ಮನೆಯ ಬಾಗಿಲಿನಲ್ಲಿ ಅಥವಾ ಮುಖ್ಯದ್ವಾರದಲ್ಲಿ ಜನರು ಬೇರೆ ಬೇರೆ ರೀತಿಯ ಫೋಟೋಗಳನ್ನು ಹಾಕುತ್ತಾರೆ. ವಾಸ್ತುವಿನ ಪ್ರಕಾರ ಜೀವನದಲ್ಲಿ ಸುಖ ಸಂಪತ್ತುಗಳನ್ನು ತರುವಂತಹ ಫೋಟೋಗಳನ್ನು ಹಾಕುವುದು ಸರಿ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಆವರಿಸುತ್ತದೆ. ಕೆಲವರು ಮನೆಯ ಬಾಗಿಲಿನಲ್ಲಿ ಲಕ್ಷ್ಮೀ ದೇವಿಯ (goddess Lakshmi) ಫೋಟೋ ಹಾಕುತ್ತಾರೆ. ಹೀಗೆ ಮಾಡೋದು ಸರೀನಾ? ತಪ್ಪಾ? ಅನ್ನೋದನ್ನು ತಿಳಿಯೋಣ.
ಮನೆಯ ಬಾಗಿಲಿನಲ್ಲಿ ಲಕ್ಷ್ಮೀ ದೇವಿಯ ಫೋಟೋ: ಮನೆಯ ಬಾಗಿಲಿನಲ್ಲಿ (main entrance)ಲಕ್ಷ್ಮೀ ದೇವಿಯ ಫೋಟೋ ಹಾಕುವುದು ಶುಭ ಎಂದು ಹೇಳಲಾಗುತ್ತದೆ. ಹೀಗೆ ಮಾಡೊದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಸಕಾರಾತ್ಮಕ ಶಕ್ತಿ: ಮನೆಯ ಮುಖ್ಯ ದ್ವಾರದಲ್ಲಿ ಲಕ್ಷ್ಮೀ ದೇವಿಯ ಫೋಟೋ ಇಡೋದರಿಂದ ಮನೆಯ ಒಳಗೆ ಯಾವುದೇ ನೆಗೆಟೀವ್ ಎನರ್ಜಿ ಪ್ರವೇಶಿಸೋದಿಲ್ಲ. ಜೊತೆಗೆ ಮನೆಯಲ್ಲಿ ಪಾಸಿಟಿವಿಟಿ (positive energy) ಸದಾ ಇರುತ್ತದೆ ಎನ್ನಲಾಗುತ್ತದೆ.
ಯಾವ ರೀತಿಯ ಫೋಟೋ ಇಡಬೇಕು?: ಮನೆಯಲ್ಲಿ ತಾಯಿ ಲಕ್ಷ್ಮೀ ದೇವಿಯ ಸರಿಯಾದ ಫೋಟೋ ಇಡೋದು ಉತ್ತಮ. ಇದಕ್ಕಾಗಿ ನೀವು ನಗುತ್ತಲಿರುವ, ಕಮಲದ ಮೇಲೆ ವಿರಾಜಮಾನಳಾಗಿರುವ ಲಕ್ಷ್ಮೀ ದೇವಿಯ ಫೋಟೋ ಇಡೋದು ಉತ್ತಮ.
ಇಂತಹ ಫೋಟೋವನ್ನು ಇಡಲೇಬೇಡಿ: ಮನೆಯ ಬಾಗಿಲಿನಲ್ಲೇ ಇರಬಹುದು ಅಥವಾ ದೇವರ ಕೋಣೆಯಲ್ಲಿಯೇ ಇರಬಹುದು ಯಾವತ್ತೂ ನಿಂತುಕೊಂಡಿರುವ ಲಕ್ಷ್ಮೀ ದೇವಿಯ ಫೋಟೋ, ವಿಗ್ರಹ ಇಡಲೇಬೇಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕತೆ (negativity) ಹರಡುತ್ತದೆ, ಅಂದರೆ ಮನೆಯಲ್ಲಿ ಕೆಟ್ಟದಾಗುತ್ತದೆ ಎಂದರ್ಥ.
ಸುಖ ಸಮೃದ್ಧಿ ನಿಮ್ಮದಾಗುತ್ತದೆ: ಮನೆಯಲ್ಲಿ ತಾಯಿ ಲಕ್ಷ್ಮೀಯ ಫೋಟೋ ಇಡೋದರಿಂದ ಮನೆಯಲ್ಲಿ ಸುಖ ಸಮೃದ್ಧಿ ಎಂದಿಗೂ ನೆಲೆಯಾಗಿರುತ್ತೆ. ಇದನ್ನು ನೀವು ಮನೆಯ ದೇವರಕೋಣೆಯಲ್ಲೂ ಸಹ ಇಡಬಹುದು. ಆದರೆ ತಪ್ಪಾದ ದಿಕ್ಕಿನಲ್ಲಿ ಮಾತ್ರ ಇಡಬೇಡಿ.
ಚರಣ ಪಾದುಕೆ ಎಲ್ಲಿಡೋದು?: ಮನೆಯ ಮುಖ್ಯದ್ವಾರದಲ್ಲಿ ಲಕ್ಷ್ಮೀ ದೇವಿಯ ಚರಣ ಪಾದುಕೆಯನ್ನು ಇಡೋದು ಉತ್ತಮ. ಇದರಿಂದ ಮನೆಯಲ್ಲಿ ಎಂದಿಗೂ ಹಣದ ಕೊರೆತೆ ಇರೋದಿಲ್ಲ, ಜೊತೆಗೆ ಧನ ಯೋಗ ಉಂಟಾಗುತ್ತದೆ.
ತುಂಡಾದ, ಹರಿದ ಫೋಟೋ ಇಡಬೇಡಿ: ಲಕ್ಷ್ಮೀ ದೇವಿಯ ಕೃಪೆ ಮನೆಯಲ್ಲಿ ಸದಾ ಇರಬೇಕು ಎಂದು ನೀವು ಬಯಸಿದರೆ, ಯಾವತ್ತೂ ಹರಿದ, ಅಥವಾ ತುಂಡಾದ ಲಕ್ಷ್ಮೀ ದೇವಿಯ ಫೋಟೋ, ವಿಗ್ರಹ ಮನೆಯಲ್ಲಿ ಇಡಬೇಡಿ. ಇದರಿಂದ ಧನ ಹಾನಿಯಾಗುತ್ತದೆ (money problem).