ಈ ವಾಸ್ತು ಟಿಪ್ಸ್ ಪಾಲಿಸಿದ್ರೆ, ನಿಮ್ಮ ತಿಜೋರಿ ಹಣದಿಂದ ತುಂಬಲಿದೆ!

First Published | May 11, 2023, 3:27 PM IST

ಜೀವನದಲ್ಲಿ ಪ್ರಗತಿಯನ್ನು ಕಾಪಾಡಿಕೊಳ್ಳಲು ವಾಸ್ತು ನಿಯಮಗಳನ್ನು ಅನುಸರಿಸೋದು ಅವಶ್ಯಕ. ಅದನ್ನು ನಿರ್ಲಕ್ಷಿಸುವ ಮೂಲಕ, ವ್ಯಕ್ತಿಯು ಆರ್ಥಿಕ ನಿರ್ಬಂಧಗಳನ್ನು ಆಹ್ವಾನಿಸುತ್ತಾನೆ. ವಾಸ್ತು ದೋಷದಿಂದಾಗಿ, ವ್ಯಕ್ತಿಯ ಜೀವನದಲ್ಲಿ ವಿಚಿತ್ರ ಪರಿಸ್ಥಿತಿ ಉದ್ಭವಿಸುತ್ತೆ. ಅವನು ಬಯಸಿದರೂ ತೊಂದರೆಗಳಿಂದ ಹೊರಬರಲು ಅವನಿಗೆ ಸಾಧ್ಯವಾಗೋದಿಲ್ಲ. 

ವಾಸ್ತು ಶಾಸ್ತ್ರದಲ್ಲಿ, ಹಣಕಾಸಿನ ನಿರ್ಬಂಧಗಳನ್ನು ನಿವಾರಿಸಲು ಅನೇಕ ಕ್ರಮಗಳನ್ನು ವಿವರಿಸಲಾಗಿದೆ. ಈ ಕ್ರಮಗಳನ್ನು ಅನುಸರಿಸೋದ್ರಿಂದ, ಸಂತೋಷ ಮತ್ತು ಸಮೃದ್ಧಿ ಮನೆಗೆ ಬರುತ್ತೆ. ಅದೇ ಸಮಯದಲ್ಲಿ, ಸಂಪತ್ತು(Wealth) ಹೆಚ್ಚಾಗುತ್ತೆ. ಹೇಗೆಂದು ಇಲ್ಲಿ ತಿಳಿಯೋಣ -

ನೀವು ಆರ್ಥಿಕ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ, ಶುಕ್ರವಾರ ಬೇವಿನ ಮರವನ್ನು(Neem) ಮನೆಗೆ ತನ್ನಿ. ನಂತರ ಬೇವಿನ ಮರವನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ಗಾಜಿನ ಪಾತ್ರೆಯಲ್ಲಿ ಇರಿಸಿ. ಇದರ ನಂತರ, ಗಾಜಿನ ಪಾತ್ರೆಯನ್ನು ಉಪ್ಪು ಮತ್ತು ನೀರಿನಿಂದ ತುಂಬಿಸಿ. ಈ ಪರಿಹಾರವನ್ನು ಮಾಡೋದರಿಂದ, ಆರ್ಥಿಕ ಸಮಸ್ಯೆಯನ್ನು ನಿವಾರಿಸಲಾಗುತ್ತೆ ಎಂಬ ನಂಬಿಕೆಯಿದೆ.

Tap to resize

ಕೆಂಪು ಬಣ್ಣವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯ. ಇದಕ್ಕಾಗಿ, ಶುಕ್ರವಾರ ತಾಯಿ ಲಕ್ಷ್ಮಿಗೆ ಕೆಂಪು ಗುಲಾಬಿಗಳ(Red rose) ಹಾರ ಅರ್ಪಿಸಿ.  ಜೊತೆಗೆ, ತಾಯಿ ಲಕ್ಷ್ಮಿಯನ್ನು ಸರಿಯಾದ ರೀತಿಯಲ್ಲಿ ಪೂಜಿಸಿ. ಮನೆಯ ಮಹಿಳೆಯರು ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಕಮಲದ ಹೂವುಗಳು ಮತ್ತು ಬಿಳಿ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ.
 

ನೀವು ಅಪಾರ ಸಂಪತ್ತನ್ನು ಪಡೆಯಲು ಬಯಸೋದಾದ್ರೆ, ಪ್ರತಿ ಶನಿವಾರ ಅರಳಿ ಮರದ ಬೇರಿಗೆ ನೀರನ್ನು ಅರ್ಪಿಸಿ. ಇದರ ನಂತರ, ಮರವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ. ಈ ಪರಿಹಾರವನ್ನು ಮಾಡೋದರಿಂದ, ಹಣಕ್ಕೆ(Money) ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
 

ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಬಯಸೋದಾದ್ರೆ, ಗುರುವಾರ, ಶುಕ್ರವಾರ ಮತ್ತು ಶನಿವಾರ ಲಕ್ಷ್ಮಿ ದೇವಿಗೆ (Goddess Lakshmi) ಕೆಂಪು ಗುಲಾಬಿಗಳನ್ನು ಅರ್ಪಿಸಿ. ಲಕ್ಷ್ಮೀ ದೇವಿಗೆ ಕೆಂಪು ಗುಲಾಬಿ ಅರ್ಪಿಸೋದ್ರಿಂದ ನೀವು ಅಂದುಕೊಂಡಿರುವ ಎಲ್ಲಾ ಕೆಲಸಗಳು ಶೀಘ್ರದಲ್ಲಿ ಈಡೇರುತ್ತೆ. 

ಪ್ರತಿದಿನ ಸುಗಂಧ ದ್ರವ್ಯವನ್ನು(Perfume) ಹಚ್ಚುವ ಮೂಲಕ ಕೆಲಸದ ಸ್ಥಳಕ್ಕೆ ಹೋಗಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ. ಕೆಲಸದ ಸ್ಥಳದಲ್ಲಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯ ಚಿತ್ರವನ್ನು ಇರಿಸಿ. ಇದರಿಂದ ಎಲ್ಲವೂ ಒಳ್ಳೆಯದಾಗುತ್ತೆ

ಹಣದ ಕೊರತೆಯಿಂದ ತೊಂದರೆಗೀಡಾಗಿದ್ದರೆ ಮತ್ತು ಅದನ್ನು ತೊಡೆದುಹಾಕಲು ಬಯಸಿದರೆ, ಶುಕ್ಲ ಪಕ್ಷದಲ್ಲಿ ಚಂದ್ರನಿಗೆ ಹಾಲನ್ನು(Milk) ಅರ್ಪಿಸಿ. ಈ ಕ್ರಮವನ್ನು ಮಾಡುವ ಮೂಲಕ, ಸಿಕ್ಕಿಹಾಕಿಕೊಂಡ ಹಣವನ್ನು ಹಿಂತಿರುಗಿಪಡೆಯುತ್ತೀರಿ. ಹಣದ ಸಮಸ್ಯೆ ನಿವಾರಣೆಯಾಗುತ್ತೆ. 

Latest Videos

click me!