ಸುಖ, ಸಂಪತ್ತಿಗೆ ದಾರಿ ಮಾಡಿ ಕೊಡೋ ಹೆಬ್ಗಾಗಿಲ ವಾಸ್ತು ಟಿಪ್ಸ್
First Published | Mar 2, 2020, 3:11 PM ISTಮನೆಯ ಸುಖ, ಸಂತೋಷ, ನೆಮ್ಮದಿ ಸಮೃದ್ಧಿ ಎಲ್ಲಾ ದ್ವಾರ ಬಾಗಿಲ ಮೂಲಕ ಮನೆಯ ಒಳಗೆ ಬರುತ್ತದೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರ್ರದಲ್ಲಿ ಮನೆಯ ಪ್ರವೇಶ ಬಾಗಿಲಿಗೆ ಮಹತ್ವವಿದೆ. ದ್ವಾರ ಬಾಗಿಲು ಕೇವಲ ಕುಟುಂಬದ ಪ್ರವೇಶಕ್ಕೆ ಮಾತ್ರವಲ್ಲ, ಜೊತೆಗೆ ಶಕ್ತಿಯೂ ಮನೆ ಒಳಗೆ ಪ್ರವೇಶಿಸಲು ಇರೋ ಮಾರ್ಗ. ಮನೆ ಮತ್ತು ಮನೆಯವರ ಏಳು ಬೀಳುಗಳು ಮನೆಯ ಹೆಬ್ಬಾಗಿಲು ನಿರ್ಧರಿಸುತ್ತದೆ. ದ್ವಾರಬಾಗಿಲಿನ ಬಣ್ಣ, ದಿಕ್ಕುಗಳಿಗೆ ವಾಸ್ತುಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ ಅವುಗಳನ್ನು ಪಾಲಿಸಿದರೆ ಖಂಡಿತ ನಿಮ್ಮ ಮನೆ ಮನ ಎರಡು ಆನಂದ ಸಾಗರವಾಗುವುದು.