ರಾಶಿಯ ಅನುಸಾರ ಈ ವಸ್ತುಗಳನ್ನು ಮನೆಯಲ್ಲಿಡಿ: ಸಂಪತ್ತು ವೃದ್ಧಿ ಖಚಿತ

First Published | Jan 31, 2021, 4:39 PM IST

ದಿನಪೂರ್ತಿ ಶ್ರಮಪಟ್ಟು ಕೆಲ ಮಾಡುತ್ತೀರಿ, ಆದರೆ ಅದರಿಂದ ಹೆಚ್ಚಿನ ಧನಲಾಭ ಆಗುವುದಿಲ್ಲ. ಈ ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ. ಆದರೆ ಈ ಬಗ್ಗೆ ಟೆನ್ಶನ್ ಮಾಡಬೇಡಿ, ಬದಲಾಗಿ ಈ ಟಿಪ್ಸ್ ಗಳನ್ನು ಅನುಸರಿಸಿ. ಇದರಿಂದ  ಧನ ವೃದ್ಧಿಯಾಗುತ್ತದೆ. ಫೆಂಗ್ ಶುಯಿ ಅನುಸಾರ ತಮ್ಮ ತಮ್ಮ ರಾಶಿಯ ಅನುಸಾರ ಈ ಟಿಪ್ಸ್ ಗಳನ್ನು ಅನುಸರಿಸಿದರೆ ಧನಲಾಭ ಖಂಡಿತಾ. 

ಮೇಷ ರಾಶಿ : ಮನೆ ಅಥವಾ ಆಫೀಸ್ ನಲ್ಲಿ ಗೋಲ್ಡನ್ ಬಣ್ಣದ ಕ್ರಿಸ್ಟಲ್ ಆಮೆ ಇಡಿ. ಇದರ ಜೊತೆಗೆ ಗೋಲ್ಡನ್ ಬಣ್ಣದ ಮೀನು ಸಹ ಇಡಬಹುದು.
ವೃಷಭ ರಾಶಿ : ಈ ರಾಶಿಯವರು ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುತ್ತಾಳೆ ಎನ್ನಲಾಗುತ್ತದೆ.
Tap to resize

ಮಿಥುನ ರಾಶಿ : ಮನೆ ಮತ್ತು ಕೆಲಸದಲ್ಲಿ ಧನಲಾಭವಾಗಬೇಕಾದರೆ ಈ ರಾಶಿಯವರು ಡ್ರಾಯಿಂಗ್ ರೂಮಿನಲ್ಲಿ ಅಕ್ವೇರಿಯಂ ಇಡಬೇಕು.
ಕರ್ಕಾಟಕ ರಾಶಿ : ಈ ರಾಶಿಯವರು ದೇವರ ಕೋಣೆ ಯಲ್ಲಿ ಕ್ರಿಸ್ಟಲ್ ಅಥವಾ ಮಣ್ಣಿನ ಆಮೆಯನ್ನು ಇಡಿ.
ಸಿಂಹ ರಾಶಿ : ಇವರು ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಉತ್ತಮ. ಈ ದಿಕ್ಕಿನಲ್ಲಿ ಇಟ್ಟರೆ ಉದ್ಯೋಗದಲ್ಲಿರುವ ಜನರಿಗೆ ಬೇಗನೆ ಭಡ್ತಿ ಆಗುತ್ತದೆ.
ಕನ್ಯಾ ರಾಶಿ : ಮಣ್ಣಿನ ಆಮೆ ಇಡುವುದು ಅಥವಾ ಆರು ಮೀನುಗಳುಳ್ಳ ಅಕ್ವೇರಿಯಂ ಮನೆಯ ಮುಖ್ಯ ದ್ವಾರದ ಬಳಿ ಇಡುವುದು ಉತ್ತಮ.
ತುಲಾ ರಾಶಿ : ಆಫೀಸ್ ನಲ್ಲಿ ಕ್ರಿಸ್ಟಲ್ ನ ಆಮೆ ಇಟ್ಟರೆ ಉತ್ತಮ. ಇದರಿಂದ ಲಾಭವಾಗುತ್ತದೆ.
ವೃಶ್ಚಿಕ ರಾಶಿ : ಈ ರಾಶಿಯವರು ದೇವರ ಕೋಣೆಯಲ್ಲಿ ಅಥವಾ ಬೆಡ್ ರೂಮ್ ನ ಎದುರು ಕ್ರಿಸ್ಟಲ್ ನ ಆಮೆ ಅಥವಾ ಮೀನು ಇಡಿ. ಇದನ್ನು ಇಡೋದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
ಧನುರಾಶಿ : ಮನೆಯಲ್ಲಿ ಅಕ್ವೇರಿಯಂಇಡಬೇಕು. ಅಕ್ವೇರಿಯಂ ಇಡೋದರಿಂದ ಅರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಧನ ಲಾಭವಾಗುತ್ತದೆ.
ಮಕರ ರಾಶಿ : ಮನೆಯ ಮುಖ್ಯದ್ವಾರದ ಬಳಿ ಅಥವಾ ದೇವರ ಕೋಣೆ ಬಳಿ ನೀಲಿ ಅಥವಾ ಕಪ್ಪು ಬಣ್ಣದ ಆಮೆ ಇರಿಸಿ. ಇದರಿಂದ ಧನ ಲಾಭವಾಗುತ್ತದೆ ಜೊತೆಗೆ ನೆಗೆಟಿವ್ ಎನರ್ಜಿ ದೂರವಾಗುತ್ತದೆ.
ಕುಂಭ ರಾಶಿ : ತಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಇಡಿ. ಮನೆಯ ಉತ್ತರ ದಿಕ್ಕು ಕರಿಯರ್ ಮತ್ತು ಪೂರ್ವ ದಿಕ್ಕು ಸಂತೋಷದ ಸಂಕೇತವಾಗಿದೆ. ಅಕ್ವೇರಿಯಂ ಇಡೋದರಿಂದ ಮನೆ ಮತ್ತು ಬಿಜಿನೆಸ್ ಎರಡರಲ್ಲೂ ಲಾಭ ಉಂಟಾಗುತ್ತದೆ.
ಮೀನಾ : ಫೆಂಗ್ ಶುಯಿ ಅನುಸಾರ ಈ ರಾಶಿಯ ಜನರು ದೇವರ ಕೋಣೆಯಲ್ಲಿ ನೀಲಿ ಅಥವಾ ಬಿಳಿ ಬಣ್ಣದ ಆಮೆಯನ್ನು ಇರಿಸಿ. ಪ್ರತಿದಿನ ಇದರ ದರ್ಶನ ಮಾಡಿದರೆ ಧನಲಾಭವಾಗುತ್ತದೆ

Latest Videos

click me!