Vastu Tips: ಕಚೇರಿಯಲ್ಲಿ ಗಣೇಶನನ್ನು ಹೀಗಿಟ್ಟರೆ ಹೆಚ್ಚುವುದು ಸಮೃದ್ಧಿ

First Published | Apr 27, 2022, 11:52 AM IST

ಗಣೇಶನು ಭಕ್ತರನ್ನು ಎಂದಿಗೂ ಅನುಗ್ರಹಿಸುವವನು. ಆತನನ್ನು ಕಚೇರಿಯಲ್ಲಿಡುವುದರಿಂದ ಲಾಭ ಹೆಚ್ಚುತ್ತದೆ. ಆದರೆ, ಈ ಸಂದರ್ಭದಲ್ಲಿ ಕೆಲ ವಾಸ್ತು ನಿಮಯಗಳನ್ನು ಪಾಲಿಸಬೇಕು. 

lord ganesha 001

ಬಿಳಿ ಗಣೇಶನು ಹೆಚ್ಚು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತಾನೆ ಎಂದು ನಂಬಲಾಗಿದೆ. ಬಿಳಿ ಗಣೇಶನ ಚಿತ್ರವನ್ನು ಅಂಟಿಸುವುದು ಸಹ ಒಳಿತನ್ನು ಮಾಡುತ್ತದೆ. ಆದರೆ ಗಣೇಶನ ಹಿಂಭಾಗವು ಕಚೇರಿಯ ಹೊರಭಾಗದತ್ತ ತಿರುಗಿರಬೇಕು ಎಂಬುದನ್ನು ನೆನಪಿಡಿ.

ಬುಧವಾರ : ಈ ದಿನವನ್ನು ಬುದ್ಧಿ, ಕಲಿಕೆ ಮತ್ತು ಕಲೆಗಳ ದೇವರು ಗಣೇಶನಿಗೆ ಸಮರ್ಪಿಸಲಾಗಿದೆ. ಭಕ್ತರ ಜೀವನದಲ್ಲಿ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ನಿವಾರಿಸುವ ವ್ಯಕ್ತಿಯೂ ಇವನು ಎಂದು ಪರಿಗಣಿಸಲಾಗಿದೆ. ಹಿಂದೂಗಳು ಸಾಮಾನ್ಯವಾಗಿ ಗಣೇಶನನ್ನು ಮಂಗಳಕರ ಕೆಲಸ ಆರಂಭಿಸುವ ಮೊದಲು ಪೂಜಿಸುತ್ತಾರೆ.

ಗಣೇಶನ ವಿಗ್ರಹವನ್ನು ಕಚೇರಿಯ ಪೂರ್ವ ಅಥವಾ ಪಶ್ಚಿಮ ದಿಕ್ಕುಗಳಲ್ಲಿ ಇಡಬೇಕು. ನಿಮ್ಮ ಗಣೇಶನ ಮೂರ್ತಿಯನ್ನು ಸ್ಥಾಪಿಸಲು ಕಚೇರಿಯ ಈಶಾನ್ಯ ಮೂಲೆಯು ಅತ್ಯುತ್ತಮ ಸ್ಥಳವಾಗಿದೆ. ಈಶಾನ್ಯವು ಲಭ್ಯವಿಲ್ಲದಿದ್ದರೆ ಪ್ರಾರ್ಥನೆಯನ್ನು ಸಲ್ಲಿಸುವಾಗ ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವ ರೀತಿಯಲ್ಲಿ ವಿಗ್ರಹವನ್ನು ಇರಿಸಿ.
 

Tap to resize

lord ganesha 001

ಗಣೇಶನನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ. ಅಲ್ಲದೆ, ವಿಗ್ರಹವು ಶೌಚಾಲಯದ ಬಳಿ ಅಥವಾ ಸ್ನಾನಗೃಹ ಅಥವಾ ಶೌಚಾಲಯಕ್ಕೆ ಜೋಡಿಸಲಾದ ಗೋಡೆಯ ಮೇಲೆ ಎಲ್ಲಿಯೂ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

Ganesha Jayanti 2022

ಸಣ್ಣ ಬಟ್ಟಲು ಅಕ್ಕಿ, ಗಣೇಶನ ಮುಂದೆ ಇಡುವುದು ಒಂದು ದೊಡ್ಡ ನೈವೇದ್ಯವಾಗಿದೆ. ಎತ್ತರದ ವೇದಿಕೆಯ ಮೇಲೆ ವಿಗ್ರಹವನ್ನು ಇರಿಸಲು ವಾಸ್ತುವಿನಲ್ಲಿ ಸಲಹೆ ನೀಡಲಾಗುತ್ತದೆ.

ನೀವು ಗಣೇಶನ ವಿಗ್ರಹವನ್ನು ಇರಿಸಿದಾಗ, ಇಲಿ ಮತ್ತು ಮೋದಕ ಪ್ರತಿಮೆಯ ಭಾಗವಾಗಿರಬೇಕು ಎಂದು ನೆನಪಿಡಿ. ಇದು ಮಂಗಳಕರವಾಗಿದೆ. ಇಲಿಯು ವಸ್ತು ಬಯಕೆಯನ್ನು ಪ್ರತಿನಿಧಿಸುತ್ತದೆ. ಸಿಹಿತಿಂಡಿಗಳು ಸಂತೋಷವನ್ನು ಪ್ರತಿನಿಧಿಸುತ್ತವೆ. ಕಚೇರಿಯಲ್ಲಿ ಸಂತೋಷ ಮತ್ತು ಲಾಭ ತರಲು ಇಲಿ ಮತ್ತು ಮೋದಕ ಗಣೇಶ ವಿಗ್ರಹದ ಜೊತೆಗಿರಬೇಕು.
 

কুম্ভ- এই রাশির জন্য সূর্য সপ্তম ঘরে থাকবে। সূর্যের রাশি পরিবর্তনের ফলে ব্যবসায়ের উন্নতিই করবে পাশাপাশি আয়ও বাড়িয়ে তুলবে। আপনি একটি নতুন চুক্তিতে স্বাক্ষর করতে পারেন, তবে এই সংমিশ্রণ বিবাহিত জীবনের পক্ষে ভাল হবে না।

ಎಡಮುರಿ ಗಣೇಶನನ್ನು ಕಚೇರಿಗೆ ಆಯ್ಕೆ ಮಾಡಿ. ಅಂದರೆ ಸೊಂಡಿಲು ಎಡ ಭಾಗದಲ್ಲಿರಬೇಕು. ಇದು ಕಚೇರಿಯ ಅಭಿವೃದ್ಧಿಗೆ ಸಹಕಾರಿಯಾಗಿದೆ. 

ganesha 001

ವಿಗ್ರಹದ ವಿಧಗಳು
ಮಾವು, ಅರಳಿ, ಬೇವಿನ ಮರಗಳಿಂದ ಮಾಡಿದ ಗಣೇಶನ ವಿಗ್ರಹವು ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. 
ಹಸುವಿನ ಸಗಣಿಯಿಂದ ಮಾಡಿದ ವಿಗ್ರಹಗಳು ದುಃಖವನ್ನು ಹೋಗಲಾಡಿಸಲು ಮತ್ತು ಉತ್ತಮ ಕಂಪನಗಳನ್ನು ಆಕರ್ಷಿಸಲು ಅತ್ಯಂತ ಅದೃಷ್ಟವೆಂದು ವಾಸ್ತು ತಜ್ಞರು ಪರಿಗಣಿಸುತ್ತಾರೆ. 
ಅಲ್ಲದೆ, ಸ್ಫಟಿಕ ಪ್ರತಿಮೆಗಳು ಎಲ್ಲ ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ ಮತ್ತು ಇದರಿಂದಾಗಿ ಜೀವನವನ್ನು ತಕ್ಷಣವೇ ಬದಲಾಯಿಸುತ್ತದೆ. 
ಗಣಪತಿಯ ಅರಿಶಿನ ವಿಗ್ರಹಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಬೆಳ್ಳಿಯ ಗಣೇಶ ನಿಮ್ಮ ಕಚೇರಿಗೆ ಖ್ಯಾತಿ ತಂದುಕೊಡುತ್ತಾನೆ. 
 

Latest Videos

click me!