ಮನೆಯೊಳಗೆ ಈ ಗಿಡಗಳಿದ್ದರೆ ಅದೃಷ್ಟ ಒಲಿಯೋದು ಗ್ಯಾರಂಟಿ...

First Published | Feb 27, 2020, 5:11 PM IST

ಒಳಾಂಗಣ ಸಸ್ಯಗಳು ನಮ್ಮ ಮನೆಯ ವಾತವರಣವನ್ನು ಸುಂದರಗೊಳಿಸುವುದರ ಜೊತೆಗೆ ಪಾಸಿಟಿವ್ ಎನರ್ಜಿಯನ್ನೂ ನೀಡುತ್ತದೆ. ಕೆಲವು ಸಸ್ಯಗಳು ಮನೆ ಒಳಗೆ ಹರಡಿರುವ ವಿಷಾನಿಲವನ್ನು ಹೀರಿಕೊಳ್ಳುವುದು ಎಲ್ಲರಿಗೂ ತಿಳಿದಿದೆ. ಹಾಗೆ ವಾಸ್ತುಶಾಸ್ತ್ರದಲ್ಲಿಯೂ ಮನೆಯ ಒಳಗಡೆ ಇಡುವ ಸಸ್ಯಗಳಿಗೆ ತನ್ನದೇ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ ಕೆಲವು ಒಳಾಂಗಣ ಸಸ್ಯಗಳನ್ನು ಇಟ್ಟುಕೊಳ್ಳುವುದರಿಂದ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಗ್ಯಾರಂಟಿ ನಿಮ್ಮದು..

ತುಳಸಿ ಗಿಡ ಮನೆಗೆ ಸಂತೋಷ, ಸಮೃದ್ಧಿಯ ಜೊತೆಗೆ ಪಾಸಿಟಿವ್ ಎನರ್ಜಿಯನ್ನು ತರುವುದು ಖಚಿತ.
ಸ್ನೇಕ್ ಪ್ಲ್ಯಾಂಟ್ ವಾಸ್ತು ಶಾಸ್ತ್ರದ ಪ್ರಕಾರ ಋಣಾತ್ಮಕ ಅಂಶಗಳ ಅಗರ. ಇದು ವಿಷಾನಿಲಗಳನ್ನು ಹೀರಿ ಅದೃಷ್ಟವನ್ನು ತರುತ್ತದೆ.
Tap to resize

ಲ್ಯಾವೆಂಡರ್ ಸಸ್ಯದಿಂದ ಆರೋಗ್ಯ ಹೆಚ್ಚುತ್ತದೆ.
ಮಲ್ಲಿಗೆ ತನ್ನ ಸುವಾಸನೆಯಿಂದ ಉದ್ವೇಗವನ್ನು ಕಡಿಮೆ ಮಾಡಿ, ಶಾಂತಿ ನೀಡುತ್ತದೆ.
ಆರ್ಕಿಡ್ ಸಸ್ಯಗಳು ಮನೆಯ ಒಳಭಾಗದಲ್ಲಿ ಇಡುವುದರಿಂದ ಒತ್ತಡ ನಿವಾರಣೆಗೆ ಸಹಾಯವಾಗುತ್ತದೆ.
ಜೇಡ್ ಸಸ್ಯಗಳು ಮನೆಯಲ್ಲಿ ಸಮೃದ್ಧಿ, ಅದೃಷ್ಟ, ಆರೋಗ್ಯವನ್ನು ತರುತ್ತದೆ.
ಮನೆಯಲ್ಲಿ ಸಮೃದ್ಧಿಯನ್ನು ತರುವ ಪೀಸ್ ಲಿಲ್ಲಿ.
ಮನೆಯ ಗಾಳಿಯನ್ನು ಸ್ವಸ್ಥವಾಗಿಡಲು ಸಹಾಯಕಾರಿ ರಬ್ಬರ್ ಗಿಡ.
ಲಕ್ಕಿ ಬ್ಯಾಂಬೋ ಮನೆಗೆ ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.
ಮನಿ ಪ್ಲ್ಯಾಂಟ್ ಅದೃಷ್ಟ ವೃದ್ಧಿಸುತ್ತದೆ.
ಮನೆಯಲ್ಲಿ ಅಮ್ಲಜನಕವನ್ನು ಹೆಚ್ಚಿಸುವುದರ ಜೊತೆ ಮಾನಸಿಕ ಆರೋಗ್ಯ ವೃದ್ಧಿಸಿ, ಋಣಾತ್ಮಕ ಶಕ್ತಿಯನ್ನು ತೊಲಗಿಸುವ ಪಾಮ್ ಸಸ್ಯಗಳು.
ಹವಾಯ್ ಟೀ ಪ್ಲ್ಯಾಂಟ್‌‌ನಿಂದ ಮನೆಯವರಿಗೆ ಒಳ್ಳೆಯದಾಗುತ್ತದೆ.

Latest Videos

click me!