ಮಲಗುವ ಕೋಣೆಯಲ್ಲಿ ನಿಮ್ಮ ಮಂಚ ದಕ್ಷಿಣ ಅಥವಾ ದಕ್ಷಿಣ-ಪಶ್ಚಿಮ ಭಾಗಕ್ಕೆ ಮುಖ ಮಾಡಬೇಕು.
ಮಲಗುವ ಕೋಣೆ ನಿಯಮಿತ ಆಕಾರದಲ್ಲಿರಬೇಕು, ಅಬ್ರಪ್ಟ್ ಕಟ್ ಅಥವಾ ಶಾರ್ಪ್ ಮೂಲೆಗಳು ಇರಬಾರದು.
ಕಬ್ಬಿಣದ ಮಂಚ ದಂಪತಿಗಳ ನಡುವೆ ಮನಸ್ಥಾಪ ಉಂಟು ಮಾಡುತ್ತದೆ. ಮಂಚ ಎಂದೂ ಬಾಗಿಲ ಮುಂದೆ ಇರಬಾರದು.
ಬೆಡ್‌ರೂಮ್ ಬಣ್ಣ ಲೈಟ್ ಕಲರ್ ಆಗಿರಬೇಕು. ಕೆಂಪು ಅಥವಾ ಯಾವುದೇ ಡಾರ್ಕ್ ಬಣ್ಣ ಬಳಸಿದರೆ ಸಂಬಂಧ ಅಲ್ಪಾವಧಿಯಲ್ಲಿ ಮುರಿದು ಬೀಳುತ್ತದೆ.
ಸಂಬಂಧ ಗಟ್ಟಿಯಾಗಿರಬೇಕೆಂದು ಪತ್ನಿ ಸದಾ ಪತಿಯ ಎಡಬದಿಗೆ ಮಲಗಬೇಕು.
ಕೋಣೆಯಲ್ಲಿ ಕನ್ನಡಿ ಹಾಸಿಗೆ ನೋಡಬಾರದು. ಹೀಗಿದ್ದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
ಈಶಾನ್ಯ ಮೂಲೆಯಲ್ಲಿ ಯಾವುದೇ ರೀತಿಯ ಭಾರದ ವಸ್ತುಗಳನ್ನು ಇಡಬಾರದು.
ಬೆಡ್‌ರೂಮ್‌ನನ್ನು ಸದಾ ಸ್ವಚವಾಗಿಟಿಕೊಳ್ಳಬೇಕು, ಪಾಸಿಟಿವಿಟ್ ಹೆಚ್ಚಾಗುತ್ತದೆ.
ಕೋಣೆಯಲ್ಲಿ ಯಾವುದೇ ಒಂಟಿ ವಸ್ತುಗಳನ್ನು ಇಡಬಾರದು. ಉದಾ: ಒಂಟಿ ಮೊಲ, ಒಂಟಿ ನಾಯಿ ಪೋಟೋ ಅಥವಾ ಕೃಷ್ಣ ಒಬ್ಬನೇ. ಅದರ ಬದಲು ಕೃಷ್ಣ-ರಕ್ಮಿಣಿ,ಲವ್ ಬರ್ಡ್ಸ್ ಮತ್ತು ಲಕ್ಷ್ಮಿ ನಾರಾಯಣ ಫೋಟೋ ಇಡಬಹುದು.
ನಮ್ಮನ್ನು ಅಗಲಿದ ವ್ಯಕ್ತಿಗಳ ಫೋಟೋ ಮಲಗುವ ಕೋಣೆಯಲ್ಲಿ ಇಡಬಾರದು.