ವೃತ್ತಿ ಜೀವನದ ಸಮಸ್ಯೆಗಳನ್ನು ನಿವಾರಿಸಲು ಫೆಂಗ್ ಶುಯಿಯ ಈ ನಿಯಮ ಪಾಲಿಸಿ

Published : Feb 03, 2023, 03:27 PM IST

ಫೆಂಗ್ ಶುಯಿ ಜೀವನದ ವಿವಿಧ ಅಂಶಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ಸ್ಥಳವನ್ನು ಉಲ್ಲೇಖಿಸುತ್ತೆ. ಆದರೆ ಅನೇಕ ಬಾರಿ ಕೆಲವು ವಸ್ತುಗಳನ್ನು ತಪ್ಪು ಸ್ಥಳದಲ್ಲಿ ಇಡೋದು ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತೆ. ಅಂತಹ ಕೆಲವು ವಿಷಯಗಳ ಬಗ್ಗೆ ಇಲ್ಲಿ ತಿಳಿಯಿರಿ. 

PREV
16
ವೃತ್ತಿ ಜೀವನದ ಸಮಸ್ಯೆಗಳನ್ನು ನಿವಾರಿಸಲು ಫೆಂಗ್ ಶುಯಿಯ ಈ ನಿಯಮ ಪಾಲಿಸಿ

ಫೆಂಗ್ ಶುಯಿ(Feng Shui) ನಮ್ಮ ಸುತ್ತಲ ಪರಿಸರದ ನಡುವೆ ಸಮತೋಲನವನ್ನು ಸ್ಥಾಪಿಸಲು ಸಹಾಯ ಮಾಡುತ್ತೆ. ಆದರೆ ಅನೇಕ ಬಾರಿ ಕೆಲವು ವಸ್ತುಗಳನ್ನು ತಪ್ಪು ಸ್ಥಳದಲ್ಲಿ ಇಡೋದು ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತೆ. ಈ ಕಾರಣದಿಂದಾಗಿ ವ್ಯಕ್ತಿ ತನ್ನ ವೃತ್ತಿಪರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ವೃತ್ತಿಜೀವನದಲ್ಲಿ ಯಶಸ್ವಿಯಾಗೋದು ಪ್ರತಿಯೊಬ್ಬ ವ್ಯಕ್ತಿಯ ಬಯಕೆಯಾಗಿದ್ದು, ಅದಕ್ಕಾಗಿ ಅವನು ಹಗಲು ರಾತ್ರಿ ಶ್ರಮಿಸುತ್ತಾನೆ. ವೃತ್ತಿಜೀವನದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದಾದ ಆ ವಿಷಯಗಳ ಬಗ್ಗೆ ಇಲ್ಲಿ ತಿಳಿಯಿರಿ.  

26

1. ವರ್ಕ್ ಟೇಬಲ್ (Work table) ಅನ್ನು ಕೋಣೆಯೊಳಗಿನ ಬಾಗಿಲಿನ ಮುಂದೆ ಎಂದಿಗೂ ಇಡಬಾರದು. ಇದು ಕೆಲಸ ಮಾಡುವ ವ್ಯಕ್ತಿಯನ್ನು ಗೊಂದಲಗೊಳಿಸಬಹುದು ಮತ್ತು ಪ್ರಚೋದಿಸಬಹುದು.
2. ವರ್ಕ್ ಟೇಬಲ್ ಅನ್ನು ಕೋಣೆಯಲ್ಲಿ, ಅದರಲ್ಲಿ ಕುಳಿತು ಕೆಲಸ ಮಾಡೋ ವ್ಯಕ್ತಿಯ ಹಿಂಭಾಗ ಗೋಡೆಯ ಕಡೆಗೆ ಇರುವಂತೆ ಇರಿಸಿ. 

36

3. ಟೇಬಲ್ ಅನ್ನು ಎಂದಿಗೂ ಕೋಣೆಯ ಮಧ್ಯದಲ್ಲಿ (Middle)ಇಡಬಾರದು. ಇದು ದುಡಿಯುವ ವ್ಯಕ್ತಿಯು ತನ್ನ ಶಕ್ತಿ ಮತ್ತು ಅಧಿಕಾರ ಕಳೆದುಕೊಳ್ಳಲು ಕಾರಣವಾಗುತ್ತೆ.
4. ಕೆಲಸದ ಸಮಯದಲ್ಲಿ ಬರುವ ಸಮಸ್ಯೆಗಳನ್ನು ದೂರವಿರಿಸಲು ನಿಮ್ಮ ಕೆಲಸದ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಿ.
 

46

5. ನಿಮ್ಮ ಸೃಜನಶೀಲತೆ ಹೆಚ್ಚಿಸಲು, ಕಂಪ್ಯೂಟರ್ (Computer) ಅನ್ನು ಮೇಜಿನ ಪಶ್ಚಿಮ ಮೂಲೆಯಲ್ಲಿ ಇರಿಸಿ. 
6. ವ್ಯಾಪಾರದ ಬೆಳವಣಿಗೆ ಮತ್ತು ಗರಿಷ್ಠ ಲಾಭ ಗಳಿಸಲು, ಪ್ರಿಂಟರ್, ಟೆಲಿಫೋನ್ ಮತ್ತು ಫ್ಯಾಕ್ಸ್ ಯಂತ್ರಗಳನ್ನು ಡೆಸ್ಕ್‌ನ ಆಗ್ನೇಯ ದಿಕ್ಕಿನಲ್ಲಿ ಇರಿಸಿ.
 

56

7. ಕೆಲಸ ಮಾಡಲು ನಿಮ್ಮ ಎನೆರ್ಜಿಯನ್ನು ಒಂದು ಮಟ್ಟದಲ್ಲಿಡಲು, ಅಂದರೆ, ಕೆಲಸ ಮಾಡಲು ನೀವು ಆಸಕ್ತಿ ಹೊಂದಿರಬೇಕು, ಇದಕ್ಕಾಗಿ, ಮೇಜಿನ ಮೇಲೆ ಕೆಂಪು ಬಣ್ಣದ ಮಡಕೆಯಲ್ಲಿ ಸಣ್ಣ ಮರವನ್ನು ಇಡಬೇಕು.
8. ಸಂಬಳ ಹೆಚ್ಚಿಸಲು ಮತ್ತು ಹೆಚ್ಚಿನ ಲಾಭ ಗಳಿಸಲು, ಮನಿ ಪ್ಲ್ಯಾಂಟ್ ಅಥವಾ ಬೊಂಬು ಟ್ರೀ ಮೇಜಿನ ಮೇಲೆ ಇಡಬೇಕು. ತಪ್ಪಿಯೂ ಕೂಡ ಕಳ್ಳಿ(Cactus) ಅಥವಾ ಅಲೋವೆರಾದಂತಹ ಚೂಪಾದ ಸಸ್ಯಗಳನ್ನು ಮೇಜಿನ ಮೇಲೆ ನೆಡಬಾರದು.

66

9. ಕೆಲಸದಲ್ಲಿ ತೊಂದರೆ ಅಥವಾ ಆಸಕ್ತಿ ಇಲ್ಲದ ಭಾವನೆಯನ್ನು ತಪ್ಪಿಸಲು ಕಂಪ್ಯೂಟರ್ ಕೇಬಲ್  ಮತ್ತು ಇತರ ಎಲ್ಲಾ ರೀತಿಯ ಕೇಬಲ್ ಗಳನ್ನು ಮರೆಮಾಡಬೇಕು.
10. ಮೇಜನ್ನು ಕಿಟಕಿಯ(Window) ಬಳಿ ಇಡುವ ಮೊದಲು, ಅಲ್ಲಿಂದ ಯಾರೂ ಇಣುಕಿ ನೋಡದಂತೆ ನೋಡಿಕೊಳ್ಳಿ. ಯಾರಾದರೂ ಇದನ್ನು ಮಾಡಿದರೂ, ಅವರಿಗೆ ಯಾವುದೂ ಸ್ಪಷ್ಟವಾಗಿ ಕಾಣಿಸದಂತೆ ಎಚ್ಚರವಹಿಸಿ.  
 

click me!

Recommended Stories