ಮನೆಯೊಳಗಿನ ನೆಗಟಿವಿಟಿ ದೂರ ಮಾಡಿ, ಪಾಸಿಟಿವ್ ಎನರ್ಜಿ ತುಂಬಿ

Published : Jan 30, 2023, 03:03 PM IST

ವಾಸ್ತು ಶಾಸ್ತ್ರವು ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬರುತ್ತಿರುವ ಭಾರತೀಯ ಸಂಪ್ರದಾಯ. ಇದರ ಸಹಾಯದಿಂದ ನಾವು ದಿಕ್ಕುಗಳ ಜ್ಞಾನವನ್ನು ಪಡೆಯುತ್ತೇವೆ, ಇಂದು ನಾವು ಅಂತಹ ಕೆಲವು ವಿಶೇಷ ವಾಸ್ತು ಸಲಹೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಇವುಗಳನ್ನು ನೀವು ಅನುಸರಿಸಿದರೆ ಮನೆಯಲ್ಲಿ ಯಾವುದೇ ನಕಾರಾತ್ಮಕತೆ ಇರೋದಿಲ್ಲ. 

PREV
16
ಮನೆಯೊಳಗಿನ ನೆಗಟಿವಿಟಿ ದೂರ ಮಾಡಿ, ಪಾಸಿಟಿವ್ ಎನರ್ಜಿ ತುಂಬಿ

ಮನೆ ಎಂಬುದು ಒಂದು ಎಂತಹ ಜಾಗ ಅಂದರೆ ಅಲ್ಲಿ ನಾವು ನಮ್ಮ ಜೀವನದ ಹೆಚ್ಚಿನ ಸಮಯ ಕಳೆಯುತ್ತೇವೆ. ಜೊತೆಗೆ ತಮ್ಮ ಪ್ರೀತಿ ಪಾತ್ರರ ಜೊತೆಗೆ ಮನೆಯಲ್ಲಿ ವಾಸಿಸುತ್ತೇವೆ. ಮನೆ ಅನ್ನೋದು ಮೂಲಭೂತ ಸೌಕರ್ಯಗಳಲ್ಲಿ (infrastructure) ಒಂದಾಗಿದೆ. ಹಾಗಾಗಿ ಈ ಜಾಗ ಯಾವಾಗಲೂ ಪಾಸಿಟಿವ್ ಎನರ್ಜಿಯಿಂದ ತುಂಬಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ನಾವೇನು ಮಾಡಬೇಕು ನೋಡೋಣ… 

26

ವಾಸ್ತು ಶಾಸ್ತ್ರದ (Vastu tips) ಪ್ರಕಾರ, ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡಬಾರದು. ಆದರೆ ನಿಮ್ಮ ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಅಥವಾ ನಿಮ್ಮ ವಾರ್ಡ್ರೋಬ್ನಲ್ಲಿ ಕನ್ನಡಿ ಇದ್ದರೆ, ಮಲಗುವಾಗ ಆ ಕನ್ನಡಿಯನ್ನು ಮುಚ್ಚಿ. ಇದರಿಂದ ನೆಗೆಟಿವಿಟಿ ಹರಡೋದಿಲ್ಲ. 

36

ಮನೆಯೊಳಗೆ ಯಾವುದೇ ಮೂಲೆಯಲ್ಲಿರುವ ನೆಗೆಟಿವಿಟಿಯನ್ನು ದೂರ ಮಾಡಲು ಬಯಸಿದರೆ ನೀವು ಮನೆಯೊಳಗೆ ನಿಯಮಿತ ಪ್ರಮಾಣದಲ್ಲಿ ದೀಪ ಅಥವಾ ಹಣತೆ ಬೆಳಗಿಸಬೇಕು (light the lamp). ಮನೆ ಪೂರ್ತಿಯಾಗಿ ಬೆಳಕು ಆವರಿಸಿದರೆ ಮನೆಯಿಂದ ನೆಗೆಟಿವಿಟಿ ದೂರವಾಗುತ್ತದೆ. 

46

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು (kitchen room) ನಿರ್ಮಿಸಬೇಕು. ಇದಲ್ಲದೆ, ಎರಡನೇ ಆಯ್ಕೆಯಾಗಿ, ಮನೆಯ ವಾಯುವ್ಯ ಮೂಲೆಯಲ್ಲಿ ಅಡುಗೆಮನೆಯನ್ನು ನಿರ್ಮಿಸಬಹುದು. ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಇಡಬೇಕು.

56

ಮನೆಯೊಳಗೆ ಸಂತೋಷ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮರೆತೂ ಕೂಡ ಔಷಧಿಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ (do not keep medicine in kitchen). ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆ ಆರೋಗ್ಯ ಮತ್ತು ಸಂತೋಷ ಎರಡನ್ನೂ ಪ್ರದರ್ಶಿಸುತ್ತದೆ.  ಇಲ್ಲಿ ಔಷಧಿಗಳನ್ನು ಇಡಬಾರದು.

66

ಮರ ಗಿಡಗಳು ಶಕ್ತಿಯ ಪ್ರಮುಖ ಮೂಲ. ವಾಸ್ತುವಿನ ಅನುಸಾರ ಮನೆಯೊಳಗೆ ಗಿಡಗಳನ್ನು ನೆಡುವುದರಿಂದ ಮನೆ ಪೂರ್ತಿಯಾಗಿ ಪಾಸಿಟಿವ್ ಎನರ್ಜಿ ಹರಿಯುತ್ತದೆ. ಇದರಿಂದ ನೆಗೆಟಿವಿಟಿ ದೂರವಾಗುತ್ತದೆ.ಆದರೆ ತಪ್ಪಿಯೂ ಕೂಡ ಮನೆಯೊಳಗೆ ಕ್ಯಾಕ್ಟಸ್ (cactus) ಅಥವಾ ರಬ್ಬರ್ ಗಿಡ ನೆಡಬೇಡಿ. ಇದರಿಂದ ಮನೆಯಲ್ಲಿ ನೆಗೆಟಿವಿಟಿ ಹರಡುತ್ತೆ. 
 

Read more Photos on
click me!

Recommended Stories