ಮನೆಯಲ್ಲಿ ಜಗಳ ಹೆಚ್ಚಾಗಿದ್ಯಾ? ದೇವರ ಕೋಣೆಯಿಂದ ಈ ವಸ್ತು ತೆಗೀರಿ!

Published : Apr 16, 2024, 04:59 PM IST

ಮನೆಯಲ್ಲಿ ದೇವರ ಕೋಣೆಗೆ ವಿಶೇಷ ಮಹತ್ವವಿದೆ. ಅದನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತೆ. ಆದರೆ ಅಲ್ಲಿ ನಾವಿಡುವ ಒಂದೊಂದು ವಸ್ತು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ? 

PREV
17
ಮನೆಯಲ್ಲಿ ಜಗಳ ಹೆಚ್ಚಾಗಿದ್ಯಾ? ದೇವರ ಕೋಣೆಯಿಂದ ಈ ವಸ್ತು ತೆಗೀರಿ!

ಮನೆಯಲ್ಲಿರುವ ಪ್ರತಿಕೋಣೆಗಳಂತೆ ಪೂಜಾ ಕೋಣೆ (puja room) ಅಥವಾ ದೇವರ ಕೋಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಕೋಣೆ  ಅಧ್ಯಾತ್ಮ  ಮತ್ತು ದೈವೀಕತೆಯ ಪ್ರತೀಕ. ಈ ಕೋಣೆಯಲ್ಲಿನ ಪಾವಿತ್ರ್ಯತೆಯಿಂದಾಗಿ ಮನೆಗೆ ಒಳ್ಳೆಯದಾಗುತ್ತೆ, ಆದರೆ ಈ ಕೋಣೆಯಲ್ಲಿ ನಾವು ಮಾಡುವ ಕೆಲವು ತಪ್ಪುಗಳು ನಿಮ್ಮ ಜೀವನಕ್ಕೆ ಮುಳುವಾಗುವ ಸಾಧ್ಯತೆ ಇದೆ. ಹಾಗಾಗಿ ದೇವರ ಕೋಣೆಯಲ್ಲಿ ಯಾವುದನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ. 
 

27

ದೇವರಕೋಣೆಯಲ್ಲಿ ದೇವರ ಫೋಟೋಗಳ ಜೊತೆ ಸಾವನ್ನಪ್ಪಿದ ಹಿರಿಯರ ಫೋಟೋಗಳನ್ನು (ancestor photo) ಯಾವತ್ತೂ ಇಡಲೇಬಾರದು. ಇದರಿಂದ ಮನೆಯಲ್ಲಿ ಕ್ಲೇಶ ಅಥವಾ ಜಗಳ ಉಂಟಾಗುತ್ತದೆ ಮತ್ತು ದೇವರಿಗೂ ಕೋಪ ಬರುತ್ತದೆ ಎನ್ನಲಾಗುತ್ತದೆ. 
 

37

ದೇವರ ಕೋಣೆಯಲ್ಲಿ ಹಳೆಯ ಅಥವಾ ತುಂಡಾದ ದೇವರ ಫೋಟೋ (God photo)ಮತ್ತು ವಿಗ್ರಹ ಇಡಲೇಬೇಡಿ. ಮಂದಿರದಲ್ಲಿ ಹರಿದ, ಹಾಳಾದ ಧಾರ್ಮಿಕ ಪುಸ್ತಕಗಳನ್ನು ಸಹ ಇಡಬಾರದು, ಇದರಿಂದ ಮನೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. 

47

ದೇವರ ಮಂದಿರದಲ್ಲಿ ಒಂದೇ ಶಂಖ (conch) ಇಡಬೇಕು, ಎರಡು ಅಥವಾ ಅದಕ್ಕಿಂತ ಹೆಚ್ಚು ಶಂಖ ಇಡೋದು ಉತ್ತಮವಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ ಎನ್ನಲಾಗುತ್ತದೆ. ಅಲ್ಲದೇ ಮನೆಯಲ್ಲಿ ಜಗಳ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. 
 

57

ದೇವರಕೋಣೆಯಲ್ಲಿ ಯಾವತ್ತೂ ಒಣಗಿದ ಹೂವುಗಳನ್ನು (dry flower) ಇಡಲೇಬಾರದು. ಇದರಿಂದ ಮನೆಯವರಿಗೆ ಕೆಟ್ಟದಾಗುತ್ತದೆ. ಪ್ರತಿದಿನ ಒಣಗಿದ ಹೂವುಗಳನ್ನು ತೆಗೆದು ಹಾಕಿ, ಫ್ರೆಶ್ ಹೂವುಗಳನ್ನು ಮಾತ್ರ ದೇವರ ಮಂದಿರದಲ್ಲಿಡಿ. 

67

ತುಂಡಾದ ಮೂರ್ತಿಯನ್ನು ಸಹ ದೇವರ ಮಂದಿರಲ್ಲಿ ಇಡೋದು ಸಹ ತಪ್ಪು. ಇದರಿಂದ ಮನೆಯಲ್ಲಿ ನೆಗೆಟಿವಿಟಿ ಮೂಡುತ್ತದೆ. ಹಾಗಾಗಿ ತುಂಡಾದ ಮೂರ್ತಿ ಇದ್ದರೆ ಅದನ್ನು ಕೂಡಲೇ ಅಲ್ಲಿಂದ ತೆಗೆದು ಹಾಕಿ. ಪೂಜೆಯ ಸಾಮಾಗ್ರಿಗಳನ್ನು ಸಹ ಅಲ್ಲಿ ಇಡಬಾರದು. 

77

ದೇವರ ಕೋಣೆ ಯಾವಾಗಲೂ ಕ್ಲೀನ್ ಆಗಿರಬೇಕು. ಯಾವತ್ತೂ ಅದನ್ನು ಕೆಟ್ಟದಾಗಿ ಇಡಲೇಬೇಡಿ. ದೇವರ ಕೋಣೆ ಕ್ಲೀನ್ ಆಗಿರದೇ ಇದ್ದರೆ ಮನೆಯಲ್ಲಿ ನೆಮ್ಮದಿ, ಶಾಂತಿ ಇರೋದಿಲ್ಲ ಎಂದು ನಂಬಲಾಗಿದೆ. 

click me!

Recommended Stories