ಸಂಪತ್ತು ವೃದ್ಧಿಗಾಗಿ ಈ ವಾಸ್ತು ಸಲಹೆಗಳನ್ನು ಮರೆಯದೆ ಪಾಲಿಸಿ

First Published | Jan 22, 2021, 5:34 PM IST

ವಾಸ್ತು ಪ್ರತಿಯೊಬ್ಬರ ಜೀವನದಲ್ಲೂ ಒಂದು ಪ್ರಮುಖ ಭಾಗ. ಮನೆಯಲ್ಲಿ ಕಂಡು ಬರುವ ಹಲವು ಸಮಸ್ಯೆಗಳಿಗೆ ವಾಸ್ತು ಪರಿಹಾರ ನೀಡುತ್ತದೆ. ಅಂತಹ ವಾಸ್ತು ಶಾಸ್ತ್ರದಲ್ಲಿ ಹಣ ಸಂಪಾದನೆ ಬಗ್ಗೆಯೂ ಕೆಲವೊಂದಿಷ್ಟು ಟಿಪ್ಸ್ ಇವೆ. ಅವುಗಳನ್ನು ಪಾಲಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿ ಖಂಡಿತಾ. 

ವಸ್ತುಗಳನ್ನು ಮತ್ತು ಆಭರಣಗಳನ್ನು ನಗದು ಲಾಕರ್ ಅಥವಾ ಕಪಾಟಿನಲ್ಲಿಇಡುತ್ತೇವೆ. ವಾಸ್ತು ಪ್ರಕಾರ ಈ ಲಾಕರ್ ಅನ್ನು ನೈಋತ್ಯಕ್ಕೆ ಅಥವಾ ದಕ್ಷಿಣ ಗೋಡೆಗೆ ಹತ್ತಿರವಾಗಿ ಕೋಣೆಯ ಉತ್ತರ ದಿಕ್ಕಿಗೆ ತೆರೆದುಕೊಳ್ಳುವುದು ಮುಖ್ಯ. ಏಕೆಂದರೆ ಕುಬೇರನು ಉತ್ತರ ದಿಕ್ಕಿನಲ್ಲಿ ನೆಲೆಸಿದ್ದು, ಉತ್ತರದಲ್ಲಿ ಲಾಕರ್ ತೆರೆದರೆ ಮತ್ತೆ ಮತ್ತೆ ಅದನ್ನು ತುಂಬಿಸುತ್ತಾನೆ.
undefined
ಉತ್ತರ ದಿಕ್ಕನ್ನು ಧನಾತ್ಮಕವಾಗಿ ಮತ್ತು ಶಕ್ತಿವಂತವಾಗಿರಿಸಿಕೊಳ್ಳಿ ಏಕೆಂದರೆ ಇದು ಸಂಪತ್ತಿನ ದೇವರ ಕೇಂದ್ರವಾಗಿದೆ ಮತ್ತು ಸಂಪತ್ತನ್ನು ಓಡಿಸುವ ಶಕ್ತಿಯಿಂದ ಕಾಪಾಡಲು ಇದು ಸಹಾಯ ಮಾಡುತ್ತದೆ.
undefined

Latest Videos


ಈಶಾನ್ಯ ದಿಕ್ಕಿನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಡಿ. ಪ್ರವೇಶ ದ್ವಾರ ಅಥವಾ ಮನೆಯ ಮುಂಬಾಗಿಲು ಯಾವುದೇ ತಂತಿ, ಕಂಬ, ಗುಂಡಿ ಅಥವಾ ಇತರ ವಸ್ತುಗಳಿಂದ ಬ್ಲಾಕ್ ಆಗದಂತೆ ನೋಡಿಕೊಳ್ಳಿ.
undefined
ಉತ್ತರ ವಲಯದಲ್ಲಿ ಮುತ್ತು ಮತ್ತು ಹಸಿರು ಬಣ್ಣಗಳನ್ನು ಬಳಸಿ.
undefined
ನೇರಳೆಯು ಸಂಪತ್ತನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಮನೆಯ ಆಗ್ನೇಯ ಮೂಲೆಯಲ್ಲಿ ನೇರಳೆ ಬಣ್ಣದ ಕುಂಡಗಳಲ್ಲಿ ನೇರಳೆ ಗಿಡಗಳನ್ನು ಅಥವಾ ಮನಿ ಪ್ಲಾಂಟ್ ಗಳನ್ನು ಇರಿಸುವುದು ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ಸಂಪತ್ತನ್ನು ಆಕರ್ಷಿಸುವಲ್ಲಿ ಮಹತ್ತರವಾದ ಅದೃಷ್ಟವನ್ನು ತರುತ್ತದೆ.
undefined
ಯಾವಾಗಲೂ ಉತ್ತರಕ್ಕೆ ಮುಖ ಮಾಡಿ ಕುಳಿತು. ದಕ್ಷಿಣ ಮತ್ತು ಪಶ್ಚಿಮದ ಗೋಡೆಯ ಉದ್ದಕ್ಕೂ ಆಸನದ ವ್ಯವಸ್ಥೆ ಮಾಡಿ.
undefined
ಕ್ಯಾಶ್ ಲಾಕರ್ ನ ಮುಂದೆ ಕನ್ನಡಿಯನ್ನು ಇರಿಸಿ, ಇದರಿಂದ ಕನ್ನಡಿಯು ಕ್ಯಾಶ್ ಲಾಕರ್ ನ ಚಿತ್ರವನ್ನು ಪ್ರತಿಬಿಂಬಿಸುತ್ತದೆ. ಇದು ಸಂಪತ್ತು ದ್ವಿಗುಣಗೊಳಿಸುತ್ತದೆ .
undefined
ಜೀವನದಿಂದ ಹಣವು ಮಾಯವಾದರೆ, ಮನೆಯ ದಕ್ಷಿಣ ಮೂಲೆಯಲ್ಲಿ ಘನವಾದ, ಭಾರವಾದ ಲೋಹದ ವಸ್ತುವನ್ನು ಇರಿಸಿ.
undefined
click me!