ರಾತ್ರಿ ಹೊತ್ತು ಬೆಕ್ಕು ಜೋರಾಗಿ ಅತ್ತರೆ ಅಶುಭವೇ?

First Published | Sep 8, 2023, 1:36 PM IST

ಅನೇಕ ಬಾರಿ ಕೆಲವೊಂದು ವಿಲಕ್ಷಣ ಘಟನೆಗಳು ಮನೆಯಲ್ಲಿ ಅಥವಾ ಸುತ್ತಮುತ್ತಲು ಸಂಭವಿಸಲು ಪ್ರಾರಂಭಿಸುತ್ತವೆ, ಇದು ನಮ್ಮ ಮುಂಬರುವ ಜೀವನಕ್ಕೆ ಅನೇಕ ಸೂಚನೆಗಳನ್ನು ನೀಡುತ್ತದೆ. ಅಂತಹ ಕೆಲವು ಘಟನೆಗಳಲ್ಲಿ ಮನೆಯಲ್ಲಿನ ಪ್ರಾಣಿಗಳು ರಾತ್ರಿ ಹೊತ್ತು ಕೂಗುವುದೂ ಇರಬಹುದು. ಇದು ಸಹ ಏನೋ ಚೂಚನೆ ನೀಡುತ್ತೆ. 
 

ಹಿಂದೂ ಧರ್ಮದಲ್ಲಿ (Hindu Religion) ಅನೇಕ ಪ್ರಾಣಿಗಳನ್ನು ನೋಡುವುದು ನಮ್ಮ ಮುಂಬರುವ ಜೀವನಕ್ಕೆ ಕೆಲವು ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತದೆ.ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ದಾಟಿದರೆ, ಅದನ್ನು ಅಪಶಕುನ ಎನ್ನಲಾಗುತ್ತೆ. ಬೆಕ್ಕು ದಾಟಿದ ಮಾರ್ಗದಲ್ಲಿ ಸ್ವಲ್ಪ ಸಮಯದವರೆಗೆ ಹೋಗಬಾರದು ಎಂದು ನಂಬಲಾಗಿದೆ.
 

ಅನೇಕ ಸ್ಥಳಗಳಲ್ಲಿ ಇದು ಮೂಢನಂಬಿಕೆಯೊಂದಿಗೆ ಸಂಬಂಧ ಹೊಂದಿದ್ದರೂ, ಜ್ಯೋತಿಷ್ಯದ ವಿಷಯಕ್ಕೆ ಬಂದಾಗ, ಇದು ವಿಭಿನ್ನ ಅರ್ಥಗಳನ್ನು ಹೊಂದಿರಬಹುದು. ಬೆಕ್ಕು ರಸ್ತೆ ದಾಟಿದರೆ, ರಾತ್ರಿ ಹೊತ್ತು ಅಳುತ್ತಿದ್ದರೆ, ದಾರಿಯಲ್ಲಿ ಬೆಕ್ಕು ಸತ್ತದ್ದು (dead cat) ಕಾಣುವುದು ಒಂದು ವಿಷಯಗಳನ್ನು ಸೂಚಿಸುತ್ತದೆ. ಬೆಕ್ಕು ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಅಳುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿ ಕೆಲವು ಅಶುಭ ಚಿಹ್ನೆಗಳನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ. ಅದರ ಬಗ್ಗೆ ತಿಳಿಯೋಣ. 
 

Tap to resize

ರಾತ್ರಿಯಲ್ಲಿ ಬೆಕ್ಕು ಅಳುವುದು ಅಶುಭವೇ?
ಜ್ಯೋತಿಷ್ಯವನ್ನು ನಂಬಿದರೆ, ರಾತ್ರಿಯಲ್ಲಿ ಬೆಕ್ಕು ಅಳುವುದು (Crying cat) ಅಶುಭ ಘಟನೆಯ ಸಂಕೇತ. ಬೆಕ್ಕನ್ನು ಯಾವಾಗಲೂ ಬರುವ ಯಾವುದೇ ಶುಭ ಅಥವಾ ಅಶುಭ ಘಟನೆಯ ಸೂಚನೆ ನೀಡುವ ಪ್ರಾಣಿಯಾಗಿ ನೋಡಲಾಗುತ್ತದೆ. ರಾತ್ರಿಯಲ್ಲಿ ಮನೆಯ ಸುತ್ತಲೂ ಬೆಕ್ಕು ಅಳುವ ಶಬ್ದವನ್ನು ಕೇಳಿದರೆ, ಅದು ನಿಮ್ಮ ಮನೆಯಲ್ಲಿ ಅಥವಾ ಸುತ್ತಮುತ್ತ ಕೆಟ್ಟ ಘಟನೆ ನಡೆಯಲಿದೆ ಎಂದು ತೋರಿಸುತ್ತದೆ, ಅಲ್ಲದೇ ಅದು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯದ ಪ್ರಕಾರ, ರಾತ್ರಿಯಲ್ಲಿ ಬೆಕ್ಕು ಅಳುವುದು ದುರಾದೃಷ್ಟದ ಸಂಕೇತ. ಇದು ಸಣ್ಣ ಘಟನೆಯಿಂದ ಹಿಡಿದು ದೊಡ್ಡ ವಿಪತ್ತಿನವರೆಗೆ ಯಾವುದೇ ಆಗಿರಬಹುದು. ಈ ಸಮಯದಲ್ಲಿ ಬೆಕ್ಕು ಅಳುವುದರ ಅರ್ಥ ಏನಾಗಿರಬಹುದು ಅನ್ನೋದನ್ನು ತಿಳಿಯೋಣ. 
 

ಮಧ್ಯರಾತ್ರಿಯಲ್ಲಿ ಬೆಕ್ಕು ಮನೆ ಸುತ್ತಲೂ ಅಳುತ್ತಿದ್ದರೆ, ಅದು ಅಶುಭ ಸಂಕೇತ. ವಾಸ್ತವವಾಗಿ, ಮಧ್ಯರಾತ್ರಿಯಲ್ಲಿ ಬೆಕ್ಕು ಅಳುತ್ತಿರುವುದು ಅದಕ್ಕೆ ಹತ್ತಿರವಾದ ವ್ಯಕ್ತಿಯ ಸಾವನ್ನು (death of person) ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. 
 

ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಂದರೆ ಮಧ್ಯರಾತ್ರಿಯಿಂದ ಬೆಳಿಗ್ಗೆಯವರೆಗೆ ಬೆಕ್ಕು ಅಳುತ್ತಿದ್ದರೆ, ಅದು ಮನೆಗೆ ಆರ್ಥಿಕ ನಷ್ಟದ ಸಂಕೇತವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಆರ್ಥಿಕ ನಷ್ಟದ (economical problem) ಚಿಹ್ನೆಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಇದರಿಂದ ಹಣದ ನಷ್ಟವನ್ನು ತಪ್ಪಿಸಬಹುದು.   
 

ಮನೆಯಲ್ಲಿ ಕಪ್ಪು ಬೆಕ್ಕಿನ ಅಳುವಿಕೆ ಏನನ್ನು ಸೂಚಿಸುತ್ತದೆ? 
ಕಪ್ಪು ಬೆಕ್ಕು (black cat) ರಾತ್ರಿ ಹೊತ್ತು ಮನೆಗೆ ಬಂದು ಅಳುತ್ತಿದ್ದರೆ, ಅದು ನಿಮ್ಮ ಜೀವನಕ್ಕೆ ಕೆಲವು ನಕಾರಾತ್ಮಕ ವಿಷಯಗಳ ಸಂಕೇತವಾಗಿರಬಹುದು. ಕಪ್ಪು ಬಣ್ಣ ನಕಾರಾತ್ಮಕತೆಯ ಸಂಕೇತವೆಂದು ಹೇಳಲಾಗುತ್ತೆ. ಅಂದಹಾಗೆ, ರಾತ್ರಿಯಲ್ಲಿ ಬೆಕ್ಕಿನ ಹೊರತಾಗಿ, ನಾಯಿ ಕೂಗುವುದು ಸಹ ಅಶುಭದ ಸಂಕೇತವಾಗಿದೆ ಮತ್ತು ಇದು ಆಕಸ್ಮಿಕ ಘಟನೆಯ ಬಗ್ಗೆಯೂ ಹೇಳುತ್ತದೆ. 

ಬೆಕ್ಕು ಅಡ್ಡ ದಾಟುವುದರ ಅರ್ಥವೇನು? 
ಬೆಕ್ಕು ರಾಹುವಿನ ಸವಾರಿ ಎನ್ನಲಾಗುತ್ತೆ. ನೀವು ಎಲ್ಲಿಗಾದರು ಹೊರಟಿರುವಾಗ ಬೆಕ್ಕು ಅಡ್ಡ ದಾಟಿದರೆ, ರಾಹುವಿನ ನೆರಳು (Shadow of Rahu) ನಿಮ್ಮ ಜೀವನದ ಮೇಲೆ ಬೀಳಲಿದೆ ಎಂದು ಅರ್ಥಮಾಡಿಕೊಳ್ಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವುದೇ ಕೆಲಸಕ್ಕಾಗಿ ಮನೆಯನ್ನು ತೊರೆಯುತ್ತಿದ್ದರೂ, ಆ ಕೆಲಸ ಪೂರ್ಣಗೊಳ್ಳೋದಿಲ್ಲ. ಹಾಗಾಗಿ ಇದನ್ನು ಅಶುಭ ಎನ್ನಲಾಗುತ್ತೆ.

ವಿಜ್ಞಾನದ ಪ್ರಕಾರ ಏನನ್ನು ಸೂಚಿಸುತ್ತದೆ? 
ನಾವು ಜ್ಯೋತಿಷ್ಯವನ್ನು ಹೊರತುಪಡಿಸಿ ವಿಜ್ಞಾನವನ್ನು ನಂಬಿದರೆ, ಬೆಕ್ಕಿನ ಅಳುವುದು ನಿಮಗೆ ಯಾವುದೇ ಅಶುಭ ಘಟನೆಯ ಸಂಕೇತವಲ್ಲ, ಆದರೆ ಬೆಕ್ಕು ಒಂಟಿತನ ಅಥವಾ ಕೆಲವು ದೈಹಿಕ ಸಮಸ್ಯೆಯಿಂದಾಗಿ (Physicall Issues) ಅಳುತ್ತಿರಬಹುದು. ಆದಾಗ್ಯೂ, ವಿಜ್ಞಾನದ ಕೆಲವು ಸಂಶೋಧನೆಗಳು ಬೆಕ್ಕು ಮುಂದೆ ಆಗಬಲ್ಲ, ಸಮಸ್ಯೆಯನ್ನು ಅರಿತುಕೊಂಡು ಅಳುತ್ತದೆ ಎನ್ನುತ್ತವೆ. 

Latest Videos

click me!