕು. ಇದರಿಂದ ತಾಯಿ ಅನ್ನಪೂರ್ಣಳಿಗೆ ಸಂತೋಷವಾಗುತ್ತೆ.

ಸಾಮಾನ್ಯವಾಗಿ ಮಹಿಳೆಯರು ರಾತ್ರಿಯಲ್ಲಿ ಚಪಾತಿ(Chapathi) ಮಾಡಿದ ನಂತರ ಲಟ್ಟಣಿಗೆಯನ್ನು ತೊಳಿಯದೆ ಹಾಗೇ ಇಡುತ್ತಾರೆ. ಇದು ವಾಸ್ತು ದೋಷಗಳಿಗೆ ಕಾರಣವಾಗುತ್ತೆ. ಇದಕ್ಕಾಗಿ, ಪ್ರತಿದಿನ ಚಪಾತಿ, ರೊಟ್ಟಿ ಮಾಡಿದ ನಂತರ, ಲಟ್ಟಣಿಗೆಯನ್ನು ಇತರ ಪಾತ್ರೆಗಳೊಂದಿಗೆ ಸ್ವಚ್ಛಗೊಳಿಸಿ.
 

click me!